ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದ ಬೊಮ್ಮಾಯಿ

Public TV
1 Min Read
Basavaraj Bommai 1 1

– ಜೆಡಿಎಸ್‌ನವರು ಯಾರೂ ಸಂಪರ್ಕದಲ್ಲಿ ಇಲ್ಲ: ಸಿಎಂ

ಹುಬ್ಬಳ್ಳಿ : ಹುಬ್ಬಳ್ಳಿಯಿಂದ (Hubballi) ಶಿಗ್ಗಾವಿಗೆ (Shiggavi) ತೆರಳುವಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಆದರ್ಶ ನಗರದಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ವಿಶೇಷ ಪೂಜೆ ಸಲ್ಲಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್‌ನವರು (JDS) ಯಾರೂ ಸಂಪರ್ಕದಲ್ಲಿ ಇಲ್ಲ. ಇವತ್ತು ಕರ್ನಾಟಕ ವಿಧಾನ ಸಭೆಯ ಫಲಿತಾಂಶದ ದಿನ ಈ ಫಲಿತಾಂಶ ಬಹಳಷ್ಟು ಮುಖ್ಯ. ರಾಜ್ಯ, ಅಭಿವೃದ್ಧಿ, ಜನರ, ರಾಜಕೀಯ ದೃಷ್ಟಿಯಿಂದ ಬಹಳಷ್ಟು ಮುಖ್ಯ. ಮುಂದಿನ ಐದು ವರ್ಷದ ರಾಜ್ಯ ಅಭಿವೃದ್ಧಿ ಮತ್ತು ಸುರಕ್ಷಿತವಾಗಿ‌ ನಾಡು ಮಾಡುವ ನಿಟ್ಟಿನಲ್ಲಿ ಜನ ಮತ ನೀಡಿದ್ದಾರೆಂಬ ನಂಬಿಕೆಯಿದೆ. ನಮ್ಮ ಬಿಜೆಪಿ ಸ್ಪಷ್ಟ ಬಹುಮತದಿಂದ ಜಯ ಸಾಧಿಸಲಿದೆ ಎಂಬ ವಿಶ್ವಾಸವಿದೆ ಎಂದರು. ಇದನ್ನೂ ಓದಿ: ಕಾಲಿಗೆ ಮೊಬೈಲ್‌ ಕಟ್ಟಿಕೊಂಡು, ಕೇಸರಿ ಶಾಲು ಹಾಕ್ಕೊಂಡು ಮತ ಎಣಿಕೆಗೆ ಬಂದಿದ್ದ ಏಜೆಂಟ್‌ ವಾಪಸ್‌

WhatsApp Image 2023 05 13 at 8.23.00 AM

ಜನ ಶಾಂತಿಯುತ ಮತದಾನ ಮಾಡಿದ್ದಾರೆ. ಶಾಂತಿಯುತ ಮತದಾನ ಮಾಡಿದ್ದಕ್ಕೆ ಕೃತಜ್ಞತೆ. ಅದೇ ರೀತಿ ಮತ ಎಣಿಕೆಯಲ್ಲಿ ಸಹ ಎಲ್ಲರೂ ಶಾಂತಿಯುತವಾಗಿ ವರ್ತನೆ ಮಾಡಬೇಕು. ಕೆಲವೇ ತಾಸುಗಳಲ್ಲಿ ಹಲವಾರು ಟ್ರೆಂಡ್‌ಗಳು ಹೊರಬರುತ್ತವೆ. ಅಂಕಿ ಅಂಶಗಳು ಸಹ ಹೊರ ಬರುತ್ತವೆ. ಇದರ ಆಧಾರದ ಮೇಲೆ ಅಧಿಕಾರ ನಿರ್ಧಾರವಾಗುತ್ತದೆ. ಆದರೆ ನಮ್ಮ ಪಕ್ಷ ಸಂಪೂರ್ಣ ಬಹುಮತ ಪಡೆಯುವ ವಿಶ್ವಾಸವಿದೆ ಎಂದು ಹೇಳಿದರು. ಇದನ್ನೂ ಓದಿ: Karnataka Election 2023 Result – ರಾಜ್ಯಾದ್ಯಂತ ಮತ ಎಣಿಕೆ ಆರಂಭ LIVE Updates

Share This Article