ಹಾಸನ: ವಿಶ್ವಾಸ ಬೆಳೆಸಿ, ವಿಶ್ವಾಸದಿಂದ ನಿಮ್ಮ ಮನಸ್ಸು ಗೆದ್ದು ನಿಮ್ಮನ್ನು ಮತ ಕೇಳುತ್ತೇವೆಯೇ ಹೊರತು ಬಿಹಾರ್ ಅಂತಹ ರಾಜಕಾರಣ ನಾವು ಮಾಡುವುದಿಲ್ಲ ಎಂದು ಪ್ರೀತಂಗೌಡ (Preetam Gowda) ವಿರುದ್ಧ ಪರೋಕ್ಷವಾಗಿ ಭವಾನಿ ರೇವಣ್ಣ (Bhavani Revanna) ಗುಡುಗಿದರು.
ಹಾಸನದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಜೆಡಿಎಸ್ ಅಭ್ಯರ್ಥಿ ಸ್ವರೂಪ್‌ಗೆ ಬೆಂಬಲ ಘೋಷಣೆ ಹಾಗೂ ದೇಣಿಗೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಧಮ್ಕಿಗೆ ನೀವ್ಯಾರು ಹೆದರಬಾರದು, ನಿಮ್ಮ ಎಲ್ಲಾ ಸಮಯದಲ್ಲೂ ನಾವು ಜೊತೆಗೆ ಇರುತ್ತೇವೆ. ನಾವು ಯಾವಾಗ್ಲೂ ಗೂಂಡಾಗಿರಿ ರಾಜಕಾರಣ ಮಾಡಿದವರಲ್ಲ, ವಿಶ್ವಾಸ ಬೆಳೆಸಿ, ವಿಶ್ವಾಸದಿಂದ ನಿಮ್ಮ ಮನಸ್ಸು ಗೆದ್ದು ನಿಮ್ಮನ್ನು ಮತ ಕೇಳುತ್ತೇವೆ ಎಂದರು.
ನೀವೆಲ್ಲಾ ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಸ್ವರೂಪ್‌ಗೆ ಬೆಂಬಲ ಕೊಡುತ್ತೇನೆ ಎಂದು ಹೇಳಿದ್ದೀರಾ. ಒಬ್ಬೊಬ್ಬರು ನೂರು ವೋಟು ಹಾಕಿಸುವ ಶಕ್ತಿ ಇದೆ ಎಂದುಕೊಳ್ಳುತ್ತೇನೆ. ಜೆಡಿಎಸ್‌ಗೆ ಬೆಂಬಲ ನೀಡಿದ್ದಕ್ಕೆ ನಾವೆಲ್ಲರೂ ಹಾಗೂ ಜೆಡಿಎಸ್ ಪಕ್ಷದವರೆಲ್ಲ ನಿಮಗೆ ಚಿರಋಣಿ ಆಗಿರುತ್ತೇವೆ. ಅದರ ಜೊತೆ ನಮ್ಮ ಕುಟುಂಬ, ಪ್ರಕಾಶಣ್ಣನ ಕುಟುಂಬ ನಿಮ್ಮ ಜೊತೆಗೆ ಇರುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಭಯೋತ್ಪಾದನೆಗೆ ಉತ್ತೇಜನ ಕೊಟ್ರೆ, PFI, ಭಜರಂಗದಳ ಆದ್ರೂ ಬ್ಯಾನ್ ಮಾಡಲಾಗುತ್ತೆ: ಬಿ.ಕೆ ಹರಿಪ್ರಸಾದ್
ಸ್ವರೂಪ್‌ಗೆ ದೇಣಿಗೆ ಕೂಡ ಕೊಟ್ರಿ, ನನಗೆ ಸಂತೋಷ ಆಯ್ತು, ಇಂತಹ ಸಮಯದಲ್ಲಿ ಯಾವುದೇ ರಾಜಕಾರಣಿಯ ಬಳಿಯೂ ಎಷ್ಟು ಇದ್ರೂ ಸಾಲಲ್ಲ. ರಾಜಕೀಯ ಜೀವನದಲ್ಲಿ ಏನೇ ಇದ್ದರು ಮಾಡಬೇಕಾಗುತ್ತದೆ. ರಾಮ ಸೇತುವೆ ಕಟ್ಟುವಾಗ ಅಳಿಲು ಕೂಡ ಸಹಾಯ ಮಾಡಿತ್ತು. ಅದರಿಂದ ಅಳಿಲು ಸೇವೆ ಅಂತ ಹೆಸರು ಬಂತು ಅಂತ ಮಾತನಾಡುತ್ತಾರೆ. ಸ್ವರೂಪ್‌ಗೆ ಸಹಾಯ ಮಾಡಿದ್ದೀರಾ ಮುಂದಿನ ದಿನಗಳಲ್ಲಿ ನೀವು ನಮ್ಮ ಜೊತೆ ಇರ್ತಿರಾ, ನಿಮ್ಮ ಜೊತೆ ನಾವು ಇರ್ತಿವಿ ಎಂದು ಹೇಳಿದರು. ಇದನ್ನೂ ಓದಿ: ಮಾನನಷ್ಟ ಮೊಕದ್ದಮೆ ಕೇಸ್ – ರಾಹುಲ್ ಗಾಂಧಿಗಿಲ್ಲ ರಿಲೀಫ್