ಬೆಂಗಳೂರು: ಈ ಬಾರಿ ಕರ್ನಾಟಕದಲ್ಲಿ (Karnataka Election) ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು (Exit Polls) ಭವಿಷ್ಯ ನುಡಿದ ಬೆನ್ನಲ್ಲೇ ಮತ್ತೆ ರಾಜ್ಯದಲ್ಲಿ ರೆಸಾರ್ಟ್ ರಾಜಕೀಯ (Resort Politcs) ಶುರುವಾಗುವ ಸಾಧ್ಯತೆಯಿದೆ.
ಈಗಾಗಲೇ ಚುನಾವಣೆಯಲ್ಲಿ ಗೆಲ್ಲುವ ಉತ್ಸಾಹದಲ್ಲಿ ಕಾಂಗ್ರೆಸ್ (Congress) ಇದೆ. ಹೀಗಿದ್ದರೂ ದಾಖಲೆ ಪ್ರಮಾಣದಲ್ಲಿ ಮತದಾನ ನಡೆದಿರುವ ಕಾರಣ ಫಲಿತಾಂಶ ಏರುಪೇರಾಗುವ ಸಾಧ್ಯತೆಯಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಬಿಜೆಪಿ (BJP) ಸರ್ಕಾರ ರಚನೆ ಮಾಡದೇ ಇರಲು ಈಗಲೇ ಕಾಂಗ್ರೆಸ್ ಪಕ್ಷೇತರರಿಗೆ ಗಾಳ ಹಾಕಿದೆ. ಇದನ್ನೂ ಓದಿ: ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿದ ಸುದ್ದಿ ಓದಲು ಕ್ಲಿಕ್ ಮಾಡಿ: ಕರ್ನಾಟಕ ಚುನಾವಣಾ ಫಲಿತಾಂಶ
ಪಕ್ಷೇತರರು ಅಲ್ಲದೇ ಆಪರೇಷನ್ ಕಮಲ (Operation Kamala) ತಪ್ಪಿಸಲು ಅಭ್ಯರ್ಥಿಗಳ ಮೇಲೆ ಕಾಂಗ್ರೆಸ್ ನಿಗಾ ಇಟ್ಟಿದೆ. ಹೈದರಾಬಾದ್, ಬೆಂಗಳೂರಿಗೆ ಕೈ ಅಭ್ಯರ್ಥಿಗಳನ್ನು ಶಿಫ್ಟ್ ಮಾಡಲು ಪ್ಲಾನ್ ಮಾಡಲಾಗಿದೆ. ಪ್ರತಿ ಜಿಲ್ಲೆಗೆ ಇಬ್ಬಿಬ್ಬರು ಉಸ್ತುವಾರಿಗಳನ್ನು ಕಾಂಗ್ರೆಸ್ ನೇಮಕ ಮಾಡಿದೆ.
ಎಲ್ಲಾ ಜಿಲ್ಲೆಗಳಲ್ಲಿ ಕಾಂಗ್ರೆಸ್‍ನ ಇಬ್ಬರು ಉಸ್ತುವಾರಿಗಳನ್ನು ನೇಮಿಸಿದ ಡಿಕೆ ಶಿವಕುಮಾರ್, ಪ್ರತಿ ಜಿಲ್ಲೆಯ ಕಾಂಗ್ರೆಸ್ ಶಾಸಕರನ್ನು ಶನಿವಾರ ರಾತ್ರಿ ಒಳಗೆ ಬೆಂಗಳೂರಿಗೆ ಕರೆತರುವ ಹೊಣೆಯನ್ನು ನೀಡಿದ್ದಾರೆ. ಇಷ್ಟೇ ಅಲ್ಲದೇ ಗೆದ್ದ ಪಕ್ಷೇತರ ಶಾಸಕರನ್ನು ಮನವೊಲಿಸಿ ಬೆಂಗಳೂರಿಗೆ ಕರೆತರಬೇಕು ಎಂದು ಸೂಚನೆ ನೀಡಲಾಗಿದೆ.
ಈಗಾಗಲೇ ಖರ್ಗೆ ನಿವಾಸದಲ್ಲಿ ಕಾಂಗ್ರೆಸ್ ಹೈವೋಲ್ಟೇಜ್ ಮೀಟಿಂಗ್ ಮಾಡಿದ್ದು ಖರ್ಗೆ, ಸುರ್ಜೇವಾಲಾ, ಡಿಕೆ ಸಹೋದರರು ಚರ್ಚೆ ನಡೆಸಿದ್ದಾರೆ. ಪುಲಕೇಶಿನಗರ ಅಖಂಡ ಶ್ರೀನಿವಾಸ ಮೂರ್ತಿ, ರಾಣೆಬೆನ್ನೂರಿನ ಆರ್.ಶಂಕರ್ , ಹರಪನಹಳ್ಳಿ ಲತಾ ಮಲ್ಲಿಕಾರ್ಜುನ್ ಮೇಲೆ ಸಿದ್ದರಾಮಯ್ಯ ಟೀಂ, ತರಿಕೆರೆಯ ಗೋಪಿ ಕೃಷ್ಣ, ಗೌರಿ ಬಿದನೂರು ಪುಟ್ಟಸ್ವಾಮಿಗೌಡ ಮೇಲೆ ಡಿಕೆಶಿ ತಂಡ ನಿಗಾ ಇಟ್ಟಿದೆ.