ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ಕಾಂಗ್ರೆಸ್ (Congress) ಹುಲಿ ಬಾಯಿಗೆ ಸಿಕ್ಕ ಮಗುವಿನಂತಾಗಿದೆ ಎಂದು ಚಾಮರಾಜ ಕ್ಷೇತ್ರ (Chamaraja Assembly constituency) ಟಿಕೆಟ್ ವಂಚಿತ ಮಾಜಿ ಶಾಸಕ ವಾಸು ಮೈಸೂರಿನಲ್ಲಿ (Mysuru) ಭಾನುವಾರ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಐದು ವರ್ಷಗಳ ಆಡಳಿತದ ನಂತರ 2018ರಲ್ಲಿ ಕಾಂಗ್ರೆಸ್ ಸೋಲು ಕಾಣಲು ಜಾತಿ ರಾಜಕಾರಣವೇ ಕಾರಣ. ನಾನು ಸಿದ್ದರಾಮಯ್ಯ ಅವರ ಜಾತಿ ರಾಜಕಾರಣವನ್ನು ವಿರೋಧಿಸಿದ್ದೆ. 2018ರ ಚುನಾವಣೆಯಲ್ಲಿ (Election) ನನ್ನನ್ನು ಸೋಲಿಸಿದ್ದು ಸಿದ್ದರಾಮಯ್ಯನವರೇ. ಸಿದ್ದರಾಮಯ್ಯ ಕಡೆಯವರು ನನ್ನ ವಿರುದ್ಧ ಕೆಲಸ ಮಾಡಿದ್ದರು. ಆಗ ಕ್ಷೇತ್ರದಲ್ಲಿ ಸತ್ಯ ಮಾತಾಡಿದ್ದ ಶಾಹಿದ್‍ನನ್ನು ತೆಗೆದು ಹಾಕಿದರು ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಸೂಚನೆ ನೀಡಿದರೆ ಸಿಬಿಐ ನನ್ನನ್ನು ಬಂಧಿಸಬಹುದು: ಅರವಿಂದ್ ಕೇಜ್ರಿವಾಲ್
Advertisement
Advertisement
ಕಾಂಗ್ರೆಸ್ ಪಕ್ಷದಲ್ಲಿ 40 ವರ್ಷಗಳಿಂದಲೂ ಇದ್ದೇನೆ. ಸಾಕಷ್ಟು ನೋವಾದಾಗಲೂ ಪಕ್ಷ ವಿರೋಧ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ. ಬ್ಲಾಕ್ ಮಟ್ಟದಿಂದ ರಾಷ್ಟಮಟ್ಟದವರೆಗೂ ನಾಯಕರು ನನ್ನ ಬೆನ್ನಿಗೆ ನಿಂತಿದ್ದರು. ರಾಷ್ಟ್ರ ಮಟ್ಟದವರೆಗೂ ನನ್ನ ಹೆಸರು ಸೂಚಿಸದ್ದಕ್ಕೆ ಅವರಿಗೆ ಅಬಾರಿಯಾಗಿರುತ್ತೇನೆ ಎಂದಿದ್ದಾರೆ.
Advertisement
Advertisement
1999 ರಿಂದಲೂ ರಾಜಕಾರಣದಲ್ಲಿ ಇದ್ದೇನೆ. ಮೇಯರ್ ಆಗಿ, ಮುಖ್ಯಮಂತ್ರಿ ಕಾರ್ಯದರ್ಶಿಯಾಗಿ ಹಲವಾರು ಹುದ್ದೆ ನಿಭಾಯಿಸಿದ್ದೇನೆ. 1999 ಹಾಗೂ 2018 ರಲ್ಲಿ ಸೋತು 2013 ರಲ್ಲಿ ಗೆದ್ದಿದ್ದೆ. ಕ್ಷೇತ್ರದಲ್ಲಿ ಮಹಾರಾಜರ ನಂತರ ಅನೇಕ ಅಭಿವೃದ್ಧಿಯನ್ನು ನಾನು ಮಾಡಿದ್ದೇನೆ. ಇಲ್ಲಿಯವರೆಗೂ ಮಂತ್ರಿ ಸ್ಥಾನವನ್ನೂ ಕೇಳಿಲ್ಲ. ಅಲ್ಲದೇ ಒಂದೇ ಒಂದು ವರ್ಗಾವಣೆಯನ್ನೂ ಕೇಳಿಲ್ಲ. ಕೇವಲ ವಿದ್ಯಾರ್ಥಿಗಳಿಗಾಗಿ ಹಾಗೂ ಮೂಲಭೂತ ಸೌಕರ್ಯಗಳ ಬಗ್ಗೆ ಮಾತಾಡಿದ್ದೆ. 2018 ರಲ್ಲಿ ಸೋಲದೇ ಗೆದ್ದಿದ್ದರೆ, ನಿಮಾನ್ಸ್, ಏಮ್ಸ್ ಹಾಗೂ ನೆಫ್ರೋಲಜಿ ಘಟಕ ತರುತ್ತಿದ್ದೆ ಎಂದು ಹೇಳಿದರು.
ನಾನು ಚುನಾವಣೆಯಲ್ಲಿ ಸೋತಿದ್ದೆ ನಿಜ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿಯೇ ಸೋತಿರಲಿಲ್ಲವೆ? ನನಗೆ ಟಿಕೆಟ್ ಮಿಸ್ ಆಗಿದ್ದಕ್ಕೆ ಬೇಸರ ಆಗುತ್ತಿಲ್ಲ. ಕ್ಷೇತ್ರದ ಅಭಿವೃದ್ಧಿಯ ಗುರಿ ಸಾಧಿಸಲು ಸಾಧ್ಯವಾಗಲಿಲ್ಲ ಎಂಬ ಬೇಸರವಿದೆ. ಬೇರೆ ಪಕ್ಷಗಳು ಆಹ್ವಾನ ನೀಡಿವೆ ಇನ್ನೆರಡು ದಿನದಲ್ಲಿ ಆ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇನೆ. ಪಕ್ಷ ತೊರೆಯುವುದರಿಂದ ನನ್ನ ಬೆಂಬಲಿಗರಿಗೆ ಅನ್ಯಾಯ ಮಾಡಿದಂತೆ ಆಗುತ್ತದೆ. ಇಲ್ಲಿಯವರೆಗೂ ಅವಕಾಶ ನೀಡಿದ ಪಕ್ಷವನ್ನು ನಾನು ದೂರುವುದಿಲ್ಲ. ಟಿಕೆಟ್ ತಪ್ಪಿಸುವುದರಿಂದ ನನ್ನ ಧ್ವನಿ ಹತ್ತಿಕ್ಕಲಾಗುವುದಿಲ್ಲ. ನನ್ನ ಇಲ್ಲಿಯವರೆಗಿನ ರಾಜಕಾರಣದಲ್ಲಿ ಒಂದೇ ಒಂದು ಕಪ್ಪು ಚುಕ್ಕಿಯನ್ನು ತೋರಿಸಿದರೂ ದಂಡ ಕಟ್ಟಿ ನಿವೃತ್ತಿ ತೆಗೆದುಕೊಳ್ಳಲು ತಯಾರಿದ್ದೇನೆ. ಸಿದ್ದರಾಮಯ್ಯ ಅವರ ಹಗೆತನಕ್ಕೆ ಅನೇಕರು ಬಲಿಯಾಗಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಸಿ.ಟಿ.ರವಿ ಆಸ್ಪತ್ರೆಗೆ ದಾಖಲು