ಮಂಡ್ಯ: ರಾಜ್ಯ ರಾಜಕೀಯದಲ್ಲಿ ಸಂಸದೆ ಸುಮಲತಾ ಅಂಬರೀಶ್ ನಡೆ ಏನು? ಯಾವ ಪಕ್ಷಕ್ಕೆ ಸೇರುತ್ತಾರೆ ಎಂಬುದು ನಿಗೂಢವಾಗಿಯೇ ಇದೆ. ಇಷ್ಟು ದಿನ ಈ ಬಗ್ಗೆ ಪ್ರಶ್ನೆ ಎದುರಾದ್ರೆ ತಮ್ಮ ನಿಲುವು ಜನರ ಅಭಿಪ್ರಾಯಕ್ಕೆ ಬಿಟ್ಟಿದ್ದು ಅಂತ ಹೇಳ್ತಿದ್ರು. ಇಂದು ಮಂಡ್ಯದಲ್ಲಿ ಸಂಸದರ ಆಪ್ತರು ಹಾಗೂ ಬೆಂಬಲಿಗರ ಸಭೆ ನಡೆಸಿದ್ದಾರೆ. ರಾಜಕಾರಣಕ್ಕೆ ರೇಬಲ್ ಲೇಡಿ ಎಂಟ್ರಿ ಕೊಡಬೇಕಾ? ಯಾವ ಪಕ್ಷ ಆಯ್ಕೆ ಮಾಡಬೇಕು ಅಂತ ಅಭಿಪ್ರಾಯ ಹೇಳಿಕೊಂಡಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ವಾಭಿಮಾನದ ಕಹಳೆ ಮೊಳಗಿಸಿ ಗೆದ್ದು ಬೀಗಿದ್ದ ಸುಮಲತಾ ಅಂಬರೀಶ್ ರಾಜಕೀಯ ಭವಿಷ್ಯದ ಬಗ್ಗೆ ಎಚ್ಚರಿಕೆ ಹೆಜ್ಜೆ ಇಟ್ಟಿದ್ರು. ಮೂರು ಮುಕ್ಕಾಲು ವರ್ಷದಿಂದಲೂ ಪಕ್ಷದ ಆಯ್ಕೆ ಬಗ್ಗೆ ನಿಗೂಢತೆ ಕಾಯ್ದುಕೊಂಡಿದ್ದ ರೆಬೆಲ್ ಲೇಡಿ, ರಾಜಕೀಯ ನಿರ್ಧಾರದ ಬಗ್ಗೆ ಪ್ರಶ್ನೆ ಎದುರಾದ್ರೆ ಜನರ ಅಭಿಪ್ರಾಯಕ್ಕೆ ಬಿಟ್ಟಿದ್ದು ಅಂತ ಹೇಳುವ ಮೂಲಕ ಕುತೂಹಲ ಹೆಚ್ಚಿಸಿಕೊಂಡೇ ಬಂದಿದ್ದರು. ಇಂದು ಅವರ ಆಪ್ತರು ಹಾಗೂ ಬೆಂಬಲಿಗರು ಸಭೆ ನಡೆಸಿ 3 ಮಹತ್ವದ ನಿರ್ಣಯ ಕೈಗೊಂಡಿದ್ದಾರೆ.
