ಬೆಂಗಳೂರು: ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್, ಜೆಡಿಎಸ್ ಬುಲ್ಡೋಜ್ ಮಾಡಲು ಬಿಜೆಪಿಯಿಂದ ಯೋಗಿ ಅಸ್ತ್ರ ಸಿದ್ಧವಾಗ್ತಿದೆ. ಒಕ್ಕಲಿಗ ಮತಗಳ ಮೇಲೆ ಕಣ್ಣಿಟ್ಟು ಒಂದೇ ಏಟಿಗೆ ಎರಡು ಹಕ್ಕಿಗಳನ್ನು ಹೊಡೆಯುವ ತಂತ್ರಕ್ಕೆ ಬಿಜೆಪಿ ಕೈ ಹಾಕಿದೆ. ಒಂದಲ್ಲ, ಎರಡಲ್ಲ ಹಳೇ ಮೈಸೂರು ಭಾಗದ 7 ಜಿಲ್ಲೆಗಳಲ್ಲಿ ಯೋಗಿ ಸಂಚಾರಕ್ಕೆ ರೂಟ್ ಮ್ಯಾಪ್ ರೆಡಿಯಾಗುತ್ತಿದೆ.
7 ಜಿಲ್ಲೆಗಳಲ್ಲೂ ಯೋಗಿ ಆದಿತ್ಯನಾಥ್ ಸಮಾವೇಶಕ್ಕೆ ಹೈಕಮಾಂಡ್ ಮಾಸ್ಟರ್ ಪ್ಲ್ಯಾನ್ ಮಾಡಿದ್ದು, ಸೆಪ್ಟೆಂಬರ್‌ನಿಂದ ಪ್ರತಿ ತಿಂಗಳಿಗೆ ಎರಡು ಜಿಲ್ಲೆಗಳಲ್ಲಿ ಯೋಗಿ ಅಬ್ಬರಕ್ಕೆ ಸೂಚಿಸಿದೆ ಎನ್ನಲಾಗಿದೆ. ಮೈಸೂರು, ಬೆಂಗಳೂರು ಸೇರಿ 7 ಜಿಲ್ಲೆಗಳಲ್ಲಿ ಡಿಸೆಂಬರ್ ಅಂತ್ಯದ ತನಕ ತಿಂಗಳಿಗೆ ಎರಡು ಯೋಗಿ ಸಮಾವೇಶಗಳು ನಡೆಯಲಿವೆ.
Advertisement
Advertisement
ನಾಥ ಪರಂಪರೆಯನ್ನ ಮುಂದಿಟ್ಟು ಒಕ್ಕಲಿಗ ಮತ ಬೇಟೆಗೆ ಹೈಕಮಾಂಡ್ ನಕ್ಷೆ ರಚಿಸಿದ್ದು, ಖಡಕ್ ಹಿಂದೂತ್ವವನ್ನ ಜೋಡಿಸಿ ಯೋಗಿ ಆದಿತ್ಯನಾಥ್ ಅಖಾಡಕ್ಕೆ ಇಳಿಸುವ ಮಾಸ್ಟರ್ ಸ್ಟ್ರೋಕ್ ಮುಂದಿದೆ ಎಂಬುದು ದೆಹಲಿ ಮೂಲಗಳ ಮಾಹಿತಿ. ಇದನ್ನೂ ಓದಿ: ಟ್ವಿಟ್ಟರ್ ಖರೀದಿ ಪ್ರಕ್ರಿಯೆಯನ್ನೇ ರದ್ದುಗೊಳಿಸಿದ ಮಸ್ಕ್
Advertisement
ಮಂಡ್ಯ, ಮೈಸೂರು, ಹಾಸನ, ತುಮಕೂರು ಜಿಲ್ಲೆಗಳಲ್ಲಿ ಮೊದಲ ಹಂತದ ಸಮಾವೇಶ ನಡೆದರೆ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರಗಳಲ್ಲಿ 2ನೇ ಹಂತದ ಸಮಾವೇಶಕ್ಕೆ ಪ್ಲ್ಯಾನ್ ಮಾಡಲಾಗಿದೆ. ಸೆಪ್ಟೆಂಬರ್‌ನಿಂದ ಯೋಗಿ ಸಂಚಾರ ಆರಂಭಿಸಿ ಡಿಸೆಂಬರ್‌ನಲ್ಲಿ ಅಂತ್ಯಗೊಳಿಸಲು ಬ್ಲೂಪ್ರಿಂಟ್ ಮಾಡಲಾಗಿದೆ. ತಿಂಗಳಿಗೆ ಎರಡು ಜಿಲ್ಲೆಗಳಲ್ಲಿ ಯೋಗಿ ಸಮಾವೇಶ ನಡೆಸುವ ಸಂಬಂಧ ಹೈಕಮಾಂಡ್ ಚರ್ಚೆ ನಡೆಸಿದೆ.