ಬೆಳಗಾವಿ: ಅಬಕಾರಿ ಇಲಾಖೆಯ (Excise Department) ಮಿಂಚಿನ ಕಾರ್ಯಾಚರಣೆ ಮಾಡಿದ್ದು, ರಾಜ್ಯ ವಿಧಾನಸಭೆ ಚುನಾವಣೆಗೆ ಭಾರೀ ಪ್ರಮಾಣದಲ್ಲಿ ಅಕ್ರಮ ಮದ್ಯ ಸಂಗ್ರಹ ಯತ್ನಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಗೋವಾ (Goa) ದಿಂದ ಕರ್ನಾಟಕಕ್ಕೆ ಸಾಗಿಸಲಾಗುತ್ತಿದ್ದ ಅಪಾರ ಪ್ರಮಾಣದ ಮದ್ಯವನ್ನು ಅಬಕಾರಿ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. ಜಿಲ್ಲೆಯ ಖಾನಾಪುರ ತಾಲೂಕಿನ ಮೊದೆಕೊಪ್ಪ ಕ್ರಾಸ್ ಬಳಿ ಅಬಕಾರಿ ಇಲಾಖೆಯಿಂದ ದಾಳಿ ನಡೆಸಲಾಗಿದ್ದು 67,73 ಲಕ್ಷ ಮೌಲ್ಯದ 3905 ಲೀಟರ್ ಮದ್ಯ (Alcohol) ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಪೂರ್ವಭಾವಿ ತಯಾರಿ ಪರಿವೀಕ್ಷಣೆ – ಚುನಾವಣಾ ಆಯೋಗದಿಂದ 3 ದಿನ ರಾಜ್ಯ ಭೇಟಿ
Advertisement
Advertisement
ಗೋವಾದಿಂದ ಬೆಳಗಾವಿಗೆ ಅಕ್ರಮ ಮದ್ಯ ಸಂಗ್ರಹಿಸಿ ಚುನಾವಣೆಯಲ್ಲಿ ಹಂಚಲು ಹುನ್ನಾರ ಮಾಡಿರುವ ಆರೋಪ ಕೇಳಿಬಂದಿದ್ದು ಲಾರಿ, ಅಕ್ರಮ ಮದ್ಯ ಜಪ್ತಿ ಜೊತೆಗೆ ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಅಬಕಾರಿ ನಿರೀಕ್ಷಕ ದಾವಲಸಾಬ್ ಶಿಂದೋಗಿ, ಉಪನಿರೀಕ್ಷಕ ಜಯರಾಮ್ ಹೆಗಡೆ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.