ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ತವರೂರಾದ ಮೈಸೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (D.K Shivakumar) ಸದ್ದಿಲ್ಲದೆ ಆಪರೇಷನ್ ಕಾಂಗ್ರೆಸ್ (Congress) ಗೆ ಕೈ ಹಾಕಿದ್ದಾರೆ. ಜೆಡಿಎಸ್ ಹಾಗೂ ಬಿಜೆಪಿ ಬುಟ್ಟಿಯಲ್ಲಿದ್ದ ಸ್ಥಳೀಯ ಪ್ರಾಬಲ್ಯ ಮುಖಂಡರನ್ನು ಕಾಂಗ್ರೆಸ್‍ಗೆ ಕರೆ ತರುವ ಆಪರೇಷನ್ ಅನ್ನು ಸಿದ್ದರಾಮಯ್ಯ ಅನುಪಸ್ಥಿತಿಯಲ್ಲಿ ಶುರು ಮಾಡಿದ್ದಾರೆ.
Advertisement
ಮೈಸೂರು ಭಾಗದಲ್ಲಿ ಕಾಂಗ್ರೆಸ್ ಗಟ್ಟಿ ಮಾಡಲು ಸ್ಥಳೀಯ ಜೆಡಿಎಸ್, ಬಿಜೆಪಿ ನಾಯಕರನ್ನು ಕಾಂಗ್ರೆಸ್‍ಗೆ ತರುವ ಆಪರೇಷನ್ ಅನ್ನು ಸಿದ್ದರಾಮಯ್ಯ ಅನುಪಸ್ಥಿತಿಯಲ್ಲಿ ಡಿಕೆಶಿ ಶುರು ಮಾಡಿದ್ದಾರೆ. ಶತಾಯಗತಯ ಮೈಸೂರು ಭಾಗದ 11 ಕ್ಷೇತ್ರಗಳಲ್ಲಿ ಎಂಟತ್ತು ಕ್ಷೇತ್ರ ಗೆಲ್ಲುವ ಗುರಿ ಇಟ್ಟುಕೊಂಡಿರುವ ಡಿಕೆಶಿ, ಕೆಲ ಕ್ಷೇತ್ರಗಳಲ್ಲಿ ಪಕ್ಷ ಬಲವರ್ಧನೆಗೆ ಜೆಡಿಎಸ್, ಬಿಜೆಪಿ ನಾಯಕರನ್ನು ತಮ್ಮತ್ತ ಸೆಳೆಯುವ ಮೊದಲ ಹಂತದ ಮೀಟಿಂಗ್ ಗಳನ್ನು ನಡೆಸಿದ್ದಾರೆ. ಇದನ್ನೂ ಓದಿ: ಶುಕ್ರವಾರದ್ದು ಚುನಾವಣಾ ಪ್ರಣಾಳಿಕೆ ಬಜೆಟ್ ಎಂದು ನಮಗೆ ಗೊತ್ತಿದೆ: ಡಿ.ಕೆ ಶಿವಕುಮಾರ್
Advertisement
Advertisement
ಮೈಸೂರಿನಲ್ಲಿ ಡಿ.ಕೆ ಶಿವಕುಮಾರ್ ಮೊದಲ ಹಂತದ ಆಪರೇಷನ್‍ಗೆ ಮುನ್ನುಡಿ ಬರೆದಿದ್ದಾರೆ. ಮೈಸೂರು ಜಿಲ್ಲೆಯ ಎಲ್ಲಾ ಕ್ಷೇತ್ರಗಳ ಅತೃಪ್ತ ಮತ್ತು ಅಸಮಾಧಾನಿತ ಬಿಜೆಪಿ, ಜೆಡಿಎಸ್‍ನ ಎರಡನೇ ಹಂತದ ನಾಯಕರ ಪಟ್ಟಿ ಸಂಗ್ರಹಿಸಿ ಇವರ ಸೇರ್ಪಡೆಯಿಂದ ಪಕ್ಷಕ್ಕೆ ಆಗುವ ಲಾಭ-ನಷ್ಟಗಳ ಬಗ್ಗೆ ಸ್ಥಳೀಯ ನಾಯಕರೊಂದಿಗೆ ಚರ್ಚಿಸಿದ್ದಾರೆ. ಒಂದು ವೇಳೆ ಅಂತವರಿಂದ ಪಕ್ಷಕ್ಕೆ ಲಾಭವಾಗುವುದಾದರೆ ತಾವೇ ಖುದ್ದು ಬಿಜೆಪಿ-ಜೆಡಿಎಸ್‍ನ ಎರಡನೇ ಹಂತದ ನಾಯಕರನ್ನು ಆಹ್ವಾನಿಸುತ್ತೇನೆ ಎಂದು ಸ್ಥಳೀಯ ಕೈ ನಾಯಕರಿಗೆ ಹೇಳಿದ್ದಾರೆ. ಅಷ್ಟಲ್ಲದೇ ಈ ಭಾಗದಲ್ಲಿ ಜೆಡಿಎಸ್ ಮುಖಂಡರ ಆಪರೇಷನ್ ಮಾಡುವುದು ಬಹಳ ಮುಖ್ಯ ಎಂಬ ಸಂದೇಶವನ್ನೂ ಕೊಟಿದ್ದಾರೆ ಎನ್ನಲಾಗಿದೆ.
Advertisement
ಹೀಗೆ ಸದ್ದಿಲ್ಲದೇ ಆಪರೇಷನ್‍ಗೆ ಮುಂದಾಗಿರೋ ಡಿಕೆಶಿ ಉದ್ದೇಶ ಕಳೆದ ಬಾರಿ ಚುನಾವಣೆಯಲ್ಲಿ ಜೆಡಿಎಸ್ ಪಾಲಾಗಿರುವ ಕ್ಷೇತ್ರವನ್ನು ಈ ಬಾರಿ ಕೈ ವಶ ಮಾಡಿಕೊಳ್ಳಲೇಬೇಕೆಂಬುದಾಗಿದೆ. ಹಾಗೆ ಕಳೆದ ಬಾರಿ ಬಹು ದೊಡ್ಡ ಆಘಾತದ ರೀತಿ ಕಾಂಗ್ರೆಸ್ ಸೋತಿದ್ದ ಕ್ಷೇತ್ರಗಳಲ್ಲಿ ಈ ಬಾರಿ ದೊಡ್ಡ ಮಟ್ಟದ ಗೆಲವು ಸಾಧಿಸಬೇಕೆಂದು.
ಒಟ್ಟಾರೆ ಕೆಪಿಸಿಸಿ ಅಧ್ಯಕ್ಷರು ಸದ್ದಿಲ್ಲದೆ ಆರಂಭಿಸಿರುವ ಆಪರೇಷನ್‍ಗೆ ಸ್ಥಳೀಯ ಮಟ್ಟದಲ್ಲಿ ಬಿಜೆಪಿ ಹಾಗೂ ಜೆಡಿಎಸ್ (JDS) ನಾಯಕರು ನಿದ್ದೆ ಕೆಡಿಸಿಕೊಂಡಿದ್ದು, ಇದಕ್ಕೆ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್ ಕೊಡ್ತಾರಾ ಅನ್ನೋದೇ ಕುತೂಹಲ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k