ತುಮಕೂರು: ಜಿಲ್ಲೆಯಲ್ಲಿ ಕಾಂಗ್ರೆಸ್ ಏಳು ಕ್ಷೇತ್ರಗಳಲ್ಲಿ ಜಯಗಳಿಸಿದೆ. ಬಿಜೆಪಿ (BJP) ಎರಡು ಕ್ಷೇತ್ರಗಳಲ್ಲಿ ಹಾಗೂ ಜೆಡಿಎಸ್ (JDS) ಎರಡು ಕ್ಷೇತ್ರಗಳಲ್ಲಿ ಗೆದ್ದಿದೆ.
ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ 74,724 ಮತಗಳನ್ನು ಪಡೆದು ಕಾಂಗ್ರೆಸ್ (Congress) ಅಭ್ಯರ್ಥಿ ಡಾ.ರಂಗನಾಥ್ ಅವರು ಗೆಲುವು ಸಾಧಿಸಿದ್ದಾರೆ. ಬಿಜೆಪಿ 48,151 ಮತಗಳನ್ನು ಪಡೆದು ಸೋಲು ಕಂಡಿದೆ. ಜೆಡಿಎಸ್ 46,974 ಮತಗಳನ್ನು ಪಡೆದಿದೆ. ಕೈ ಅಭ್ಯರ್ಥಿಯ ಗೆಲುವಿನ ಅಂತರ 26,573 ಮತಗಳಾಗಿದೆ. ಇದನ್ನೂ ಓದಿ: ರಾಮನಗರದಲ್ಲಿ ಜೆಡಿಎಸ್‍ಗೆ ಶಾಕ್ – 3 ಕ್ಷೇತ್ರಗಳಲ್ಲಿ ಕಾಂಗ್ರೆಸ್‍ಗೆ ಗೆಲುವು
Advertisement
ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಆರ್ ಶ್ರೀನಿವಾಸ್ 60,520 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಬಿಜೆಪಿ 51,979 ಮತಗಳನ್ನು ಪಡೆದಿದ್ದು, ಜೆಡಿಎಸ್ 43,046 ಮತ ಗಳಿಸಿದೆ. ಕೈ ಅಭ್ಯರ್ಥಿ 8,541 ಮತಗಳಿಂದ ಗೆದ್ದಿದ್ದಾರೆ.
Advertisement
ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸುರೇಶ್ ಬಾಬು 70,329 ಮತಗಳಿಂದ ಗೆಲುವು ಸಾಧಿಸಿದ್ದಾರೆ. ಬಿಜೆಪಿ 60,304 ಮತ ಪಡೆದಿದೆ. ಕಾಂಗ್ರೆಸ್ 50,629 ಗಳಿಸಿದೆ. ಗೆದ್ದ ಅಭ್ಯರ್ಥಿಯ ಗೆಲುವಿನ ಅಂತರ 10,025 ಮತಗಳಾಗಿವೆ.
Advertisement
ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‍ನ ಎಂ.ಟಿ.ಕೃಷ್ಣಪ್ಪ 68,163 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಬಿಜೆಪಿ 58,240 ಮತಗಳನ್ನು ಪಡೆದಿದೆ. ಕಾಂಗ್ರೆಸ್ 30,536 ಮತಗಳನ್ನು ಪಡೆದಿದೆ. ಗೆದ್ದ ಅಭ್ಯರ್ಥಿಯ ಗೆಲುವಿನ ಅಂತರ 9923 ಮತಗಳಾಗಿದೆ.
Advertisement
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಸುರೇಶ್ ಗೌಡ 89,191 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಜೆಡಿಎಸ್ 84,597 ಪಡೆದಿದೆ. ಗೆದ್ದ ಅಭ್ಯರ್ಥಿಯ ಗೆಲುವಿನ ಅಂತರ 4594 ಮತಗಳಾಗಿವೆ.
ಪಾವಗಡ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟೇಶ್ 83,062ಗೆಲುವು ಸಾಧಿಸಿದ್ದಾರೆ. ಜೆಡಿಎಸ್ 72,181 ಮತಗಳನ್ನು ಪಡೆದಿದೆ. ಬಿಜೆಪಿ 70,206 ಮತಗಳನ್ನು ಪಡೆದಿದೆ. ಕೈ ಅಭ್ಯರ್ಥಿಯ ಗೆಲುವಿನ ಅಂತರ 10,881 ಮತಗಳಾಗಿವೆ.
ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್ ರಾಜಣ್ಣ ಅವರು 91,166 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಜೆಡಿಎಸ್ 55,643 ಮತಗಳನ್ನು ಪಡೆದರೆ, ಬಿಜೆಪಿ 15,612 ಮತಗಳನ್ನು ಪಡೆದಿದೆ. ಗೆದ್ದ ಅಭ್ಯರ್ಥಿಯ ಗೆಲುವಿನ ಅಂತರ 35,523 ಆಗಿದೆ.
ತಿಪಟೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಷಡಕ್ಷರಿ ಅವರು 71,999 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಬಿಜೆಪಿ 54,347 ಮತಗಳನ್ನು ಪಡೆದರೆ, ಜೆಡಿಎಸ್ 26,014 ಮತಗಳನ್ನು ಪಡೆದಿದೆ. ಗೆದ್ದ ಅಭ್ಯರ್ಥಿಯ ಮತಗಳ ಅಂತರ 17,652 ಆಗಿದೆ.
ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ ಜಯಚಂದ್ರ ಅವರು 86,084 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಜೆಡಿಎಸ್ 56,834 ಮತಗಳನ್ನು ಗಳಿಸಿದರೆ, ಬಿಜೆಪಿ 42,329 ಮತಗಳನ್ನು ಪಡೆದಿದೆ. ಕೈ ಅಭ್ಯರ್ಥಿಯ ಗೆಲುವಿನ ಅಂತರ 29,250 ಮತಗಳಾಗಿದೆ.
ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಪರಮೇಶ್ವರ್ 79,999 ಮತಗಳನ್ನು ಪಡೆದು ಗೆದ್ದಿದ್ದಾರೆ. ಜೆಡಿಎಸ್ ಪಡೆದ ಮತಗಳು 64,752 ಆದರೆ, ಬಿಜೆಪಿ 24,091 ಮತಗಳನ್ನು ಪಡೆದಿದೆ. ಪರಮೇಶ್ವರ್ ಅವರ ಗೆಲುವಿನ ಅಂತರ 14,347 ಮತಗಳಾಗಿವೆ.
ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜ್ಯೋತಿ ಗಣೇಶ್ 59,165 ಮತಗಳನ್ನು ಪಡೆದು ಗೆಲುವು ಪಡೆದಿದ್ದಾರೆ. ಜೆಡಿಎಸ್ 55,967 ಮತಗಳನ್ನು ಪಡೆದರೆ, ಕಾಂಗ್ರೆಸ್ 46,900 ಮತಗಳನ್ನು ಪಡೆದಿದೆ. ಗೆದ್ದ ಅಭ್ಯರ್ಥಿಯ ಗೆಲುವಿನ ಅಂತರ 3,198 ಮತಗಳಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಕೈಹಿಡಿದ ಕೊಡಗಿನ ಕಾವೇರಿ – ಎರಡೂ ಕ್ಷೇತ್ರದಲ್ಲಿ ಬಿಜೆಪಿಗೆ ಸೋಲು