ಬೆಂಗಳೂರು: ಚುನಾವಣೆ ಮುಗಿದ ಬೆನ್ನಲ್ಲೇ ಕರ್ನಾಟಕದಲ್ಲಿ ವಿದ್ಯುತ್ ದರ ಏರಿಕೆಯಾಗಲಿದೆ. ನಾಳೆ ಹನ್ನೊಂದು ಗಂಟೆಗೆ ಹೊಸ ವಿದ್ಯುತ್ ದರವನ್ನು ಕರ್ನಾಟಕ ವಿದ್ಯುತ್‍ಚ್ಛಕ್ತಿ ನಿಯಂತ್ರಣ ಮಂಡಳಿ(ಕೆಇಆರ್‍ಸಿ) ಪ್ರಕಟಿಸಲಿದೆ.
ಚುನಾವಣೆ ನೀತಿ ಸಂಹಿತೆ ಜಾರಿಯಾಗಿದ್ದ ಕಾರಣ ದರ ಏರಿಕೆಯನ್ನು ತಡೆ ಹಿಡಿಯಲಾಗಿತ್ತು. ಆದರೆ ಮತದಾನದ ಮುನ್ನಾ ದಿನ ದರ ಏರಿಕೆಯಾಗುವುದು ಅಧಿಕೃತವಾಗಿದೆ.
ಐದು ವಿದ್ಯುತ್ ಸರಬಾರಾಜು ಕಂಪನಿಗಳು 83 ಪೈಸೆಯಿಂದ 1.20 ರೂ. ವರೆಗೆ ದರ ಏರಿಕೆಯ ಪ್ರಸ್ತಾಪವನ್ನು ಮುಂದಿಟ್ಟಿದೆ. ಈ ಪ್ರಸ್ತಾಪವನ್ನು ಆಧಾರಿಸಿ ವಿದ್ಯುತ್ ನಿಯಂತ್ರಣ ಆಯೋಗದಿಂದ ಪರಿಷ್ಕೃತ ದರಪಟ್ಟಿಯನ್ನು ಪ್ರಕಟಿಸಲಿದೆ.