ಬೆಂಗಳೂರು: ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಕರ್ನಾಟಕಕ್ಕೆ ಬರುತ್ತಿರುವ ಪ್ರಧಾನಿ ಮೋದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು ಸವಾಲ್ ಹಾಕಿದ್ದಾರೆ.
`ನೀವು ಕನ್ನಡಿಗರಾ’ ಎಂದು ಪ್ರಶ್ನಿಸಿದ ಸಿಎಂ, ಪ್ರಧಾನಿ ಮೋದಿಗೆ ನೀವು ಕನ್ನಡಿಗರಾದರೆ ಈ ಐದು ಕೆಲಸ ಮಾಡಿ ತೋರಿಸಿ ಅಂತ ಸವಾಲೊಡ್ಡಿದ್ದಾರೆ.
Advertisement
ಸವಾಲ್‍ಗಳೇನು?:
1. ನಾಡಭಾಷೆ, ನಾಡಧ್ವಜ, ನಾಡಗೀತೆ ಒಪ್ಪಿಕೊಳ್ಳಿ. ನಾಡಧ್ವಜಕ್ಕೆ ಅಂಗೀಕಾರ ನೀಡಿ.
2. ಹಿಂದಿ ಹೇರಿಕೆ ಕೈ ಬಿಡಿ, ಕನ್ನಡಕ್ಕೆ ಪ್ರಾಮುಖ್ಯತೆ ಕೊಡಿ.
3. ಮಹದಾಯಿ ಸಮಸ್ಯೆ ಬಗೆಹರಿಸಲು ಮೂರು ರಾಜ್ಯಗಳ ಸಭೆ ಕರೆಯಿರಿ.
4. ರಾಷ್ಟ್ರೀಕೃತ ಬ್ಯಾಂಕುಗಳ ಪ್ರವೇಶ ಪರೀಕ್ಷೆಯನ್ನು ಕನ್ನಡದಲ್ಲಿ ನಡೆಸಿ.
5. ಒಬ್ಬನೇ ಒಬ್ಬ ಮುಸ್ಲಿಂ, ಕ್ರಿಶ್ಚಿಯನ್‍ಗೆ ಟಿಕೆಟ್ ನೀಡದೆ ನಿಮಗೆ ನಿಜವಾದ ಕನ್ನಡಿಗರಾಗಲು ಸಾಧ್ಯವೇ?
Advertisement
ಪ್ರಶ್ನೆ:
1 ಕನ್ನಡಿಗನಾಗುವುದೆಂದರೆ…
ಈ ನೆಲದ ಶರಣರು, ಸಂತರು, ದಾಸರು, ಸೂಫಿಗಳು ಹುಟ್ಟುಹಾಕಿದ ಸೌಹಾರ್ದ ಪರಂಪರೆಯನ್ನು ಗೌರವಿಸುವುದು. ಒಬ್ಬನೇ ಒಬ್ಬ ಮುಸ್ಲಿಮ್, ಕ್ರಿಶ್ಚಿಯನ್ಗೆ ಚುನಾವಣೆಯಲ್ಲಿ ಟಿಕೆಟ್ ನೀಡದೆ ನಿಮಗೆ ನಿಜವಾದ ಕನ್ನಡಿಗರಾಗಲು ಸಾಧ್ಯವೇ? ಎಂದು ಮೊದಲನೇ ಸವಾಲ್ ಹಾಕಿದ್ದಾರೆ.
Advertisement
2. ಕನ್ನಡಿಗನಾಗುವುದೆಂದರೆ….
ಕನ್ನಡ-ಕನ್ನಡಿಗ-ಕರ್ನಾಟಕದ ಹಿತರಕ್ಷಣೆ. ರಾಷ್ಟ್ರೀಕೃತ ಬ್ಯಾಂಕುಗಳ ಪ್ರವೇಶ ಪರೀಕ್ಷೆಯನ್ನು ಕನ್ನಡಿಗರಿಗೆ ಕನ್ನಡದಲ್ಲಿ ಬರೆಯಲು ಅವಕಾಶ ನೀಡಿ ಕನ್ನಡಿಗರಾಗುವಿರಾ?
Advertisement
3. ಕನ್ನಡಿಗನಾಗುವುದೆಂದರೆ…
ನೆಲ,ಜಲ,ಭಾಷೆಯ ರಕ್ಷಣೆಗೆ ಬದ್ಧವಾಗಿರುವುದು. ಮಹದಾಯಿ ನೀರು ಹಂಚಿಕೆ ವಿವಾದ ಬಗೆಹರಿಸಲು ಮೂರು ರಾಜ್ಯಗಳ ಸಭೆ ಕರೆದು ಕನ್ನಡಿಗರಾಗುವಿರಾ?
4. ಕನ್ನಡಿಗನಾಗುವುದೆಂದರೆ…
ಬಲತ್ಕಾರದ ಹಿಂದಿ ಹೇರಿಕೆಯನ್ನು ಕೈಬಿಡುವುದು, ಕನ್ನಡಕ್ಕೆ ಪ್ರಾಮುಖ್ಯ ಕೊಡುವುದು. ಕನ್ನಡಿಗರಾಗಲು ಸಿದ್ಧರಿದ್ದೀರಾ?
