ಬೆಂಗಳೂರು: ರಾಜ್ಯದ ಒಟ್ಟು 222 ಮತಕ್ಷೇತ್ರ ಚುನಾವಣೆ ಮುಕ್ತಾಯವಾಗಿದ್ದು ಕೆಲ ಕ್ಷೇತ್ರಗಳಲ್ಲಿ ಭಾರೀ ಪ್ರಮಾಣದ ಮತದಾನವಾಗಿದೆ. ಹೀಗಾಗಿ ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಮತದಾನವಾಗಿರುವ ಟಾಪ್ -20 ಕ್ಷೇತ್ರಗಳ ಮಾಹಿತಿ ಇಲ್ಲಿದೆ
ವಿಜಯಪುರ ಜಿಲ್ಲೆಯ ಬಬಲೇಶ್ವರವು ಸಾಮಾನ್ಯ ವರ್ಗದ ಮತಕ್ಷೇತ್ರವಾಗಿದ್ದು 2013ರಲ್ಲಿ 73.00% ಹಾಗೂ ಈ ಬಾರಿ 80.46% ರಷ್ಟು ಮತದಾನವಾಗಿದೆ. ಒಟ್ಟು 7.46% ರಷ್ಟು ಏರಿಕೆಯಾಗಿದೆ. 2013ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂ.ಬಿ.ಪಾಟೀಲ್ ಜಯಗಳಿಸಿದ್ದು, ಈ ಬಾರಿಯೂ ಸ್ಪರ್ಧೆಯಲ್ಲಿದ್ದಾರೆ.
Advertisement
ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಹುಬ್ಬಳ್ಳಿ-ಧಾರವಾಡ ಪೂರ್ವ ಮತಕ್ಷೇತ್ರದಿಂದ 2013ರಲ್ಲಿ 62.60% ಹಾಗೂ ಈ ಬಾರಿ 70.02% ರಷ್ಟು ಮತದಾನವಾಗಿದ್ದು, 7.42% ಹೆಚ್ಚಳವಾಗಿದೆ. 2013ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ಅಬ್ಬಯ್ಯ ಸ್ಥಾನ ಪಡೆದಿದ್ದು, ಮತ್ತೇ ಕಣದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮಾನ್ಯ ವರ್ಗದ ಮೈಸೂರಿನ ನರಸಿಂಹರಾಜ ಮತಕ್ಷೇತ್ರದಲ್ಲಿ ಈ ಬಾರಿ 6.73% ಮತದಾನ ಜಾಸ್ತಿಯಾಗಿದೆ. 2013ರಲ್ಲಿ 54.70% ಮತ್ತು 2018ರಲ್ಲಿ 61.43% ರಷ್ಟು ಮತದಾನವಾಗಿದೆ. ಕಳೆದ ಬಾರಿ ಕಾಂಗ್ರೆಸ್‍ನಿಂದ ತನ್ವೀರ್ ಸೇಠ್ ಅವರು ಜಯಗಳಿಸಿದ್ದು, ಮತ್ತೇ ಕಣದಲ್ಲಿದ್ದಾರೆ.
Advertisement
Advertisement
ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ 2013ರಲ್ಲಿ 74.20% ಆಗಿದ್ದರೆ ಈ ಬಾರಿ 80.33% ಮತದಾನವಾಗಿದೆ. ಸಾಮಾನ್ಯ ಕ್ಷೇತ್ರವಾಗಿರುವ ಇಲ್ಲಿ ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿ ಶಾರದಾ ಮೋಹನ್ ಶೆಟ್ಟಿ ಆಯ್ಕೆಯಾಗಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಕಳೆದ ಬಾರಿ ಕಾಂಗ್ರೆಸ್ ಜಯಗಳಿಸಿತ್ತು. ಆ ವರ್ಷ 75.50% ಮತ್ತು ಈ ಬಾರಿ 81.50% ಮತದಾನವಾಗಿದ್ದು, 6.00% ಹೆಚ್ಚಳವಾಗಿದೆ.
