ರಾಮನಗರ: ಬೊಂಬೆನಗರಿ ಚನ್ನಪಟ್ಟಣ (Channapatna) ಘಟಾನುಘಟಿ ನಾಯಕರು ಸ್ಫರ್ಧಿಸುವ ಕ್ಷೇತ್ರ. ರಾಜಕೀಯ ಜಿದ್ದಾಜಿದ್ದಿಗೆ ಹೆಸರಾಗಿರುವ ಚನ್ನಪಟ್ಟಣದಲ್ಲಿ ಜೆಡಿಎಸ್ (JDS) ಹಾಗೂ ಬಿಜೆಪಿ (BJP) ಮಧ್ಯೆ ನೇರ ಹಣಾಹಣಿ ಇದೆ. ಕ್ಷೇತ್ರದಲ್ಲಿ ಸಾಂಪ್ರದಾಯಿಕ ಮತಗಳಿದ್ರೂ ಸೂಕ್ತ ಅಭ್ಯರ್ಥಿಗಳಿಲ್ಲದೇ ಬಡವಾಗಿರೋ ಕಾಂಗ್ರೆಸ್‍ಗೆ ಈ ಬಾರಿ ಬೂಸ್ಟರ್ ಡೋಸ್ ನೀಡಲು ಕೈ ನಾಯಕರು ತಂತ್ರಗಾರಿಕೆ ನಡೆಸುತ್ತಿದ್ದಾರೆ. ಚನ್ನಪಟ್ಟಣದಿಂದ ಅಭ್ಯರ್ಥಿಯಾಗಿ ನಟಿ ರಮ್ಯಾರನ್ನು ಕಣಕ್ಕಿಳಿಸುವ ಮೂಲಕ ಜೆಡಿಎಸ್, ಬಿಜೆಪಿಗೆ ಕೌಂಟರ್ ಕೊಡಲು ಸಿದ್ಧತೆ ನಡೆಸುತ್ತಿದ್ದಾರೆ. ಈ ವಿಚಾರ ಕ್ಷೇತ್ರದೆಲ್ಲೆಡೆ ಚರ್ಚೆ ಆಗ್ತಿದ್ದು, ರಾಜಕೀಯ ಸಂಚಲನ ಮೂಡಿಸಿದೆ.
Advertisement
ಕ್ಷೇತ್ರದಲ್ಲಿ ಈಗಾಗಲೇ ಜೆಡಿಎಸ್‍ನಿಂದ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಹಾಗೂ ಬಿಜೆಪಿಯಿಂದ ಎಂಎಲ್‍ಸಿ ಸಿ.ಪಿ. ಯೋಗೇಶ್ವರ್ ಕಣಕ್ಕಿಳಿಯುವುದು ಖಚಿತವಾಗಿದೆ. ಈ ಹಿನ್ನೆಲೆ ಜೆಡಿಎಸ್ ಹಾಗೂ ಬಿಜೆಪಿ ಆರ್ಭಟದ ನಡುವೆ ಪಕ್ಷವನ್ನು ಸಮರ್ಥವಾಗಿ ಕಟ್ಟಲು ಡಿ.ಕೆ.ಸಹೋದರರು ಚಿಂತನೆ ನಡೆಸಿ ಉದ್ಯಮಿ ಪ್ರಸನ್ನ ಅವರನ್ನು ಪಕ್ಷಕ್ಕೆ ಕರೆತಂದಿದ್ದರು. ಪಕ್ಷಕ್ಕೆ ಬಂದಾಗಿನಿಂದಲೂ ಪ್ರಸನ್ನ ತಾಲೂಕಿನಲ್ಲಿ ಸಕ್ರಿಯವಾಗಿದ್ದರು. ಆದರೆ ಸ್ಥಳೀಯ ಕಾಂಗ್ರೆಸ್ಸಿಗರ ನಡುವೆ ವೈಮನಸ್ಸು ಸೃಷ್ಟಿಯಾಗಿ ಪ್ರಸನ್ನ ಅವರು ಪಕ್ಷ ಸಂಘಟನೆಯಿಂದ ಕೆಲ ದಿನ ದೂರ ಉಳಿದಿದ್ದರು. ಅಲ್ಲದೇ ಪ್ರಸನ್ನ ಗೌಡ ಅವರಿಗೆ ಕಾಂಗ್ರೆಸ್ ಟಿಕೆಟ್ ಬಹುತೇಕ ಖಚಿತವಾಗಿದ್ದರೂ ಕೂಡಾ ಮಾಜಿ ಸಂಸದೆ ರಮ್ಯಾ (Ex MP Ramya) ಹೆಸರು ಚಾಲ್ತಿಗೆ ಬಂದಿರೋದು ಕುತೂಹಲ ಹೆಚ್ಚಿಸಿದೆ. ಇದನ್ನೂ ಓದಿ: ಶಾಸಕನಾದ್ರೆ ಕೋಲಾರ ಸಂಪೂರ್ಣ ಅಭಿವೃದ್ಧಿ ಮಾಡ್ತೇನೆ: ಸಿದ್ದರಾಮಯ್ಯ
Advertisement
Advertisement
ಆದರೆ ಕುಮಾರಸ್ವಾಮಿ ಮತ್ತು ಯೋಗೇಶ್ವರ್ (C P Yogeshwar) ಎದುರು ಪ್ರಬಲ ಅಭ್ಯರ್ಥಿಯೊಬ್ಬರ ಹುಡುಕಾಟದಲ್ಲಿರುವ ಕಾಂಗ್ರೆಸ್ ಮಾಜಿ ಸಂಸದೆ ರಮ್ಯಾ ಅವರನ್ನು ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆಸಿದೆ. ಇದರಿಂದ ಪಕ್ಷದ ಸಾಂಪ್ರದಾಯಿಕ ಮತಗಳ ಜೊತೆಗೆ ಮಹಿಳಾ ಮತದಾರರನ್ನು ಸೆಳೆಯಬಹುದು ಎನ್ನುವ ಲೆಕ್ಕಾಚಾರದೊಂದಿಗೆ ರಮ್ಯಾಗೆ ಟಿಕೆಟ್ ನೀಡ್ತಾರೆ ಎನ್ನಲಾಗ್ತಿದೆ. ಚನ್ನಪಟ್ಟಣದಿಂದ ರಮ್ಯಾ ಸ್ಪರ್ಧೆ ಊಹಾಪೋಹ ಎಂದು ನಿಖಿಲ್ ಹೇಳಿದ್ರೆ, ಅತ್ತ ಸ್ಪರ್ಧೆ ಮಾಡಿದ್ರೆ ತಲೆಕೆಡಿಸಿಕೊಳ್ಳಲ್ಲ ಅಂತ ಮಾಜಿ ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.
Advertisement
ಒಟ್ಟಾರೆ ಜಿದ್ದಾಜಿದ್ದಿಯ ಕ್ಷೇತ್ರ ಚನ್ನಪಟ್ಟಣದಲ್ಲಿ ನಟಿ ರಮ್ಯಾ ಹೆಸರು ತೂರಿ ಬಂದಿರೋದ್ರಿಂದ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡಲಿದೆ. ಆದ್ರೆ ಮೂವರಿಗೂ ಸ್ಟಾರ್ ವ್ಯಾಲ್ಯೂ ಇರೋದ್ರಿಂದ ಚುನಾವಣಾ ಕಣ ಮತ್ತಷ್ಟು ರಂಗೇರಲಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k