5. ಕನ್ನಡಿಗನೆಂದು ಘೋಷಿಸಿಕೊಂಡ ಪ್ರಧಾನಿ ಮೋದಿ ಅವರಿಗೆ ಅಭಿನಂದನೆ. ಕನ್ನಡಿಗನಾಗುವುದೆಂದರೆ….
ನಾಡಭಾಷೆ, ನಾಡಗೀತೆ, ನಾಡಧ್ವಜವನ್ನು ಒಪ್ಪಿಕೊಳ್ಳುವುದು. ಕರ್ನಾಟಕದ ನಾಡಧ್ವಜಕ್ಕೆ ಅಂಗೀಕಾರ ನೀಡಿ, ನಿಜವಾದ ಕನ್ನಡಿಗರಾಗುವಿರಾ? ಎಂದು ಐದು ಸವಾಲ್ ಹಾಕಿದ್ದು, ಪ್ರಶ್ನೆ ಮಾಡಿದ್ದಾರೆ.
ಈ ರೀತಿ ಸವಾಲ್ ಹಾಕಿ, ಪ್ರಶ್ನಿಸಿ ಪ್ರಧಾನಿ ಮೋದಿ ಅವರಿಗೆ ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಪ್ರತೀ ಟ್ವೀಟ್ ನಲ್ಲೂ #AnswerMadiModi ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
ಕನ್ನಡಿಗನಾಗುವುದೆಂದರೆ…
ಈ ನೆಲದ ಶರಣರು, ಸಂತರು, ದಾಸರು, ಸೂಫಿಗಳು ಹುಟ್ಟುಹಾಕಿದ ಸೌಹಾರ್ದ ಪರಂಪರೆಯನ್ನು ಗೌರವಿಸುವುದು.
ಒಬ್ಬನೇ ಒಬ್ಬ ಮುಸ್ಲಿಮ್,ಕ್ರಿಶ್ಚಿಯನ್ಗೆ ಚುನಾವಣೆಯಲ್ಲಿ ಟಿಕೆಟ್ ನೀಡದೆ ನಿಮಗೆ ನಿಜವಾದ ಕನ್ನಡಿಗರಾಗಲು ಸಾಧ್ಯವೇ?#AnswerMaadiModi
— Siddaramaiah (@siddaramaiah) April 30, 2018
ಕನ್ನಡಿಗನಾಗುವುದೆಂದರೆ….
ಕನ್ನಡ-ಕನ್ನಡಿಗ-ಕರ್ನಾಟಕದ ಹಿತರಕ್ಷಣೆ.
ರಾಷ್ಟೀಕೃತ ಬ್ಯಾಂಕುಗಳ ಪ್ರವೇಶ ಪರೀಕ್ಷೆಯನ್ನು ಕನ್ನಡಿಗರಿಗೆ ಕನ್ನಡದಲ್ಲಿ ಬರೆಯಲು ಅವಕಾಶ ನೀಡಿ ಕನ್ನಡಿಗರಾಗುವಿರಾ?#AnswerMaadiModi
— Siddaramaiah (@siddaramaiah) April 30, 2018
ಕನ್ನಡಿಗನಾಗುವುದೆಂದರೆ…
ನೆಲ,ಜಲ,ಭಾಷೆಯ ರಕ್ಷಣೆಗೆ ಬದ್ದವಾಗಿರುವುದು.
ಮಹದಾಯಿ ನೀರು ಹಂಚಿಕೆ ವಿವಾದ ಬಗೆಹರಿಸಲು ಮೂರು ರಾಜ್ಯಗಳ ಸಭೆ ಕರೆದು ಕನ್ನಡಿಗರಾಗುವಿರಾ?#AnswerMaadiModi
— Siddaramaiah (@siddaramaiah) April 30, 2018
ಕನ್ನಡಿಗನಾಗುವುದೆಂದರೆ…
ಬಲತ್ಕಾರದ ಹಿಂದಿ ಹೇರಿಕೆಯನ್ನು ಕೈಬಿಡುವುದು, ಕನ್ನಡಕ್ಕೆ ಪ್ರಾಮುಖ್ಯ ಕೊಡುವುದು.
ಕನ್ನಡಿಗರಾಗಲು ಸಿದ್ದ ಇದ್ದೀರಾ?#AnswerMaadiModi
— Siddaramaiah (@siddaramaiah) April 30, 2018
ಕನ್ನಡಿಗನೆಂದು ಘೋಷಿಸಿಕೊಂಡ ಪ್ರಧಾನಿ @narendramodi ಅವರಿಗೆ ಅಭಿನಂದನೆ.
ಕನ್ನಡಿಗನಾಗುವುದೆಂದರೆ….
ನಾಡಭಾಷೆ, ನಾಡಗೀತೆ, ನಾಡಧ್ವಜವನ್ನು ಒಪ್ಪಿಕೊಳ್ಳುವುದು.
ಕರ್ನಾಟಕದ ನಾಡಧ್ವಜಕ್ಕೆ ಅಂಗೀಕಾರ ನೀಡಿ, ನಿಜವಾದ ಕನ್ನಡಿಗರಾಗುವಿರಾ?. #AnswerMadiModi
— Siddaramaiah (@siddaramaiah) April 30, 2018