ರಾಮನಗರ: ರಾಮನಗರ (Ramanagara) ಕ್ಷೇತ್ರದಲ್ಲಿ ಸೋಲನುಭವಿಸಿದ ನಿಖಿಲ್ ಕುಮಾರಸ್ವಾಮಿಗೆ (Nikhil Kumaraswamy) ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಕರೆ ಮಾಡಿ ಸಾಂತ್ವನ ಹೇಳಿದ್ದಾರೆ.
ಫೋನ್ ಮೂಲಕ ಸಾಂತ್ವನ ಹೇಳಿದ ಡಿಕೆಶಿ, ನೀನು ಎರಡು ಬಾರಿ ಸೋತಿದ್ದೀಯಾ, ಆದರೆ ನಿನಗೆ ರಾಜಕೀಯ ಕುಟುಂಬದ ಹಿನ್ನೆಲೆ ಇದೆ. ನನಗೆ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದೇ ಇಷ್ಟು ಮಟ್ಟಕ್ಕೆ ಬೆಳೆದಿದ್ದೇನೆ. ಈ ಸೋಲಿನಿಂದ ಕಂಗೆಡಬೇಡ, ಕ್ಷೇತ್ರದಲ್ಲಿ ಓಡಾಟ ನಡೆಸಿ ಜನರ ಜೊತೆ ನಿಲ್ಲಬೇಕು. ಸೋಲಿನಿಂದ ಹತಾಶನಾಗಬೇಡ ಎಂದು ಧೈರ್ಯ ತುಂಬಿದ ಅವರು, ರಾಜಕೀಯದಲ್ಲಿ ಏಳು- ಬೀಳು ಸಹಜ. ಮುಂದಿನ ದಿನಗಳಲ್ಲಿ ನಿನಗೆ ರಾಜಕೀಯದಲ್ಲಿ ಭವಿಷ್ಯ ಇದೆ ಎಂದು ಹಾರೈಸಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಸೋತರೂ ರಾಮನಗರದ ಮನೆ ಮನೆಗೆ ತೆರಳಿ ಧನ್ಯವಾದ ತಿಳಿಸಿದ ನಿಖಿಲ್
ಈ ಬಾರಿಯ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ (JDS) ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯನ್ನು ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ಪರಾಭವಗೊಳಿಸಿ ಭರ್ಜರಿ ಗೆಲುವು ದಾಖಲಿಸಿದ್ದರು. ಈ ಹಿಂದೆ ಮಂಡ್ಯ (Mandya) ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗಲೂ ಸುಮಲತಾ ವಿರುದ್ಧ ಸೋಲನುಭವಿಸಿದ್ದರು. ಇದೀಗ ಸತತ ಸೋಲಿನಿಮದ ಕಂಗೆಟ್ಟಿದ ನಿಖಿಲ್ ಕುಮಾರಸ್ವಾಮಿಗೆ ಡಿಕೆ ಶಿವಕುಮಾರ್ ಸಮಾಧಾನ ತಿಳಿಸಿದರು. ಇದನ್ನೂ ಓದಿ: ರಾಮನಗರದಲ್ಲಿ ಜೆಡಿಎಸ್‍ಗೆ ಶಾಕ್ – 3 ಕ್ಷೇತ್ರಗಳಲ್ಲಿ ಕಾಂಗ್ರೆಸ್‍ಗೆ ಗೆಲುವು