ಮಂಡ್ಯ: ಸಂಸದೆ ಸುಮಲತಾ (MP Sumalatha Ambareesh) ಯಾವ ಪಕ್ಷ ಸೇರುತ್ತಾರೆ ಎಂಬ ಚರ್ಚೆಗಳು ಜೋರಾಗಿದೆ. ಈ ಹೊತ್ತಿನಲ್ಲಿಯೇ ಸಂಸದೆ ಸುಮಲತಾ ಬೆಂಬಲಿಗರು ಹಾಗೂ ಅಭಿಮಾನಿಗಳು ಮಹತ್ವದ ಸಭೆಯನ್ನ ಮಂಗಳವಾರ ಕರೆದಿದ್ದು, ಎಲ್ಲರ ಚಿತ್ತ ಆ ಸಭೆಯತ್ತ ನೆಟ್ಟಿದೆ.
Advertisement
ಸುಮಲತಾ ಕಳೆದ ಲೋಕಸಭಾ ಚುನಾವಣೆ (Loksabha Election) ಯಲ್ಲಿ ಪಕ್ಷೇತರವಾಗಿ ಸ್ಪರ್ಧೆ ಮಾಡಿದ್ದರು. ಬಿಜೆಪಿ, ರಾಜ್ಯ ರೈತ ಸಂಘ ಬಹಿರಂಗವಾಗಿಯೇ ಬೆಂಬಲ ಸೂಚಿಸಿದ್ರು. ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಹಿಂದೆ ನಿಂತು ಸುಮಲತಾ ಗೆಲುವಿಗೆ ಕಾರಣರಾಗಿದ್ದರು. ಸದ್ಯ ಮುಂದಿನ ವಿಧಾನಸಭೆ ಚುನಾವಣೆ (Vidhanasabha Election) ಯಲ್ಲಿ ಸ್ಪರ್ಧಿಸುವ ಮೂಲಕ ರಾಜ್ಯ ರಾಜಕಾರಣಕ್ಕೆ ಸುಮಲತಾ ಎಂಟ್ರಿ ಕೊಡ್ತಾರಾ ಎಂಬ ಚರ್ಚೆಯಾಗ್ತಿದೆ. ಇದನ್ನೂ ಓದಿ: ಸಿದ್ದರಾಮಯ್ಯಗೆ ರಾಯಚೂರಿನಿಂದ ಸ್ಪರ್ಧಿಸಲು ಆಹ್ವಾನ – ಆಸ್ತಿ ಮಾರಲು ಮುಂದಾದ ಅಭಿಮಾನಿ
Advertisement
Advertisement
ಆ ಚರ್ಚೆಗೆ ಪುಷ್ಠಿ ನೀಡುವಂತೆ ಸಂಸದೆ ಸುಮಲತಾ ಹೇಳಿಕೆಗಳನ್ನು ನೀಡುತ್ತಿದ್ದು, ಸಮಯ ಬಂದಾಗ ನಿರ್ಧಾರ ಮಾಡುತ್ತೇನೆ ಎನ್ನುತ್ತಿದ್ದಾರೆ. ಯಾವಾಗ ಸಂಸದೆ ಸುಮಲತಾ ಆ ಹೇಳಿಕೆ ಕೊಟ್ಟರು ಇದೀಗ ಅವರ ಬೆಂಬಲಿಗರು ಸಭೆ ನಡೆಸಲು ತೀರ್ಮಾನಿಸಿದ್ದಾರೆ.
Advertisement
ನಾಳೆ (ಮಂಗಳವಾರ ಬೆಳಗ್ಗೆ) 11 ಗಂಟೆಗೆ ಸುಮಲತಾ ಬೆಂಬಲಿಗರಾದ ಹನಕೆರೆ ಶಶಿಕುಮಾರ್, ಬೇಲೂರು ಸೋಮಶೇಖರ್ ನೇತೃತ್ವದಲ್ಲಿ ಮಂಡ್ಯದ ಕರ್ನಾಟಕ ಸಂಘದ ಸಭಾಂಗಣದಲ್ಲಿ ಸಭೆ ನಡೆಸಲಾಗುತ್ತಿದೆ. ಈ ಸಭೆಯಲ್ಲಿ ಸಂಸದೆ ಸುಮಲತಾ ರಾಜ್ಯ ರಾಜಕಾರಣಕ್ಕೆ ಬರಬೇಕು, ಬರೋದಿದ್ದರೆ ಯಾವ ಪಕ್ಷವನ್ನ ಸೇರ್ಪಡೆಯಾಗಬೇಕು ಎಂದು ಚರ್ಚಿಸಲಿದ್ದಾರೆ. ಬಳಿಕ ಸಂಸದೆ ಸುಮಲತಾಗೆ ಸಭೆಯ ನಿರ್ಣಯವನ್ನ ಮಂಡಿಸಿ ಅಂತಿಮವಾಗಿ ಸುಮಲತಾ ತಮ್ಮ ನಿರ್ಧಾರವನ್ನ ತಿಳಿಸಲಿದ್ದಾರೆ ಎನ್ನಲಾಗುತ್ತಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k