ಬಳ್ಳಾರಿ: ಸತತ ನಾಲ್ಕು ಬಾರಿ ಶಾಸಕ ಹಾಗೂ ಒಮ್ಮೆ ಸಂಸದರಾಗಿ ಆಯ್ಕೆಯಾಗಿದ್ದ ಶ್ರೀರಾಮುಲು (Sriramulu) ಅವರು ಬಳ್ಳಾರಿ (Ballary) ಗ್ರಾಮೀಣದಲ್ಲಿ ಹೀನಾಯ ಸೋಲನುಭವಿಸಿದ್ದಾರೆ.
ಕಳೆದ ಬಾರಿ ಮೊಳಕಾಲ್ಮೂರು, ಬಾದಾಮಿ ಎರಡೂ ಕಡೆ ನಿಂತು ಮೊಳಕಾಲ್ಮೂರಿನಲ್ಲಿ ಜಯ ಸಾಧಿಸಿದ್ದ ಬಿಜೆಪಿಯ ಮುಂಚೂಣಿ ನಾಯಕ ಬಿ. ಶ್ರೀರಾಮುಲು ಅವರು ಈ ಬಾರಿ ಹೀನಾಯ ಸೋಲು ಅನುಭವಿಸಿದ್ದಾರೆ. ಬಳ್ಳಾರಿ ಗ್ರಾಮಾಂತರದಲ್ಲಿ ಶ್ರೀರಾಮುಲು ವಿರುದ್ಧ ಕಾಂಗ್ರೆಸ್‍ನ (Congress) ಹಾಲಿ ಶಾಸಕ ನಾಗೇಂದ್ರಗೆ ಭರ್ಜರಿ ಜಯ ಸಿಕ್ಕಿದೆ.
ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ನಾಗೇಂದ್ರಗೆ ಭರ್ಜರಿ ಗೆಲುವು ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ನಾಗೇಂದ್ರ ಅಭಿಮಾನಿಗಳು ಹಾಗೂ ಕೈ ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ. ಇದನ್ನೂ ಓದಿ: Karnataka Election 2023 Result – ಚಾಮರಾಜನಗರದಲ್ಲಿ ಸೋಮಣ್ಣಗೆ ಸೋಲು LIVE Updates
ಈ ಬಾರಿ ಕ್ಷೇತ್ರದಲ್ಲಿ ಒಟ್ಟು 8 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಕ್ಷೇತ್ರದಲ್ಲಿ ಒಟ್ಟು 1,16,096 ಪುರುಷ ಮತದಾರರು, 1,22,181 ಮಹಿಳೆಯರು, 49 ಇತರ ಮತದಾರರು ಸೇರಿ ಒಟ್ಟು 2,38,326 ಮತದಾರರು ಮತದಾನದ ಹಕ್ಕು ಹೊಂದಿದ್ದರು. ಮೇ 10ರಂದು ನಡೆದಿದ್ದ ಮತದಾನದ ವೇಳೆ ಕ್ಷೇತ್ರದಲ್ಲಿ ಶೇ.76.09ರಷ್ಟು ಸಾಧಾರಣ ಮತದಾನ ನಡೆದಿತ್ತು. ಇದನ್ನೂ ಓದಿ: ಈ ಬಾರಿ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬರುತ್ತೇವೆ: ಸಿದ್ದರಾಮಯ್ಯ