Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಜೆಡಿಎಸ್ ವಿರುದ್ಧ ಮಾತಾಡಿದ್ರೆ ಸುಮಲತಾ ಲೀಡರ್ ಆಗಬಹುದು ಅಂದುಕೊಂಡಿದ್ದಾರೆ: ಪುಟ್ಟರಾಜು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಜೆಡಿಎಸ್ ವಿರುದ್ಧ ಮಾತಾಡಿದ್ರೆ ಸುಮಲತಾ ಲೀಡರ್ ಆಗಬಹುದು ಅಂದುಕೊಂಡಿದ್ದಾರೆ: ಪುಟ್ಟರಾಜು

Districts

ಜೆಡಿಎಸ್ ವಿರುದ್ಧ ಮಾತಾಡಿದ್ರೆ ಸುಮಲತಾ ಲೀಡರ್ ಆಗಬಹುದು ಅಂದುಕೊಂಡಿದ್ದಾರೆ: ಪುಟ್ಟರಾಜು

Public TV
Last updated: January 28, 2023 12:03 pm
Public TV
Share
3 Min Read
SUMALATHA PUTTARAJU
SHARE

ಮಂಡ್ಯ: ಸಕ್ಕರೆ ನಾಡಿನಲ್ಲಿ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಹಾಗೂ ಶಾಸಕ ಸಿ.ಎಸ್ ಪುಟ್ಟರಾಜು (C S Puttaraju) ಅವರ ವಾಕ್ ಸಮರ ಮುಂದುವರಿದಿದ್ದು, ಪುಟ್ಟರಾಜು ವಿರುದ್ಧ ವಾಗ್ದಾಳಿ ಮಾಡಿದ್ದ ಸುಮಲತಾಗೆ ಮಂಡ್ಯ ಜಿಲ್ಲೆಯ ಜನ ಸಾಕಷ್ಟು ಜನರಿಗೆ ಬುದ್ಧಿ ಕಲಿಸಿದ್ದಾರೆ. ನಿಮಗೂ ಸಹ ಬುದ್ಧಿ ಕಲಿಸುತ್ತಾರೆ ಎನ್ನುವ ಮೂಲಕ ಶಾಸಕ ಪುಟ್ಟರಾಜು ಮತ್ತೆ ತಿರುಗೇಟು ನೀಡಿದ್ದಾರೆ.

SUMALATHA AMBAREESH

ತಾಕತ್ ಇದ್ರೆ ಗಣಿಗಾರಿಕೆ ವಿಚಾರದಲ್ಲಿ ರಾಜಧನ ವಂಚಿಸುತ್ತಿರುವವರ ಹೆಸರು ಹೇಳಬೇಕು, ಸುಮ್ಮನೆ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದು ಪ್ರಾರಂಭದಲ್ಲಿ ಪುಟ್ಟರಾಜು ಸವಾಲು ಹಾಕಿದ್ರು. ಇದಕ್ಕೆ ಪೂರಕವಾಗಿ ಸಂಸದೆ ಸುಮಲತಾ ಅಂಬರೀಶ್ ನನ್ನ ತಾಕತ್ತನ್ನು ನನ್ನ ಚುನಾವಣೆಯಲ್ಲಿ ತೋರಿಸಿದ್ದೇನೆ ಮತ್ತೆ ತೋರಿಸುವ ಅಗತ್ಯವಿಲ್ಲ ಎನ್ನುವ ಮೂಲಕ ಸುಮಲತಾ ಖಡಕ್ ಆಗಿ ಉತ್ತರ ನೀಡಿದ್ದರು.

