ಮಂಡ್ಯ: ಸಕ್ಕರೆ ನಾಡು ಮಂಡ್ಯ (Mandya) ಜಿಲ್ಲೆಯ ಒಕ್ಕಲಿಗರ ಮತದಾರರನ್ನು ಸೆಳೆಯಲೋ ಅಥವಾ ಹೈಕಮಾಂಡ್‍ಗೆ ನಾನು ಸಿಎಂ ಅಭ್ಯರ್ಥಿ ಎಂದು ಪದೇ ಪದೇ ಹೇಳುವ ಉದ್ದೇಶದಿಂದಲೋ ಏನೋ ಮಂಡ್ಯದ ಜನರನ್ನು ನನ್ನ ಕೈ ಬಲ ಪಡಿಸಿ ಎಂದು ಕನಕಪುರದ ಬಂಡೆ ಶಪ ಮಾಡ್ತಾ ಇದ್ದಾರೆ. ಹಾಗಿದ್ರೆ ರಾಜ್ಯ ಕಾಂಗ್ರೆಸ್‍ನ ಟ್ರಬಲ್ ಶೂಟರ್ ಒಕ್ಕಲಿಗರ ಮೇಲೆ ಸಿಎಂ ಅಸ್ತ್ರ ಪ್ರಯೋಗ ಮಾಡ್ತಾ ಇರೋದಾದ್ರು ಯಾಕೆ ಎಂಬುದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ.
Advertisement
ಸಕ್ಕರೆ ನಾಡು ಮಂಡ್ಯದ ರಾಜಕೀಯ ಅಂದ್ರೆ ಕಂಪ್ಲೀಟ್ ಡಿಫರೆಂಟ್. ಮಂಡ್ಯ ಜಿಲ್ಲೆಗೆ ಯಾವ ಪಕ್ಷದ ನಾಯಕರು ಬಂದ್ರು ಸಹ ಮಂಡ್ಯ ಜಿಲ್ಲೆಯಲ್ಲಿ ಯಾವ ಪಕ್ಷಕ್ಕೆ ಅಧಿಕಾರ ಕೊಡ್ತೀರಾ ಆ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೆ ಅಂತಾ ಭಾಷಣ ಮಾಡ್ತಾರೆ. ಅದೇ ನಿಟ್ಟಿನಲ್ಲಿ ಕಳೆದ ಬಾರಿಯ ವಿಧಾನಸಭಾ ಚುನಾವಣೆ (Vidhanasabha Elections) ಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (H.D Kumaraswamy) ಮಂಡ್ಯ ಜಿಲ್ಲೆಯ 7 ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿದ್ರೆ ನಿಮ್ಮ ಮನೆಯ ಮಗ ಸಿಎಂ ಆಗ್ತಾನೆ ಎಂದು ಅಬ್ಬರದ ಪ್ರಚಾರ ನಡೆಸಿದ್ರು. ಅದರಂತೆ ಮಂಡ್ಯ ಜಿಲ್ಲೆಯ ಒಕ್ಕಲಿಗರು ಜೆಡಿಎಸ್ (JDS) ಅಭ್ಯರ್ಥಿಗಳನ್ನು ಹಾಕಿ ಏಳು ಕ್ಷೇತ್ರಗಳಲ್ಲೂ ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಕುಮಾರಸ್ವಾಮಿ ಅವರ ಕೈ ಬಲ ಪಡಿಸಿದ್ರು.
Advertisement
Advertisement
ಕಳೆದ ಬಾರಿಯ ಚುನಾವಣೆಯಲ್ಲಿ ಕುಮಾರಸ್ವಾಮಿ ಮಂಡ್ಯದಲ್ಲಿ ಮಾಡಿದ ಸ್ಟಾಟರ್ಜಿಯನ್ನು ಈ ಬಾರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಮಾಡಲು ಹೊರಟಿದ್ದಾರೆ. ಮಂಡ್ಯ ಜಿಲ್ಲೆಯ ಒಕ್ಕಲಿಗರನ್ನು ಸೆಳೆಯಲು ಸಿಎಂ ಟ್ರಂಪ್ ಕಾರ್ಡ್ ಪ್ಲೇ ಮಾಡಲು ಡಿಕೆಶಿ ಮುಂದಾಗಿದ್ದಾರೆ. ಈ ಭಾಗವಾಗಿ ಮಂಡ್ಯಕ್ಕೆ ಆಗಮಿಸಿದ್ದ ಡಿಕೆಗೆ ಅಭಿಮಾನಿಗಳು ಗೂಳಿ ಗಿಫ್ಟ್ ಕೊಟ್ರು. ಈ ವೇಳೆ ಬಸವಣ್ಣನ ಕಿವಿಯಲ್ಲಿ ತಮ್ಮ ಕೋರಿಕೆ ಹೇಳಿಕೊಂಡಿದ್ದಾರೆ. ಬಸವಣ್ಣನ ಕಿವಿಯಲ್ಲಿ ಮನದಾಳವನ್ನು ಹೇಳಿಕೊಂಡಿರುವುದಾಗಿ ಫೇಸ್‍ಬುಕ್ (Facebook) ಖಾತೆಯಲ್ಲಿ ಹೇಳಿಕೊಂಡಿದ್ದಾರೆ. ಬಸಣ್ಣನ ಕಿವಿಗೆ ಕೋರಿಕೆ ಹೇಳಿದ್ರೆ, ಈಡೇರಿಸುವ ಸಂಪ್ರದಾಯವಿದೆ. ಅದರಂತೆ ಬಸಣ್ಣನ ಕಿವಿಯಲ್ಲಿ ಕೋರಿಕೆ ಹೇಳಿದ್ದಾರೆ. ಆದರೆ ಆ 2 ಸೆಕೆಂಡ್‍ನಲ್ಲಿ ನಾನು ಸಿಎಂ ಆಗಬೇಕು ಅಂತ ಹೇಳಿದ್ರಾ ಅನ್ನೋ ಪ್ರಶ್ನೆ ಮೂಡಿದೆ.
