ಬೆಳಗಾವಿ: ಚುನಾವಣೆ ಹತ್ತಿರವಾಗುತ್ತಿದಂತೆ ಬೆಳಗಾವಿ ಚುನಾವಣಾ ಪ್ರಚಾರ (Belagavi Election Campaign) ದಿನದಿಂದ ದಿನಕ್ಕೆ ಕಾವು ಪಡೆದುಕೊಂಡಿದೆ. 18 ಕ್ಷೇತ್ರವುಳ್ಳ ಬೆಳಗಾವಿಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರ ಜಿದ್ದಾಜಿದ್ದಿನ ಕಣವಾಗಿದೆ. ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಅವರನ್ನ ಮಣಿಸಲೇಬೇಕೆಂದು ಪಣ ತೊಟ್ಟಿರುವ ಸಾಹುಕಾರ ಸರಣಿ ಸಭೆ ಮಾಡುವ ಮೂಲಕ ಚುನಾವಣಾ ಕಾವು ಕದನ ಕುತೂಹಲ ಮೂಡಿಸಿದ್ದಾರೆ.
Advertisement
ಮುಂಬರುವ ಚುನಾವಣೆಯಲ್ಲಿ ಶತಾಯಗತಾಯ ಲಕ್ಷ್ಮಿ ಹೆಬ್ಬಾಳ್ಕರ್ ಸೋಲಿಸಲು ಶಪಥ ಮಾಡಿರುವ ರಮೇಶ್ ಜಾರಕಿಹೊಳಿ (Ramesh Jarakiholi), ಹಿರೇಬಾಗೇವಾಡಿ ಗ್ರಾಮದಲ್ಲಿ ಅಭಿಮಾನದ ಕಾರ್ಯಕರ್ತರ ಸಮಾವೇಶ ಹೆಸರಿನಲ್ಲಿ ಬೃಹತ್ ಸಮಾವೇಶ ಆಯೋಜಿಸಿದ್ದರು. ಈ ವೇಳೆ ಭಾಷಣವುದಕ್ಕೂ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಮಾಜಿ ಸಚಿವ ರಮೇಶ್ ಜಾರಕಿಹೊಳಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
Advertisement
Advertisement
ಸುಳೇಭಾವಿ ಬಳಿಕ ಹಿರೇಬಾಗೇವಾಡಿ ಗ್ರಾಮದಲ್ಲಿ ಸಮಾವೇಶ ನಡೆಸಿದ ರಮೇಶ್ ಜಾರಕಿಹೊಳಿ (Ramesh Jarakiholi), ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದಾರೆ. ಅಷ್ಟಲ್ಲದೇ ಡಿ.ಕೆ.ಶಿವಕುಮಾರ್ (D.K Shivakumar) ವಿರುದ್ಧವೂ ಟೀಕಾ ಪ್ರಹಾರ ನಡೆಸಿದ್ದು, ಇವರಿಂದಾಗಿ ನಾನು ಮಂತ್ರಿ ಸ್ಥಾನ ಕಳೆದುಕೊಂಡಿದ್ದೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಇದು ನನ್ನ ಕೊನೆಯ ಚುನಾವಣೆ: ರಮೇಶ್ ಜಾರಕಿಹೊಳಿ
Advertisement
ಇದು ಬಹಳ ಮುಖ್ಯ ಚುನಾವಣೆಯಾಗಿದ್ದು, ಯಾವ ಆಮಿಷಕ್ಕೂ ಬಲಿಯಾಗಬೇಡಿ. ನಾವು ಅವರಂತೆ ಕೇಸ್ ಹಾಕುವಷ್ಟು ಸಣ್ಣತನಕ್ಕೆ ಇಳಿಯಲ್ಲ ಎಂದು ತಮ್ಮ ವಿರುದ್ಧ ಮತಲಂಚದ ದೂರು ಕೊಟ್ಟಿದ್ದನ್ನ ಉಲ್ಲೇಖಿಸಿದ್ದಾರೆ. ಹಾಗೆ ಅವರೇನು ಮಾಡ್ತಾರೆ ಅದಕ್ಕಿಂತ ಎರಡು ಪಟ್ಟು ಮಾಡೋಕೆ ನಮ್ಮವರು ರೆಡಿ ಇದ್ದಾರೆ ಎಂದಿದ್ದಾರೆ. ಇನ್ನು ರಾಜ್ಯಕ್ಕೆ ಒಳ್ಳೆಯದು ಆಗಬೇಕು ಅಂದ್ರೆ ಈ ಕ್ಯಾಂಡಿಡೇಟ್ ಸೋಲಬೇಕು ಎಂದು ಕರೆ ರಮೇಶ್ ಜಾರಕಿಹೊಳಿ ಕರೆ ಕೊಟ್ಟಿದ್ದಾರೆ.
ಸದ್ಯ ಈ ತಿಂಗಳು 24ಕ್ಕೆ ಉಚಗಾಂವದಲ್ಲಿ ಬಿಜೆಪಿ ಸಮಾವೇಶ ನಡೆಯಲಿದ್ದು, ಅಲ್ಲಿ ಪಕ್ಷದ ವರಿಷ್ಠರು ಯಾರಿಗೆ ಟಿಕೆಟ್ ಕೊಡ್ತಾರೆ ಅವರಿಗಾಗಿ ದುಡಿಯೋಣವೆಂದು ರಮೇಶ್ ಜಾರಕಿಹೊಳಿ ಕಾರ್ಯಕರ್ತರು ಹಾಗೂ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಈ ಮೂಲಕ ಸಿಡಿ ಹಗರಣದಲ್ಲಿ ಸಿಲುಕಿ ಮಂತ್ರಿ ಸ್ಥಾನ ಕಳೆದುಕೊಂಡ ಜಾರಕಿಹೊಳಿ ನಾಗರಹಾವಿನಂತೆ ಸೇಡು ತೀರಿಸಿಕೊಳ್ಳಲು ಸರಣಿ ಸಮಾವೇಶಗಳ ಕಸರತ್ತು ನಡೆಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k