ಚಿಕ್ಕಬಳ್ಳಾಪುರ: ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಬಂದಿದ್ದ ಸಚಿವ ಸುಧಾಕರ್ (Sudhakar) ಚಿಕ್ಕಬಳ್ಳಾಪುರ (Chikkaballapura) ವಿಧಾನಸಭಾ ಕ್ಷೇತ್ರದಲ್ಲಿ ಸೋತಿದ್ದಾರೆ. ಕಾಂಗ್ರೆಸ್‌ನ ಪ್ರದೀಪ್ ಈಶ್ವರ್ (Pradeep Eshwar) ಗೆಲುವು ಸಾಧಿಸಿದ್ದಾರೆ. ಸುಧಾಕರ್ 75,582 ಮತಗಳನ್ನ ಪಡೆದರೆ, ಪ್ರದೀಪ್ ಈಶ್ವರ್ 86,224 ಮತಗಳನ್ನ ಪಡೆದು 10,642 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.
ರಾಜಕಾರಣಕ್ಕೆ ಹೊಸದಾಗಿ ಪಾದಾರ್ಪಣೆ ಮಾಡಿ ತಿಂಗಳ ಕಾಲ ಚುನಾವಣಾ ಪ್ರಚಾರ ಮಾಡಿದ ಪ್ರದೀಪ್ ಈಶ್ವರ್ ಸುಧಾಕರ್ ವಿರುದ್ದ ಅಬ್ಬರದ ಭಾಷಣ ಮಾಡುವ ಮೂಲಕ ಸಿನಿಮಾ ಡೈಲಾಗ್ ಹೊಡೆದು ಜನರ ಮನ ಗೆದ್ದಿದ್ದಾರೆ.
Advertisement
ಚಿಕ್ಕಬಳ್ಳಾಪುರದ ನನ್ನ ಪ್ರೀತಿಯ ಬಂಧುಗಳೇ… pic.twitter.com/QYhvvzjdAB
— Dr Sudhakar K (@mla_sudhakar) May 13, 2023
Advertisement
ಸುಧಾಕರ್ ಸಹ ಅಬ್ಬರದ ಪ್ರಚಾರದ ಮಾಡಿ ಅಭಿವೃದ್ದಿಯ ಕಾರ್ಯಗಳ ಪ್ರಚಾರ ಮಾಡುವ ಮೂಲಕ ಸ್ಟಾರ್ ಸಿನಿ ಪ್ರಚಾರಕರ ಮೂಲಕ ಮತಯಾಚನೆ ಮಾಡಿದ್ದರು. ಆದರೆ ಆ ಎಲ್ಲಾ ಪ್ರಯತ್ನಗಳು ಫಲಪ್ರದವಾಗಲಿಲ್ಲ. ಇದನ್ನೂ ಓದಿ: Karnataka Election 2023 Result – ಕಾಂಗ್ರೆಸ್ 136, ಬಿಜೆಪಿ 65, ಜೆಡಿಎಸ್ 19 ಮುನ್ನಡೆ LIVE Updates
Advertisement
Advertisement
ಕೊನೆಗೆ ಚುನಾವಣಾ ದಿನದವರೆಗೂ ಕಾಂಗ್ರೆಸ್-ಬಿಜೆಪಿ-ನೆಕ್ ಟು ನೆಕ್ ಜೆಡಿಎಸ್ ಸಹ ಪೈಪೋಟಿ ಕೊಟ್ಟಿದ್ದು ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಆದರೆ ಚುನಾವಣೆ ದಿನದಂದು ಜೆಡಿಎಸ್ ಆರ್ಥಿಕ ಸಂಪನ್ಮೂಲದ ಕೊರತೆಯಿಂದ ತಮ್ಮ ಗೆಲುವು ಅಸಾಧ್ಯ ಅಂತ ಅರಿತು ಒಳಗೊಳಗೆ ಕಾಂಗ್ರೆಸ್ ಗೆ ಕೈ ಹಿಡಿದ ಕಾರಣ ಕಾಂಗ್ರೆಸ್ ಗೆಲುವು ದಾಖಲಿಸಿದೆ. ಪ್ರದೀಪ್ ಈಶ್ವರ್ ಗೆದ್ದು ಬೀಗಿದ್ದಾರೆ. ಸರಿಸುಮಾರು 45-50 ಸಾವಿರ ಮತಗಳ ನೀರಿಕ್ಷೆ ಹೊಂದಿದ್ದ ಜೆಡಿಎಸ್ ಪಕ್ಷಕ್ಕೆ 19 ಸಾವಿರ ಮತಗಳು ಸಿಕ್ಕಿವೆ.
2018ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಸುಧಾಕರ್ 82 ಸಾವಿರ ಮತಗಳನ್ನು ಪಡೆದಿದ್ದರೆ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಕೆ.ಪಿ. ಬಚ್ಚೇಗೌಡ 29 ಸಾವಿರ ಮತಗಳನ್ನು ಪಡೆದಿದ್ದರು.