ನಟಿ ವಿಜಯಲಕ್ಷ್ಮಿ ನೆರವಿಗೆ ಧಾವಿಸಿದ ಫಿಲ್ಮ್ ಚೇಂಬರ್

Public TV
1 Min Read
actress Vijayalakshmi

ಬೆಂಗಳೂರು: ಕಳೆದ ರಾತ್ರಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ನಟಿ ವಿಜಯಲಕ್ಷ್ಮಿಯವರ ಆರೋಗ್ಯವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರು ವಿಚಾರಿಸಿ ಅವರ ನೆರವಿಗೆ ಧಾವಿಸಿದ್ದಾರೆ.

ತೀವ್ರ ಜ್ವರ ಹಾಗೂ ಅಧಿಕ ರಕ್ತದೊತ್ತಡದಿಂದಾಗಿ ನಟಿ ವಿಜಯಲಕ್ಷ್ಮಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆ ಖರ್ಚು ಬರಿಸುವ ಹಣವಿಲ್ಲದೆ ಚಿತ್ರರಂಗದ ಸಹಾಯ ಕೋರಿ ವಿಜಯಲಕ್ಷ್ಮಿ ಅವರ ಸಹೋದರಿ ಉಷಾರಾಣಿ ಪಬ್ಲಿಕ್ ಟಿವಿಯಲ್ಲಿ ವಿನಂತಿ ಮಾಡಿಕೊಂಡಿದ್ದರು.

actress Vijayalakshmi 1

ಉಷಾರಾಣಿಯವರ ಮನವಿಯನ್ನು ಪಬ್ಲಿಕ್ ಟಿವಿ ವರದಿ ಮಾಡಿತ್ತು. ಕೂಡಲೇ ಸ್ಪಂದಿಸಿರುವ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಭಾ.ಮಾ ಹರೀಶ್, ನಿರ್ಮಾಪಕ ಸುನಿಲ್ ಕುಮಾರ್, ಶಿಲ್ಪಾ ಶ್ರೀನಿವಾಸ್, ಗಿರೀಶ್ ವಿಜಯಲಕ್ಷ್ಮೀಯವರನ್ನ ಬೇಟಿ ಮಾಡಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಭರವಸೆ ಕೊಟ್ಟಿದ್ದಾರೆ.

ವಿಜಯಲಕ್ಷ್ಮಿಯವರ ಆರೋಗ್ಯಕ್ಕೆ ಸಹಾಯವಲ್ಲದೇ ಚೇತರಿಸಿಕೊಂಡ ಬಳಿಕ ಮತ್ತೆ ಬಣ್ಣ ಹಚ್ಚ ಬೇಕೆಂಬ ಅವರ ಆಸೆಯನ್ನ ಈಡೆರಿಸಲು ಫಿಲ್ಮ್ ಚೇಂಬರ್ ಸಹಾಯ ಮಾಡುತ್ತದೆ ಎಂಬ ಭರವಸೆಯನ್ನು ನೀಡಿದ್ದಾರೆ.

ಸಾಹಸಸಿಂಹ ವಿಷ್ಣುವರ್ಧನ್, ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಸೇರಿದಂತೆ ಅನೇಕ ಸೂಪರ್ ಸ್ಟಾರ್ ನಟರೊಂದಿಗೆ ನಾಯಕಿಯಾಗಿ ವಿಜಯಲಕ್ಷ್ಮಿ ಅವರು ನಟಿಸಿದ್ದರು.

vijayalakshmi 2

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article