ದಾವಣಗೆರೆ : ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ಪರಾಜಿತ ಅಭ್ಯರ್ಥಿ ಎಂ.ಪಿ ರೇಣುಕಾಚಾರ್ಯ (MP Renukacharya) ಘೋಷಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿವೃದ್ಧಿ ಕೆಲಸ, ಕೋವಿಡ್‍ನಲ್ಲಿ ಜೀವ ಹಂಗು ತೊರೆದರೂ ಜನರು ಸೋಲಿಸಿದರು. ರಾಜಕೀಯದಿಂದ ನಿವೃತ್ತಿ ಪಡೆದು, ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಅವರ ಪರವಾಗಿ ಕೆಲಸ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಚುನಾವಣೆಗೆ (Election) ಬರುವುದಿಲ್ಲ ಎಂದು ಹೇಳಿದರು.
ಒಂದು ಸುತ್ತಿನಲ್ಲೂ ಮುನ್ನಡೆ ಸಾಧಿಸದೆ ಇರುವುದಕ್ಕೆ ರೇಣುಕಾಚಾರ್ಯ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ನಾನು ಕ್ಷೇತ್ರದ ಜನರಿಗೆ ಹಗಲಿರುಳು ಕೆಲಸ ಮಾಡಿದೆ. ಆದರೂ ಈ ರೀತಿ ಸೋಲು ಆಯ್ತಲ್ಲ ಅಂತ ನೋವಿನಿಂದ ಕಣ್ಣೀರು ಹಾಕಿದರು. ಇದನ್ನೂ ಓದಿ: ಸಿದ್ಧಾಂತದ ಸೋಲಲ್ಲ, ವೈಯಕ್ತಿಕ ಸೋಲು: ಸಿ.ಟಿ ರವಿ
ರೇಣುಕಾಚಾರ್ಯ ನಿವಾಸದ ಮುಂದೆ ಜಮಾಯಿಸಿದ ಅಭಿಮಾನಿಗಳು ಜಮಾಯಿಸಿ ರೇಣುಕಾಚಾರ್ಯಗೆ ಧೈರ್ಯವನ್ನು ತುಂಬಿದರು. ಈ ವೇಳೆ ಹರಿಹರದ ಶಾಸಕ ಬಿಪಿ ಹರೀಶ್ ಕೂಡ ಎಂಪಿ ರೇಣುಕಾಚಾರ್ಯಗೆ ಸಮಾಧಾನ ಮಾತುಗಳನ್ನಾಡಿದರು. ಇದನ್ನೂ ಓದಿ: ದಾವಣಗೆರೆಯಲ್ಲಿ 8ರಲ್ಲಿ 6 ಕಾಂಗ್ರೆಸ್ ತೆಕ್ಕೆಗೆ – ಬಿಜೆಪಿಗೆ ಹೀನಾಯ ಸೋಲು