ಬಿಜೆಪಿಗೆ ಬೆಂಗಳೂರು ವರಿ; ಬೆಂಗಳೂರು ಬಾಸ್ ಯಾರು? ಪ್ರಧಾನಿ ನರೇಂದ್ರ ಮೋದಿಗೂ ತಳಮಳ

ಬೆಂಗಳೂರು: ಕರ್ನಾಟಕ (Karnataka) ಗೆಲ್ಲಲು ಹೊರಟ ಬಿಜೆಪಿಗೆ (BJP) ಬೆಂಗಳೂರಲ್ಲೇ (Bengaluru) ವರಿ ಶುರುವಾಗಿದೆ. ಮೋದಿ (Narendra Modi) ರೋಡ್ ಷೋನಿಂದ ಆ ತಳಮಳ ಕಡಿಮೆ ಆಗುತ್ತಾ ಎಂಬ ಚರ್ಚೆ ಶುರುವಾಗಿದೆ. ಅಡ್ಜಸ್ಟ್‌ಮೆಂಟ್ ಪಾಲಿಟಿಕ್ಸ್‌ಗೆ ಬೆಂಗಳೂರು ಸಿಲುಕಿರುವುದು ಸ್ಪಷ್ಟವಾಗಿದೆ.
ಅವರ ಅಡ್ಡಾ ಅವರಿಗೆ ಅನ್ನುವಂತಾಗಿದ್ದು, ನಿನ್ನ ಅಡ್ಡಾಗೆ ನಾನು ಬರಾಕಿಲ್ಲ. ನನ್ನ ಅಡ್ಡಾಗೆ ನೀನು ಬರಂಗಿಲ್ಲ ಎಂಬ ಪಾಲಿಸಿ ಪಾಲಿಟಿಕ್ಸ್ ಪ್ರತಿ ಚುನಾವಣೆಯಲ್ಲೂ ಕಾಣಿಸುತ್ತಿದೆ. ಈ ಅಡ್ಜಸ್ಟ್‌ಮೆಂಟ್ ಪಾಲಿಟಿಕ್ಸ್ ಬಿಜೆಪಿ ಹೈಕಮಾಂಡ್‌ಗೆ ದೊಡ್ಡ ತಲೆನೋವಾಗಿದ್ದು, ಹೊಸ ಗೇಮ್ ಚಾಲೂ ಮಾಡಿದೆ. ಇದನ್ನೂ ಓದಿ: ಯಾವ ಮುಖ ಇಟ್ಕೊಂಡು ಮೋದಿ ರಾಜ್ಯದಲ್ಲಿ ವೋಟು ಕೇಳ್ತಾರೆ – ಹೆಚ್‌ಡಿಕೆ ಪ್ರಶ್ನೆ
ಅಂದಹಾಗೆ ಬೆಂಗಳೂರಿನ 28 ಕ್ಷೇತ್ರಗಳ ಪೈಕಿ ಏಳೆಂಟು ಕ್ಷೇತ್ರಗಳಲ್ಲಿ ಬಿಜೆಪಿಗೆ ಖಡಕ್ ಅಭ್ಯರ್ಥಿಗಳೇ ಇಲ್ಲ. ಅದೇ ರೀತಿ ಕಾಂಗ್ರೆಸ್‌ಗೂ ಖಡಕ್ ಅಭ್ಯರ್ಥಿಗಳಿಲ್ಲದ ಸ್ಥಿತಿ ಇದೆ. ಕಳೆದ ಬಾರಿ ಕರ್ನಾಟಕದಲ್ಲಿ ಬಿಜೆಪಿ ಜಾಸ್ತಿ ಸೀಟ್ ಗೆದಿದ್ದರೂ, ಬೆಂಗಳೂರಲ್ಲಿ ಮಾತ್ರ ಬಿಜೆಪಿ ಹಿನ್ನಡೆ ಕಂಡಿತ್ತು. ಹಾಗಾಗಿ 2023ರ ಎಲೆಕ್ಷನ್‌ಗೆ ಟಾರ್ಗೆಟ್ 20 ಫಿಕ್ಸ್ ಮಾಡಿಕೊಂಡಿರುವ ಬಿಜೆಪಿ, ಮೋದಿ ಜಪ ಮಾಡುತ್ತಿದೆ. ಆಪರೇಷನ್ ಕಮಲದ ಬಳಿಕ ಬೆಂಗಳೂರಲ್ಲೇ ಬಿಜೆಪಿ ಬಾಸ್ ಆಗಿದ್ದರೂ, 2023ಕ್ಕೆ ಬೆಂಗಳೂರು ಬಾಸ್ ಲೆಕ್ಕಚಾರ ಮುಂದಿಟ್ಟು ಮೋದಿ ಫೇಸ್ ನೆಚ್ಚಿಕೊಂಡಿದೆ.