mnd puttaraju 1

ಇದೀಗ ಸುಮಲತಾ ಹೇಳಿಕೆಗೆ ಪುಟ್ಟರಾಜು ಕೌಂಟರ್ ನೀಡಿದ್ದಾರೆ. ಮಂಡ್ಯ ಜಿಲ್ಲೆಯ ಜನ ಬಹಳಷ್ಟು ರಾಜಕಾರಣಿಗಳಿಗೆ ಬುದ್ಧಿ ಕಲಿಸಿದ್ದಾರೆ ಸೋಲು ಗೆಲುವನ್ನು ಎಲ್ಲರಿಗೂ ಜನ ತೋರಿಸಿದ್ದಾರೆ, ಭಾಷಣ ಮಾಡುವ ಅಗತ್ಯ ಬೇಡ. ನಾನು ಎಂಪಿ (Member Of Parliament) ಯಾಗಿದ್ದೆ, ದಿಶಾ ಸಭೆಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳನ್ನು ವಿಚಾರಿಸೋದು ಅಷ್ಟೇ ಆದ್ರೆ ಸಭೆಯಲ್ಲಿ ಬೇರೆ ವಿಚಾರಗಳನ್ನು ಮಾತಾಡುತ್ತೀರಾ. ಪರ್ಟಿಕ್ಯುಲರ್ ಆಗಿ ಏನಾದರೂ ಇದ್ದರೆ ಹೆಸರು ಹೇಳಿ ಮಾತಾಡಬೇಕು ಪಾಂಡವಪುರ (Pandavapura) ಕ್ಕೆ ಬಂದಾಗಲೇ ರಾಜಧನವನ್ನು ನಾನು ಕಡಿದು ಎತ್ತಾಕಿದ್ದೇನೆ ಎನ್ನುತ್ತಾರೆ.

Sumalatha Ambareesh

ನನ್ನ ಕ್ಷೇತ್ರದಲ್ಲಿ ಬಂದು ರಾಜಧನ ಏನೋ ಆಗಿದೆ ಅಂದ್ರೆ ಯಾರಿಗೆ ಅವರು ಮಾತನಾಡೋದು ಹಾಗೆ ಮಾತನಾಡಿದ್ರೆ ಅದು ನನಗೆ ತಾನೇ. ಅದಕ್ಕೆ ನಾನು ತಾಕತ್ ಇದ್ರೆ ಹೆಸರು ಬಹಿರಂಗಪಡಿಸಬೇಕು ಎಂದು ಹೇಳಿದ್ದೇನೆ. ಈಗಲೂ ಕೇಳುತ್ತೇನೆ ತಾಕತ್ ಇದ್ರೆ ಹೆಸರು ಬಹಿರಂಗ ಪಡಿಸಬೇಕು. ನಾನು ಗಣಿ ಇಲಾಖೆಗೆ ಹೋಗಿ ನೋಡುವ ಕೆಲಸ ನನ್ನದು ಅಲ್ಲ ಆರೋಪ ಮಾಡಿರೋದು ನೀವು, ನೀವು ಹೋಗಿ ನೋಡಿ. ಸರ್ಕಾರ ಇದೆ ತಪ್ಪು ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತದೆ ಎಂದರು. ಇದನ್ನೂ ಓದಿ: ಎಲ್ಲಾ ಹಗರಣವನ್ನು ಬಿಚ್ಚಿಡುತ್ತೇನೆ – ಮಾಧುಸ್ವಾಮಿ ವಿರುದ್ಧ ಸಿಡಿದೆದ್ದ ಮಾಜಿ ಶಾಸಕ ಸುರೇಶ್ ಬಾಬು

