ನವದೆಹಲಿ: ಎಐಸಿಸಿ ಸಾಮಾಜಿಕ ಜಾಲತಾಣ ಮುಖ್ಯಸ್ಥೆ, ಮಂಡ್ಯ ಮಾಜಿ ಸಂಸದೆ ರಮ್ಯಾ ಕೊನೆಗೂ ಕರ್ನಾಟಕ ಚುನಾವಣೆ ಪ್ರಚಾರಕ್ಕೆ ಪ್ರವೇಶ ಮಾಡಿದ್ದು, ಮೊಳಕಾಲ್ಮುರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಯೋಗೇಶ್ ಬಾಬು ಪರ ಆನ್ ಲೈನ್ ಪ್ರಚಾರ ನಡೆಸಿದ್ದಾರೆ.
ಈ ಕುರಿತು ಕಾಂಗ್ರೆಸ್ ಟ್ವಿಟ್ಟರ್ ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ದೇಶದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ದೇಣಿಗೆ ಪಡೆಯವ ಪ್ರಕ್ರಿಯೆಯನ್ನು ಆನ್‍ಲೈನ್ ಮೂಲಕ ಜಾರಿಗೆ ತರುತ್ತಿದೆ. ಈ ಮೂಲಕ ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆ ಹಣದ ಕುರಿತು ಪರದರ್ಶಕತೆಯನ್ನು ತರಲು ಯತ್ನಿಸುತ್ತಿದೆ. ಅದ್ದರಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ಯೋಗೇಶ್ ಬಾಬು ಅವರಿಗೆ ದೇಣಿಗೆ ನೀಡಿ ಎಂದು ಮನವಿ ಮಾಡಿದ್ದಾರೆ.
Advertisement
“If you believe in clean politics, I urge you to kindly contribute, because every bit counts.”
Here's our SM & Digital Communications Chairperson @divyaspandana's appeal in support of Dr Yogesh Babu.
Click here to contribute: https://t.co/MEQOUx4qvM#CleanPoliticsWithINC pic.twitter.com/c5GocjyaRh
— Congress (@INCIndia) May 9, 2018
Advertisement
ಶ್ರೀ ರಾಮುಲುಗೆ ಟಾಂಗ್: ಪ್ರಚಾರದ ವಿಡಿಯೋದಲ್ಲಿ ರಮ್ಯಾ ಸಂಸದ, ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರಿಗೂ ಟಾಂಗ್ ನೀಡಿದ್ದಾರೆ. ನಮ್ಮ ಪಕ್ಷದ ಅಭ್ಯರ್ಥಿ ಡಾ. ಯೋಗೇಶ್ ಬಾಬು ಶ್ರೀ ರಾಮುಲು ಅವರ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಶ್ರೀ ರಾಮುಲು ಬಳ್ಳಾರಿ ಗಣಿ ಲೂಟಿ ಪ್ರಕಣದಲ್ಲಿ ಸಿಲುಕಿರುವ ಮಾಡಿರುವ ರೆಡ್ಡಿ ಸಹೋದರರ ಸ್ನೇಹಿತರು. ಗಣಿ ಅಕ್ರಮದ ರೂವಾರಿ ಶ್ರೀರಾಮುಲು ಸೋಲಿಸಿ, ನಮ್ಮ ಅಭ್ಯರ್ಥಿ ಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದ್ದಾರೆ.