ಬೆಂಗಳೂರು: ವಿಧಾನಸಭಾ ಚುನಾವಣೆ ಮತದಾನದ ಹೊಸ್ತಿಲಲ್ಲಿರುವ ವೇಳೆ ರಾಜ್ಯದಲ್ಲಿ ಕಾಂಗ್ರೆಸ್ ಶತಾಯಗತಾಯ ಬಹುಮತ ಪಡೆಯಲು ಪ್ರಯತ್ನಿಸುತ್ತಿದ್ದು, ಈ ವೇಳೆ ಬಹುಮತ ಪಡೆದು ಅಧಿಕಾರ ಸ್ಥಾಪಿಸಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಎಬಿಸಿ ಪ್ಲಾನ್ ಜಾರಿಗೆ ತರಲು ಮುಂದಾಗಿದೆ.
ಏನಿದು ಎಬಿಸಿ ಪ್ಲಾನ್?
ಸದ್ಯ ದೇಶದ ರಾಜಕೀಯದಲ್ಲಿ ಬದಲಾವಣೆಗೆ ಕಾರಣವಾಗಬಲ್ಲ ಚುನಾವಣೆ ಎಂದು ರಾಜಕೀಯ ವಿಶ್ಲೇಷಕರು ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಕರೆಯುತ್ತಿದ್ದಾರೆ. ಆದರೆ ಚುನಾವಣೆಯ ಪೂರ್ವ ನಡೆದ ಹಲವು ಸಮೀಕ್ಷೆಗಳು ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂಬ ಫಲಿತಾಂಶವನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತಮ್ಮ ಪಕ್ಷದ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂದು ತೀರ್ಮಾನಿಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಎಬಿಸಿ ಪ್ಲಾನ್ ರಚಿಸಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿದೆ.
Advertisement
Advertisement
ಪ್ಲಾನ್ ಎ – ಈ ಪ್ಲಾನ್ ಅನ್ವಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸರಳ ಬಹುಮತವನ್ನು ಪಡೆಯಬೇಕಿದೆ. ಹೀಗಾಗಿ 112 ಸ್ಥಾನಗಳನ್ನು ಗೆಲ್ಲಬೇಕು. ಈ ಸ್ಥಾನಗಳನ್ನು ಗೆಲ್ಲಲು ಪಕ್ಷದ ಎಲ್ಲಾ ನಾಯಕರು ಎಲ್ಲಾ ರೀತಿಯ ಶ್ರಮವಹಿಸಬೇಕು.
Advertisement
ಪ್ಲಾನ್ ಬಿ – ಒಂದು ವೇಳೆ ಪಕ್ಷ ಸರಳ ಬಹುಮತ ಪಡೆಯಲು ವಿಫಲವಾದರೆ, ಪ್ಲಾನ್ ಬಿ ಜಾರಿಗೆ ಬರುತ್ತದೆ. ಅಂದರೆ ಚುನಾವಣೆಯಲ್ಲಿ ಪಕ್ಷವು 100 ಆಸುಪಾಸು ಸ್ಥಾನ ಗೆದ್ದರೆ ಈ ವೇಳೆ ಪಕ್ಷೇತರ ಅಭ್ಯರ್ಥಿಗಳ ಬೆಂಬಲ ಪಡೆಯುವುದು. ಪ್ಲಾನ್ ಬಿ ಜಾರಿಗೆ ಹೊಣೆಯನ್ನು ರಾಹುಲ್ ಗಾಂಧಿ ಇಂಧನ ಸಚಿವ ಡಿಕೆ ಶಿವಕುಮಾರ್ ಅವರಿಗೆ ನೀಡಿದ್ದಾರೆ.
Advertisement
ಪ್ಲಾನ್ ಸಿ – ಪ್ಲಾನ್ ಬಿ ಅನ್ವಯ ಸರಳ ಬಹುಮತ ಪಡೆಯಲು ವಿಫಲವಾದರೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‍ಡಿ ಕುಮಾರಸ್ವಾಮಿ ಅವರ ಬೆಂಬಲ ಪಡೆಯುವುದು. ಆದರೆ ಸದ್ಯ ರಾಜ್ಯ ನಾಯಕರಿಗೆ ಪ್ಲಾನ್ ಸಿ ಬಗೆ ತಲೆ ಕೆಡಿಸಿಕೊಳ್ಳದಿರಲು ಹೈಕಮಾಂಡ್ ಸೂಚನೆ ನೀಡಿದೆ.
ರಾಹುಲ್ ಗಾಂಧಿ ಸದ್ಯ ರಾಜ್ಯ ನಾಯಕರಿಗೆ ತಮ್ಮ ಎಸಿಬಿ ಪ್ಲಾನ್ ಕುರಿತು ವಿವರಣೆ ನೀಡಿದ್ದಾರೆ ಎನ್ನಲಾಗಿದ್ದು, ಚುನಾವಣೆ ಮುಗಿರುವ ವರೆಗೂ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.