PUTTARAJU

ನೀವು ಚುನಾವಣೆ ಹೋಗಬೇಕು, ಯಾವ ಪಾರ್ಟಿಯಲ್ಲಿ ನಿಲ್ಲುತ್ತೀರಾ ಎಂದು ಹೇಳಬೇಕು ಎಲ್ಲಿ ಏನೇನು ರಾಜಕಾರಣ ಮಾಡ್ತಾ ಇದೀರಾ ಎಂದು ಗೊತ್ತು. ಯಾವ ಪಕ್ಷದವರು ಏನು ಹೇಳಬೇಕು ಎಲ್ಲಾ ಹೇಳಿದ್ದಾರೆ. ಬಿಜೆಪಿ ಅವರ ಬಳಿ ಏನು ಕೇಳಿದ್ದಾರೆ, ಅವರು ಏನ್ ರಿಜೆಕ್ಟ್ ಮಾಡಿದ್ದಾರೆ ಎಲ್ಲಾ ಗೊತ್ತು. ಮಂಡ್ಯ ಜಿಲ್ಲೆಯ ಜನ ಅಂಬರೀಶ್ ಅಣ್ಣನಿಗೂ ಬುದ್ಧಿ ಕಲಿಸಿದ್ದಾರೆ, ನನ್ನನ್ನು 2 ಸಲ ಸೋಲಿಸಿದ್ದಾರೆ. ಜೆಡಿಎಸ್‍ನ್ನು ದೂರಿದರೆ ಲೀಟರ್ ಅಂತಾ ಹೇಳ್ತಾರೆ ಅಂತಾ ಸುಮಲತಾ ಅಂದುಕೊಂಡಿದ್ದಾರೆ. ಮಂಡ್ಯ ಜನ ಒಂದು ಅಂಬರೀಶ್ ಅಣ್ಣನ ಅಭಿಮಾನಕ್ಕೆ ಗೆಲ್ಲಿಸಿದ್ದಾರೆ ಸುಮಲತಾ ಹೆಸರಿಗಾಗಿ ಜನರು ಗೆಲ್ಲಿಸಿಲ್ಲ. ಮುಂದೆ ಇವರು ಮಾಡಿರುವ ಕೆಲಸಕ್ಕೆ ಮಂಡ್ಯ ಜಿಲ್ಲೆಯ ಜನ ತೋರಿಸುತ್ತಾರೆ ಇವರು ಮಾಡಿರುವ ಕೆಲಸಕ್ಕೆ ಜನರೇ ಸರ್ಟಿಫಿಕೇಟ್ ಕೊಡ್ತಾರೆ. ಅವರ ಬಗ್ಗೆ ಮಾತಾಡಿದ್ರೆ ನಮಗೆ ಮೈಲೇಜ್ ಬರಲ್ಲ ನಮ್ಮ ಬಗ್ಗೆ ಮಾತನಾಡಿ ಸುಮಲತಾ ಮೈಲೇಜ್ ತೆಗೆದುಕೊಳ್ಳುತ್ತಿದ್ದಾರೆ. ನಮಗೆ ಮಂಡ್ಯದಲ್ಲಿ ದೇವೇಗೌಡರು, ಕುಮಾರಣ್ಣನ ಗುಣಗಾನ ಮಾಡಿದ್ರೆ ಮೈಲೇಜ್ ಬರುತ್ತದೆ. ಇವರ ಬಗ್ಗೆ ಮಾತನಾಡಿದ ಮೈಲೇಜ್ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಜೆಡಿಎಸ್ ಬಗ್ಗೆ ಮಾತಾನಾಡಿದ್ರೆ ನನ್ನ ಲೀಡರ್ ಮಾಡ್ತಾರೆ ಎಂದುಕೊಂಡಿದ್ದಾರೆ.

JDS AND CONGRESS

ರಾಜ್ಯದಲ್ಲಿ 40% ಸರ್ಕಾರ ಎಂದು ಹೇಳಲಾಗುತ್ತೆ, ಇದರ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ ಬರೀ ಇಲ್ಲಸಲ್ಲದ ನಾಟಕಗಳನ್ನು ಮಾಡಿಕೊಂಡು ಮಾತಾಡಿದ್ರೆ ಪ್ರಯೋಜನವಿಲ್ಲ. ಸದಾ ಸುದ್ದಿಯಲ್ಲಿ ಇರಬೇಕು ಎಂದು ಜೆಡಿಎಸ್ ಬಗ್ಗೆ ಸುಮಲತಾ ಮಾತಾನಾಡುತ್ತಾರೆ. ಇದಕ್ಕೆ ಕಾಲ ಸನಿಹಕ್ಕೆ ಬಂದಿದೆ, ಜನರೇ ಉತ್ತರ ಕೊಡ್ತಾರೆ. ಯಾವ ಚುನಾವಣೆಗೆ ನಿಲ್ಲುತ್ತೇನೆ ಎಂದು ಹೇಳಬೇಕು ಅದನ್ನು ಬಿಟ್ಟು ನಮ್ಮ ಬಗ್ಗೆ ಏಕೆ ಮಾತಾಡಬೇಕು. ಮಂಡ್ಯ ಜಿಲ್ಲೆಯ ಜನ ದೇವೇಗೌಡ (HD Devegowda) ಕುಟುಂಬದ ಮೇಲೆ ಇಟ್ಟಿರುವ ಪ್ರೀತಿ ಇವರಿಗೆ ಏನು ಗೊತ್ತು. ಸೆರೆಗೊಡ್ಡಿ ಮತಕೇಳಿದ್ರು ಅಂತಾ ಜಿಲ್ಲೆಯ ಜನ ಅನುಕಂಪದಲ್ಲಿ ಅಂಬರೀಶ್ ಅಣ್ಣನ ಮುಖ ನೀಡಿ ಮತ ಹಾಕಿದ್ರು. ಇವರು ಮಾಡಿರುವ ಕೆಲಸವನ್ನು ಜನ ತೋರಿಸುತ್ತಾರೆ, ಬರಲಿ ಈ ಸಲ ಹಳ್ಳಿಗೆ ಜನರೇ ಹೇಳುತ್ತಾರೆ ಎಂದು ಪುಟ್ಟರಾಜು ಹೇಳಿದ್ದಾರೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

