ಬೆಳಗಾವಿ: ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿ (BJP) ಜನ ಸಂಕಲ್ಪಯಾತ್ರೆಗೆ ಲಕ್ಷಾಂತರ ಜನ ಚುನಾವಣಾ ತಂತ್ರಗಾರಿಕೆಯ ಚಾಣಾಕ್ಯ ಅಮಿತ್ ಶಾ (AmitShah) ಬೆಳಗಾವಿಗೆ ಆಗಮಿಸಿದ್ದಾರೆ.
Advertisement
ಗಡಿ ಜಿಲ್ಲೆ ಬೆಳಗಾವಿಯ ಬಿಜೆಪಿ ರಾಜಕಾರಣದಲ್ಲಿ ಜಾರಕಿಹೊಳಿ ಬಣ ಹಾಗೂ ಸವದಿ ಬಣಗಳಾಗಿದ್ದು, ಇದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಈ ಭಿನ್ನತೆಯನ್ನು ಶಮನಗೊಳಿಸಿ ಒಟ್ಟಾಗಿ ಒಂದಾಗಿ ಚುನಾವಣೆ ಎದುರಿಸಬೇಕು ಎಂಬುದು ಬಿಜೆಪಿಯ ಗುರಿ. ಸಿಡಿ ಪ್ರಕರಣದಿಂದ ಪಕ್ಷ ಸಂಘಟನೆಯಿಂದ ದೂರ ಉಳಿದಿದ್ದ ರಮೇಶ್ ಜಾರಕಿಹೊಳಿ (Ramesh Jarakiholi) ಅವರನ್ನು ಹೇಗೆ ಸಮಾಧಾನ ಪಡಿಸುತ್ತಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಇದನ್ನೂ ಓದಿ: ಲಕ್ಷ್ಮಿ ಹೆಬ್ಬಾಳ್ಕರ್ ಸೋಲಿಸಲು ರಮೇಶ್ ಜಾರಕಿಹೊಳಿ `ನಯಾ ಫೇಸ್’ ಗೇಮ್- BJP ಹೈಕಮಾಂಡ್ ನಡೆ ಏನು?
Advertisement
Advertisement
ಇಂದು ಬೆಳಗಾವಿಗೆ ಭೇಟಿ ನೀಡಲಿರುವ ಅಮಿತ್ ಶಾ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಅಮಿತ್ ಶಾಗೆ ಬಿಎಸ್‍ವೈ, ಸಿಎಂ ಬೊಮ್ಮಾಯಿ ಸಾಥ್ ನೀಡಲಿದ್ದಾರೆ. ಇತ್ತ ಕಿತ್ತೂರು ಮತಕ್ಷೇತ್ರದಲ್ಲಿ ಕಾಂಗ್ರೆಸ್ ಗಟ್ಟಿಗೊಳಿಸಲು ಡಿಕೆಶಿ ಹಾಗೂ ಸತೀಶ್ ಜಾರಕಿಹೊಳಿ (Satish Jarakiholi) ಗೇಮ್ ಪ್ಲಾನ್ ರೂಪಿಸಿದ್ದು, ಪಕ್ಷದ ಕ್ಷೇತ್ರ ಬೆಳಗಾವಿ ಗ್ರಾಮೀಣ, ಖಾನಾಪೂರ ಹಾಗೂ ಬೈಲಹೊಂಗಲದಲ್ಲಿಯೂ ಕಾಂಗ್ರೆಸ್ ಶಾಸಕರಿರುವುದರಿಂದ ಕಿತ್ತೂರು ಮತಕ್ಷೇತ್ರದಲ್ಲಿ ಅಮಿತ್ ಶಾ ಬಹಿರಂಗ ಸಭೆ ಆಯೋಜಿಸಿದ್ದಾರೆ.
Advertisement
ಚುನಾವಣಾ ರಣತಂತ್ರ ರೂಪಿಸಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಗೆಲ್ಲಿಸುವ ಉದ್ದೇಶವಾಗಿದೆ. ಎಂ ಕೆ ಹುಬ್ಬಳ್ಳಿಯಲ್ಲಿ ಲಕ್ಷಾಂತರ ಜನ ಸೇರುವ ನಿರೀಕ್ಷೆಯಿದ್ದು ಬಂದೊಬಸ್ತ್ ಸವಾಲಾಗಿದೆ. ಒಂದೆಡೆ ಪಾರ್ಟಿಯಲ್ಲಿ ಒಳಜಗಳ ಇನ್ನೊಂದೆಡೆ ವಿರೋಧ ಪಕ್ಷಗಳ ತಂತ್ರಕ್ಕೆ ಮರುತಂತ್ರ ರೂಪಿಸುವ ಗುರುತರ ಜವಾಬ್ದಾರಿ ಬಿಜೆಪಿ ಚಾಣಕ್ಯ ಶಾ ಮೇಲಿದೆ. ಅಮಿತ್ ಶಾ ಜೊತೆ ರಾಜ್ಯದ ಘಟಾನುಘಟಿ ನಾಯಕರು ವೇದಿಕೆ ಹಂಚಿಕೊಳ್ಳಲಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k