ಮಂಡ್ಯ: ಚುನಾವಣಾ ಹೊಸ್ತಿಲಲ್ಲಿ ಬಿಜೆಪಿ ಹೈಕಮಾಂಡ್ (BJP HighCommand) ಮಂಡ್ಯ ಉಸ್ತುವಾರಿ ವಿಚಾರಕ್ಕೆ ಎಡವಟ್ಟು ಮಾಡಿಕೊಂಡಂತಿದೆ. ಮಂಡ್ಯ ಜಿಲ್ಲಾ ಉಸ್ತುವಾರಿ ವಹಿಸಿಕೊಳ್ಳಲು ಸಚಿವರ ಹಿಂದೇಟು ಹಾಕುತ್ತಿದ್ದು, ಅನಿವಾರ್ಯವಾಗಿ ಅಶ್ವಥ್ ನಾರಾಯಣ್ (Ashwath Narayan) ಹೆಗಲಿಗೆ ಉಸ್ತುವಾರಿ ಹೊಣೆ ಬೀಳಲಿದೆ ಎನ್ನಲಾಗುತ್ತಿದೆ.
Advertisement
ಕಳೆದ ತಿಂಗಳು ಗೋಪಾಲಯ್ಯ (Gopalaiah) ಬದಲು ಆರ್. ಅಶೋಕ್ (R Ashok) ಗೆ ಮಂಡ್ಯ ಉಸ್ತುವಾರಿ ವಹಿಸಲಾಗಿತ್ತು. ಆದರೆ ಗೋ ಬ್ಯಾಕ್ ಅಶೋಕ್ ಅಭಿಯಾನದ ಬಳಿಕ ಉಸ್ತುವಾರಿ ಜವಾಬ್ದಾರಿ ಬೇಡ ಎಂದು ಅಶೋಕ್ ಹೇಳುತ್ತಿದ್ದರೆ, ಇತ್ತ ಮಂಡ್ಯ ಉಸ್ತುವಾರಿ ವಹಿಸಿಕೊಳ್ಳಲು ಯಾವೊಬ್ಬ ಸಚಿವರು ಮುಂದೆ ಬರುತ್ತಿಲ್ಲ. ಹಿಂದೆ ಉಸ್ತುವಾರಿ ಆಗಿದ್ದ ನಾರಾಯಣಗೌಡ (Narayana Gowda), ಗೋಪಾಲಯ್ಯ ಸಹ ನಿರುತ್ಸಾಹ ತೋರಿದ್ದಾರೆ. ಇದನ್ನೂ ಓದಿ: ಹೆಚ್‍ಡಿಕೆ ಟಕ್ಕರ್ ಕೊಡಲು ಚನ್ನಪಟ್ಟಣದಿಂದ ಕಣಕ್ಕಿಳಿಯುತ್ತಾರಾ ರಮ್ಯಾ?
Advertisement
Advertisement
ಚುನಾವಣೆಗೆ ಕೇವಲ ಒಂದು ತಿಂಗಳಿದ್ದು, ಪಕ್ಷ ಸಂಘಟನೆ ಕಷ್ಟವಾಗಲಿದೆ. ಜಿಲ್ಲಾ ನಾಯಕತ್ವ ತೆಗೆದುಕೊಂಡರೆ ಜಿಲ್ಲೆ ಸುತ್ತಬೇಕು, ಸ್ವಕ್ಷೇತ್ರಕ್ಕೆ ಸಮಯ ಕೊಡಲು ಆಗಲ್ಲ. ತಮ್ಮ ರಾಜಕೀಯ ಭವಿಷ್ಯದ ಹಿತದೃಷ್ಟಿಯಿಂದ ಉಸ್ತುವಾರಿ ಬೇಡ ಎಂದು ಸಚಿವರು ಹೇಳುತ್ತಿದ್ದು, ಕಡೆಯದಾಗಿ ಸಚಿವ ಅಶ್ವಥ್ ನಾರಾಯಣ್‍ಗೆ ಪಟ್ಟ ಕಟ್ಟಲು ಸಿಎಂ ಚಿಂತನೆ ನಡೆಸಿದ್ದಾರೆ ಎನ್ನಲಾಗ್ತಿದೆ.
Advertisement
ಅಲ್ಲದೇ ಪ್ರಬಲ ಒಕ್ಕಲಿಗ ನಾಯಕ, ಡಿಕೆಶಿ (DK Shivakumar), ಹೆಚ್‍ಡಿಕೆ (H D Kumaraswamy) ಸರಿಸಮನಾಗಿ ಪೈಪೋಟಿ ನೀಡುವ ನಾಯಕ ಎನ್ನುವ ಉದ್ದೇಶದಿಂದ ಉಸ್ತುವಾರಿ ಜವಬ್ದಾರಿ ನೀಡಬಹುದಾಗಿದೆ. ಉಸ್ತುವಾರಿ ಚರ್ಚೆ ಬೆನ್ನಲ್ಲೇ ಅಶ್ವಥ್ ನಾರಾಯಣ್ ಇಂದು ಮಂಡ್ಯಗೆ ಭೇಟಿ ನೀಡಲಿದ್ದು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k