Advertisement
Advertisement
ಮಂಡ್ಯದ ಕರ್ನಾಟಕ ಸಂಘದ ಸಭಾಂಗಣದಲ್ಲಿ ಹನಕೆರೆ ಶಶಿ, ಬೇಲೂರು ಸೋಮಶೇಖರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸುಮಾರು 25 ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಮುಖಂಡರು ಭಾಗಿಯಾದ್ರೆ, ನೂರಕ್ಕೂ ಹೆಚ್ಚು ಮಹಿಳೆಯರೂ ಪಾಲ್ಗೊಂಡಿದ್ದರು. ಸಭೆ ಉದ್ಘಾಟನೆಯಾಗುತ್ತಿದ್ದಂತೆ ಮನವಿ ಮಾಡಿಕೊಂಡು ಮಾಧ್ಯಮದವರನ್ನು ಹೊರಗೆ ಕಳುಹಿಸಿ ಗೌಪ್ಯವಾಗಿ ಅಭಿಪ್ರಾಯ ಸಂಗ್ರಹಿಸಲಾಯಿತು. ತಮ್ಮ ನಾಯಕಿ ರಾಜ್ಯ ರಾಜಕೀಯಕ್ಕೆ ಬರಬೇಕೆಂಬುದು ಒಕ್ಕೋರಲ ಅಭಿಪ್ರಾಯವಾಗಿದ್ದರಿಂದ ಮೊದಲ ನಿರ್ಣಯವೇ ಸುಮಲತಾ ಅಂಬರೀಶ್ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಬೇಂಬುದಾಗಿತ್ತು. ಇದನ್ನೂ ಓದಿ: ಕರ್ನಾಟಕ ಪ್ರದೇಶ CD ಕಮಿಟಿ ಅಧ್ಯಕ್ಷ ಡಿಕೆಶಿ: ಲಖನ್ ಕಿಡಿ
Advertisement
ಯಾವ ಪಕ್ಷ ಸೇರ್ಪಡೆಯಾಗಬೇಕು ಎಂಬ ವಿಚಾರ ಗಂಭೀರವಾಗಿ ಚರ್ಚೆ ಆಯ್ತು. ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಗುರುತಿಸಿಕೊಂಡವರು ಭಿನ್ನವಾಗಿ ಅಭಿಪ್ರಾಯ ಹೇಳಿದ್ರಿಂದ ಅಂತಿಮವಾಗಿ ಸುಮಲತಾ ಅವರ ನಿರ್ಧಾರಕ್ಕೆ ಬಿಡಲಾಯಿತು. ಯಾವುದೇ ಪಕ್ಷ ಸೇರ್ಪಡೆಯಾದ್ರೂ ಬೆಂಬಲಿಸುತ್ತೇವೆ ಅಂತ ಕೈ ಚಾಚಿ ಪ್ರಮಾಣ ವಚನ ಸ್ವೀಕರಿಸಿದರು.
Advertisement
ಮಂಡ್ಯ, ಮದ್ದೂರು ಅಥವಾ ಮೇಲುಕೋಟೆ ಕ್ಷೇತ್ರದಲ್ಲಿ ಒಂದು ಕ್ಷೇತ್ರ ಆಯ್ಕೆ ಮಾಡಿಕೊಳ್ಳಬೇಕೆಂದು ಒತ್ತಾಯ ವ್ಯಕ್ತವಾಯಿತು. ಒಟ್ಟಾರೆ ಇಂದಿನ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳು, ಅಂತಿಮವಾಗಿ ಕೈಗೊಂಡ ನಿರ್ಣಯಗಳನ್ನು ತಮ್ಮ ನಾಯಕಿಯ ಮುಂದಿಡಲಿದ್ದಾರೆ. ಇದುವರೆಗೂ ಜಾಣ್ಮೆಯಿಂದ ಹೆಜ್ಜೆ ಇಡುತ್ತಾ ಬಂದಿದ್ದ ಸುಮಲತಾ ಅಂಬರೀಶ್ ರಾಜ್ಯ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರಾ? ಯಾವ ಪಕ್ಷ ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬುದನ್ನ ಕಾದುನೋಡಬೇಕಿದೆ. ಇದನ್ನೂ ಓದಿ: ಮಹದಾಯಿ ಯೋಜನೆ ಅನುಷ್ಠಾನ – ಗೋವಾ ಸರ್ಕಾರದ ನಡೆಯ ಬಗ್ಗೆ ಗೊತ್ತಿಲ್ಲವೆಂದ ಸಿಎಂ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k