Advertisement
ಮೊನ್ನೆ ನಡೆದ ಕಾಂಗ್ರೆಸ್‍ನ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಸಹ ಡಿಕೆಶಿ ಭಾಷಣದ ವೇಳೆ ಕಳೆದ ಬಾರಿ ಮಂಡ್ಯದ ಜನ ಕುಮಾರಣ್ಣನ ಮೇಲೆ ನಂಬಿಕೆ ಇಟ್ಟು ಗೆಲ್ಲಿಸಿದ್ರಿ. ನಾವು ಅವರನ್ನು ಮುಖ್ಯಮಂತ್ರಿ ಮಾಡಿದ್ದೆವು. ಆದರೆ ಅವರಿಗೆ ಅಧಿಕಾರ ಮಾಡಲು ಆಗಲಿಲ್ಲ. ಈ ಬಾರಿ ನಿಮ್ಮ ಮನೆಯ ಮಗ ನನ್ನನ್ನು ಬೆಂಬಲಿಸಿ, ಮಂಡ್ಯದಲ್ಲಿ 7 ಕ್ಷೇತ್ರಗಳನ್ನು ಗೆಲ್ಲಿಸಿ ನಿಮ್ಮ ಮಗನ ಕೈ ಬಲ ಪಡಿಸಿ ಎಂದು ಡಿಕೆ ಹೇಳಿದ್ದಾರೆ. ಈ ಮೂಲಕ ಡಿ.ಕೆ.ಶಿವಕುಮಾರ್ ಮಂಡ್ಯದ ಒಕ್ಕಲಿಗರಿಗೆ ಸಿಎಂ ಟ್ರಂಪ್ ಕಾರ್ಡ್ ಪ್ಲೇ ಮಾಡಿದ್ದಾರೆ. ಇದನ್ನೂ ಓದಿ: ಕುಂದಾನಗರಿಯಲ್ಲಿ ಬಿಜೆಪಿ ಚಾಣಕ್ಯ- ಪಕ್ಷದಲ್ಲಿನ ಒಳಜಗಳ ಶಮನ ಮಾಡ್ತಾರಾ ಅಮಿತ್ ಶಾ?
ಜೆಡಿಎಸ್‍ಗೆ ವೋಟು ಹಾಕಿದರೆ ಬಿಜೆಪಿಗೆ ಹಾಕಿದಂತೆ ಅಂತ ಡಿಕೆಶಿ ಹೇಳಿಕೆಗೆ ಹೆಚ್‍ಡಿಕೆ ಕಿಡಿಕಾರಿದ್ರು. ಮಂಡ್ಯದಲ್ಲಿ ಇನ್ಯಾರಿಗೆ ವೋಟು ಹಾಕಬೇಕಂತೆ ಅಂತ ವಾಗ್ದಾಳಿ ನಡೆಸಿದ್ರು. ಅತ್ತ ಮಂಡ್ಯದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಜೆಡಿಎಸ್ ಹಾಗೂ ಬಿಜೆಪಿಯನ್ನ ನಂಬಬೇಡಿ. ಸಿದ್ದರಾಮಯ್ಯ ನಮ್ಮ ಸರ್ಕಾರ ಬೀಳಿಸಿದ್ರು ಅಂತ ಹೆಚ್‍ಡಿಕೆ ಹೇಳ್ತಾರೆ. ಹಾಗಾದ್ರೆ ನಿಮ್ಮ ಶಾಸಕರು ಯಾಕೆ ಹೋದ್ರು ಅಂತ ಪ್ರಶ್ನೆ ಮಾಡಿದ್ರು.
ಒಟ್ಟಾರೆ ಡಿಕೆಶಿ ಮಂಡ್ಯದಲ್ಲಿ ಪ್ಲೇ ಮಾಡಿರುವ ಸಿಎಂ ಕಾರ್ಡ್ ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಹಾಗೂ ಮುಂದೆ ಸಿಎಂ ಗಾಧಿಗಾಗಿ ಸಿದ್ದು ಡಿಕೆ ನಡುವಿನ ಬಿರುಕಿಗೆ ಕಾರಣವಾಗುತ್ತಾ ಎನ್ನುವುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ: ಕಾಂಪೌಂಡ್ ಕಟ್ಟೋಕೆ ಹಣ ಕೊಡೋದು ಬಿಡಿ; ಮಕ್ಕಳ ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಿ – ಬೊಮ್ಮಾಯಿ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k