ಬೆಂಗಳೂರು: ವಲಸಿಗ ಶಾಸಕರನ್ನು (MLA) ವಾಪಸ್ ಕೈ ಪಾಳಯಕ್ಕೆ ಸೆಳೆಯಲು ಹೋಗಿ ಕಾಂಗ್ರೆಸ್ (Congress) ಕೈ ಸುಟ್ಟುಕೊಂಡಿದೆ. ವಲಸಿಗರ ಪೈಕಿ ಮೂವರು ಮಾತ್ರ ವಾಪಸ್ ಬರುವ ಆಸಕ್ತಿ ತೋರಿದ್ದಾರೆ. ಉಳಿದವರದು ಸದ್ಯಕ್ಕೆ ಬೇಡ ‘ಕೈ’ ಸಹವಾಸ ಎಂದು ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗಿದೆ.
ಇಷ್ಟು ದಿನ ವಲಸಿಗರ ಸಹವಾಸವೇ ಬೇಡ ಎಂದವರು ಈಗ ವಲಸಿಗರಿಗೆ ಮಣೆ ಹಾಕುವ ಪ್ರಯತ್ನ ಮಾಡಿದ್ದಾರೆ. ಓಡೋ ಕುದುರೆ ಖರೀದಿಗೆ ಹೋಗಿ ತೆವಳೋ ಕುದುರೆ ಖರೀದಿ ಸಂಕಷ್ಟ ‘ಕೈ’ ಪಾಳಯಕ್ಕೆ ಎದುರಾಗಿದೆ. ಬರುತ್ತೇನೆ ಎಂದವರ ಪೈಕಿ ಒಬ್ಬರದು ರಿಟೈರ್ಡ್ ಮೆಂಟ್ ಎಂಟ್ರಿ. ಉಳಿದಿಬ್ಬರು ಬರುತ್ತೇನೆ ಎನ್ನುತ್ತಿರುವವರಿಗೆ ಕ್ಷೇತ್ರದಲ್ಲಿ ಇಂಟರ್ನಲ್ ಡಿಸ್ಪ್ಯೂಟ್ ಸಮಸ್ಯೆ ಸಹ ಎದುರಾಗಿದೆ ಎನ್ನಲಾಗಿದೆ.
Advertisement
Advertisement
ಓಡೋ ಕುದುರೆ ಖರೀದಿಗೆ ಹೋಗಿ ಕುಂಟು ಕುದುರೆ ಖರೀದಿಯ ಅನಿವಾರ್ಯತೆ ಕೈ ಪಾಳಯಕ್ಕೆ ಎದುರಾಗಿದೆ. ಕಾಂಗ್ರೆಸ್, ಜೆಡಿಎಸ್ (JDS) ತೊರೆದು ವಲಸೆ ಹೋದವರ ಪೈಕಿ ಬಹುತೇಕರು ಗೆಲ್ಲುವ ಕುದುರೆಗಳೇ. ಏನಾದರೂ ಮಾಡಿ ಗೆಲ್ಲುವ ಕುದುರೆಯನ್ನ ವಾಪಾಸ್ ಕರೆತರಲು ‘ಕೈ’ ನಾಯಕರು ವಲಸಿಗ ಆಪರೇಷನ್‌ಗೆ ಮುಂದಾಗಿದ್ದರು. ಆದರೆ ಕೈ ನಾಯಕರ ಪ್ರಯತ್ನಕ್ಕೆ ದೊಡ್ಡ ಮಟ್ಟಿನ ಯಶಸ್ಸು ಸಿಕ್ಕಿಲ್ಲ ಎನ್ನಲಾಗಿದೆ. ಇದನ್ನೂ ಓದಿ: 112 ಅಡಿ ಎತ್ತರದ ಆದಿಯೋಗಿ ಪ್ರತಿಮೆ ನೋಡಲು ಬರೋ ಭಕ್ತರಿಂದ ಹಣ ವಸೂಲಿ – ಗ್ರಾಪಂ ವಿರುದ್ಧ ಆರೋಪ
Advertisement
ವಲಸಿಗರ ಪೈಕಿ ಮೂವರಷ್ಟೆ ಮರಳಿ ಗೂಡಿಗೆ ಬರುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ. ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ (H Vishwanath) ಮರಳಿ ಮಾತೃಪಕ್ಷ ಕಾಂಗ್ರೆಸ್ ಸೇರ್ಪಡೆ ಒಲವು ತೋರಿದ್ದರೂ ಅವರದು ರಿಟೈರ್ಡ್ ಪಾಲಿಟಿಕ್ಸ್ ಎನ್ನಲಾಗಿದೆ. ಇನ್ನು ಪರಿಷತ್ ಸದಸ್ಯರಾಗಿ ಸಚಿವರಾದ ಎಂಟಿಬಿ ನಾಗರಾಜ್ (MTB Nagaraj) ಸಹ ವಾಪಸ್ ಬರಲು ಸಿದ್ಧರಿದ್ದಾರೆ ಎನ್ನಲಾಗಿದೆ. ಆದರೆ ಅವರಿಗೆ ಕ್ಷೇತ್ರ ಖಾಲಿ ಇಲ್ಲ, ಇಷ್ಟಪಟ್ಟರೆ ಬೇರೆ ಕ್ಷೇತ್ರದ ಭರವಸೆ ನೀಡಲಾಗಿದೆ ಎನ್ನಲಾಗಿದೆ.
Advertisement
ಕೆ.ಆರ್.ಪೇಟೆಯಲ್ಲಿ ಸಚಿವ ನಾರಾಯಣ್ ಗೌಡರು (Narayana Gowda) ಸಹ ‘ಕೈ’ ಪಾಳಯಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ. ಆದರೆ ಅವರಿಗೆ ಕೆ.ಆರ್.ಪೇಟೆ ‘ಕೈ’ ಟಿಕೆಟ್ ನೀಡಿಕೆ ಪ್ರಸ್ತಾಪಕ್ಕೆ ಪಕ್ಷದಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ ಎನ್ನಲಾಗಿದೆ. ಹೀಗೆ ವಲಸಿಗರೆಂಬ ಗೆಲುವಿನ ಕುದುರೆ ಆಪರೇಷನ್‌ಗೆ ಮುಂದಾದ ‘ಕೈ’ ನಾಯಕರಿಗೆ ಗೆಲುವಿನ ಕುದುರೆಗಳು ಕೈತಪ್ಪಿ ನಿರಾಸೆಯಾಗಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಭವಾನಿಯವರಿಗೆ ಬಿಜೆಪಿ ಸೇರಲು ಆಹ್ವಾನಿಸಿದ್ದು ತಮಾಷೆಗೆ; ಅವರಿಗೆ ಹಾಸನ ಸುರಕ್ಷಿತ ಅಲ್ಲ – ಸಿ.ಟಿ.ರವಿ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k