TAGGED:jdsmandyaPuttarajuSumalathaಜೆಡಿಎಸ್ಪುಟ್ಟರಾಜುಮಂಡ್ಯಸುಲಮತಾ
Share This Article
Facebook Whatsapp Whatsapp Telegram

Cinema news

YASH 5
ಮುಂಬೈ ಏರ್‌ಪೋರ್ಟ್‌ನಲ್ಲಿ ಕ್ಯಾಮೆರಾ ಕಣ್ಣಿಗೆ ಬಿದ್ದ ರಾಕಿಭಾಯ್
Cinema Sandalwood
TVK Vijay
ಕರೂರು ಕಾಲ್ತುಳಿತ ಪ್ರಕರಣ – 7 ಗಂಟೆಗೂ ಹೆಚ್ಚು ಕಾಲ ನಟ ವಿಜಯ್‌ಗೆ CBI ಗ್ರಿಲ್
Bengaluru City Cinema Latest Sandalwood Top Stories
Toxic
ಯಶ್ ʻಟಾಕ್ಸಿಕ್ʼ ಟೀಸರ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು!
Bengaluru City Cinema Districts Karnataka Latest Sandalwood Top Stories
Karikaada
ʻಕರಿಕಾಡʼ ಸಿನಿಮಾದ ಮಾದಕ ಸಾಂಗ್‌ಗೆ ಸೊಂಟ ಬಳುಕಿಸಿದ ಕೃತಿ ವರ್ಮಾ
Cinema Latest Sandalwood

You Might Also Like

Gavi Gangadhareshwara Temple
Bengaluru City

ಸಂಕ್ರಾತಿಯಂದು ಗವಿಗಂಗಾಧರನಿಗೆ ಭಾಸ್ಕರನ ನಮನ – 2 ನಿಮಿಷಗಳ ಕಾಲ ನಡೆಯಲಿದೆ ಸೂರ್ಯ ಪೂಜೆ

Public TV
By Public TV
9 minutes ago
iran burns as protests rage against khamenei 350 mosques were burned
Latest

ಖಮೇನಿ ವಿರುದ್ಧ ಸಿಟ್ಟು – 350ಕ್ಕೂ ಹೆಚ್ಚು ಮಸೀದಿಗಳಿಗೆ ಬೆಂಕಿ

Public TV
By Public TV
34 minutes ago
Rahul Gandhi 3
Districts

ಇಂದು ಮೈಸೂರಿಗೆ ರಾಹುಲ್ ಗಾಂಧಿ – ಅಧಿಕಾರ ಹಸ್ತಾಂತರ ಹೈಡ್ರಾಮಾಗೆ ಸಿಗುತ್ತಾ ಕ್ಲೈಮ್ಯಾಕ್ಸ್?

Public TV
By Public TV
48 minutes ago
daily horoscope dina bhavishya
Astrology

ದಿನ ಭವಿಷ್ಯ 13-01-2026

Public TV
By Public TV
1 hour ago
Bangladesh
Latest

ಬಾಂಗ್ಲಾದಲ್ಲಿ ಮುಂದುವರಿದ ಹಿಂದೂಗಳ ಹತ್ಯೆ ಸರಣಿ – ಆಟೋ ಡ್ರೈವರ್‌, ಗಾಯಕ ಪ್ರೊಲೊಯ್ ಚಾಕಿ ಹತ್ಯೆ

Public TV
By Public TV
9 hours ago
Dharwad 2
Dharwad

ಹಾಡಹಗಲೇ ಇಬ್ಬರು ಮಕ್ಕಳ ಅಪಹರಣ – ಮರಳಿ ಪಾಲಕರ ಮಡಿಲು ಸೇರಿದ ಪುಟಾಣಿಗಳು!

Public TV
By Public TV
9 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?