ಬೆಂಗಳೂರು ಗೆಲ್ಲಲು ಮೋದಿ ಮೆಗಾ ರೋಡ್ ಶೋಗೆ ಭರ್ಜರಿ ಪ್ಲ್ಯಾನ್ ನಡೆದಿದೆ. ಮೂರ‍್ನಾಲ್ಕು ಕ್ಷೇತ್ರಗಳನ್ನ ಬಂಚ್ ಮಾಡಿ ಮೋದಿ ರೋಡ್ ಶೋ ಮಾಡಿಸಬೇಕು. ಒಂದು ರೋಡ್ ಶೋ ಒಂದು ಸಮಾವೇಶಕ್ಕೆ ಸಮ ಆಗುತ್ತೆ. ಮೋದಿ ಮಾತನಾಡದಿದ್ದರೂ ಹವಾ ಸೃಷ್ಟಿಗೆ ಅನುಕೂಲ ಎಂಬುದು ಬಿಜೆಪಿ ಲೆಕ್ಕಚಾರ. ಇದನ್ನೂ ಓದಿ: ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ಗುಜರಾತ್ ಮಾಡೆಲ್ ಜಾರಿ?
ಈ ನಡುವೆ ಬೆಂಗಳೂರು ಗುರಿ ಕಾಂಗ್ರೆಸ್‌ನಿಂದಲೂ ನಡೆದಿದೆ. ಪ್ರತ್ಯೇಕ ತಯಾರಿ ಕೂಡ ನಡೆಯುತ್ತಿದೆ. ಬೆಂಗಳೂರಿಗೆ ಪ್ರತ್ಯೇಕ ಪ್ರಣಾಳಿಕೆ ಮಾಡುವ ಚಿಂತನೆ ಇದೆ. ಗೃಹಲಕ್ಷ್ಮಿ, ಗೃಹ ಜ್ಯೋತಿ ಭರವಸೆ ರೀತಿ ಬಿಗ್ ಬಂಪರ್ ಭರವಸೆ ಘೋಷಣೆಗೆ ಮೆಗಾ ಪ್ಲ್ಯಾನ್ ನಡೆಸಿದ್ದಾರೆ. ಬೆಂಗಳೂರು ಗೆಲ್ಲುವ ಟಾರ್ಗೆಟ್‌ನೊಂದಿಗೆ ಕಾಂಗ್ರೆಸ್ ಈಗಾಗಲೇ ನಿನ್ನೆ ಬೆಂಗಳೂರು ಸಿಟಿಯಲ್ಲೇ ಭ್ರಷ್ಟಾಚಾರ ಕದನಕ್ಕೆ ಇಳಿದಿತ್ತು. ಕಾಂಗ್ರೆಸ್‌ನಿಂದಲೂ ಟಾರ್ಗೆಟ್ 20 ಅಸ್ತ್ರ ಶುರುವಾಗಿದ್ದು, ಆಪರೇಷನ್ ಕಮಲದ ಬಳಿಕ ಕುಗ್ಗಿರುವ ಕಾಂಗ್ರೆಸ್ ಶಕ್ತಿ ಹೆಚ್ಚಿಸಲು ತಂತ್ರ ರೂಪಿಸಿದೆ.
Live Tv
Join our Whatsapp group by clicking the below link
https://chat.whatsapp.com/E6YVEDajTzH06LOh77r25k