Advertisement
ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ 2013ರಲ್ಲಿ 71.00% ಮತ್ತು ಈ ಬಾರಿ 76.95% ಮತದಾನವಾಗಿದ್ದು, 5.95% ಹೆಚ್ಚಳವಾಗಿದೆ. 2013ರಲ್ಲಿ ಪಕ್ಷೇತರ ಅಭ್ಯರ್ಥಿ ಜಯಗಳಿಸಿದ್ದರು. ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಮಂಡ್ಯದ ಮಳವಳ್ಳಿ ಮತಕ್ಷೇತ್ರದಲ್ಲಿ, ಕಳೆದ ವಾರಿ ಕಾಂಗ್ರೆಸ್ ಜಯಗಳಿಸಿತ್ತು. ಆ ವರ್ಷ 74.90% ಮತ್ತು 2018ರಲ್ಲಿ 80.74% ಮತದಾನವಾಗಿದೆ. ಒಟ್ಟು ಈ ಬಾರಿ 5.84% ರಷ್ಟು ಏರಿಕೆಯಾಗಿದೆ.
ಮಂಡ್ಯ ಜಿಲ್ಲೆಯ ನಾಗಮಂಗಲವು 2013ರಲ್ಲಿ 81.50% ಮತದಾನವಾಗಿತ್ತು. ಈ ಬಾರಿ ಅದಕ್ಕೆ 5.61% ಸೇರಿಕೊಂಡು ಒಟ್ಟು 87.11% ಆಗಿದೆ. 2013ರಲ್ಲಿ ಇಲ್ಲಿ ಜೆಡಿಎಸ್ ಜಯಗಳಿಸಿತ್ತು. ಚಾಮರಾಜನಗರದ ಹಾನೂರಿನಲ್ಲಿ 2013ರಲ್ಲಿ 76.10% ಮತ್ತು ಈ ಬಾರಿ 81.61% ಮತದಾನವಾಗಿದ್ದು, 5.51% ರಷ್ಟು ಹೆಚ್ಚಳ ಕಂಡಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಇಲ್ಲಿ ಗೆದ್ದಿತ್ತು.
ಚಿತ್ರದುರ್ಗ ಜಿಲ್ಲೆಯ ಸಾಮಾನ್ಯ ವರ್ಗದ ಕ್ಷೇತ್ರವಾದ ಹೊಸದುರ್ಗದಲ್ಲಿ, ಈ ಬಾರಿ ಮತದಾನವು 5.48% ರಷ್ಟು ಹೆಚ್ಚಳವಾಗಿದೆ. 2013ರಲ್ಲಿ 79.80% ಮತ್ತು 2018ರಲ್ಲಿ 85.28% ಮತದಾನವಾಗಿತ್ತು. 201ರಲ್ಲಿ ಕಾಂಗ್ರೆಸ್ ಜಯಸಾಧಿಸಿತ್ತು. ವಿಜಯಪುರ ನಗರ ಕ್ಷೇತ್ರದಲ್ಲಿ 5.38% ಹೆಚ್ಚು ಮತದಾನ ದಾಖಲಾಗಿದೆ. 2013ರಲ್ಲಿ 55.90% ಹಾಗೂ ಈ ಬಾರಿ 61.28% ಮತ ಚಲಾವಣೆಯಾಗಿದೆ. 2013ರಲ್ಲಿ ಕಾಂಗ್ರೆಸ್ ಗೆದ್ದುಕೊಂಡಿತ್ತು.
ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಕೊಪ್ಪಳದ ಕನಕಗಿರಿಯಲ್ಲಿ 2013ರಲ್ಲಿ 73.60% ಮತದಾನವಾಗಿತ್ತು. ಆದರೆ, ಈ ಬಾರಿ 78.98% ಮತ ಚುಲಾವಣೆಯಾಗುವ ಮೂಲಕ 5.38% ರಷ್ಟು ಏರಿಕೆಯಾಗಿದೆ. 2013ರಲ್ಲಿ ಕಾಂಗ್ರೆಸ್ ಜಯಗಳಿಸಿತ್ತು. ತುಮಕೂರು ಜಿಲ್ಲೆಯ ಶಿರಾ ಸಾಮಾನ್ಯ ವರ್ಗದ ಕ್ಷೇತ್ರವಾಗಿದೆ. 2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಆ ವರ್ಷ 79.10% ಮತದಾನವಾಗಿದ್ದರೆ, 2018ರಲ್ಲಿ 84.41% ಮತದಾನವಾಗಿದೆ. 5.31% ರಷ್ಟು ಹೆಚ್ಚಳ ಕಂಡಿದೆ. 2013 ಕಾಂಗ್ರೆಸ್‍ನಿಂದ ಟಿಬಿ ಜಯಚಂದ್ರ ಜಯಗಳಿಸಿದ್ದರು.
ಉಡುಪಿಯ ಕಾಪು ಕ್ಷೇತ್ರ ಸಾಮಾನ್ಯ ವರ್ಗ ತೆರೆದಿದ್ದು, 2013ರಲ್ಲಿ ಕಾಂಗ್ರೆಸ್ ಜಯಗಳಿಸಿತ್ತು. ಆ ವರ್ಷ ಹಾಗೂ 2018ರಲ್ಲಿ ಕ್ರಮವಾಗಿ 73.30% ಮತ್ತು 78.51% ರಷ್ಟು ಮತದಾನವಾಗಿತ್ತು. ಹೀಗಾಗಿ 5.21% ರಷ್ಟು ಏರಿಕೆಯನ್ನು ಕಂಡಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಕ್ಷೇತ್ರದಲ್ಲಿ ಕಳೆದ ಬಾರಿಗಿಂತ 5.18% ಮತದಾನ ಹೆಚ್ಚಳವಾಗಿದೆ. 2013ರಲ್ಲಿ 74.20% ಮತದಾನ ನಡೆದಿದ್ದರೆ ಈ ಬಾರಿ 79.38% ಮತದಾನವಾಗಿದೆ. 2013ರಲ್ಲಿ ಕಾಂಗ್ರೆಸ್ ಜಯಗಳಿಸಿತ್ತು.
ಉತ್ತರ ಕನ್ನಡ ಜಿಲ್ಲೆಯ ಶಿರಶಿಯಲ್ಲಿ 2013ರಲ್ಲಿ 75.30% ಹಾಗೂ 2018ರಲ್ಲಿ 80.45% ಮತದಾನವಾಗಿದ್ದು, 5.15% ಹೆಚ್ಚಳವಾಗಿದೆ. ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ಆಯ್ಕೆಯಾಗಿದ್ದರು. ಸಾಮಾನ್ಯ ವರ್ಗದ ಹುಬ್ಬಳ್ಳಿ-ಧಾರವಾಡ ಕೇಂದ್ರ ಮತಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿ ಜಯಗಳಿಸಿತ್ತು. ಆ ವರ್ಷ ಕೇವಲ 55.30% ಮತದಾನವಾಗಿತ್ತು. ಆದರೆ, 2018ರಲ್ಲಿ 60.17% ಗೆ ಏರಿಕೆಯಾಗಿದೆ. ಇದನ್ನು ಓದಿ : ಕರ್ನಾಟಕ ಚುನಾವಣೆ – ಕಡಿಮೆ ಮತದಾನವಾಗಿರುವ ಟಾಪ್-20 ಕ್ಷೇತ್ರಗಳು
ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ 2013 ಹಾಗೂ 2018ರಲ್ಲಿ ಕ್ರಮವಾಗಿ 79.60% ಮತ್ತು 84.43% ಮತದಾನವಾಗಿದೆ. ಕಳೆದ ಬಾರಿಗಿಂತ 4.83% ರಷ್ಟು ಏರಿಕೆಯಾಗಿದೆ. 2013ರಲ್ಲಿ ಜೆಡಿಎಸ್ ಇಲ್ಲಿ ಗೆದ್ದುಕೊಂಡಿತ್ತು. ತುಮಕೂರಿನ ಮಧುಗಿರಿಯಲ್ಲಿ ಈ ಬಾರಿಗಿಂದ ಈ ಬಾರಿ 4.81% ರಷ್ಟು ಜಾಸ್ತಿ ಮತದಾನವಾಗಿದೆ. 2013ರಲ್ಲಿ 80.70% ಆಗಿದ್ದರೆ 2018ರಲ್ಲಿ 85.51% ಮತದಾನವಾಗಿದೆ. ಕಳೆದ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್ ಜಯಗಳಿಸಿತ್ತು.
ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಕಲಬುರ್ಗಿ ಜಿಲ್ಲೆಯ ಸುರಪುರದಲ್ಲಿ 2013ರಲ್ಲಿ ಕಾಂಗ್ರೆಸ್ ಜಯಗಳಿಸಿತ್ತು. ಆ ವರ್ಷ 66.40% ಹಾಗೂ 2018ರಲ್ಲಿ 71.20% ಮತದಾನವಾಗಿದ್ದು, ಈ ಬಾರಿ 4.80% ರಷ್ಟು ಏರಿಕೆಯಾಗಿದೆ.