ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ (Karnataka Election Result) ಬಹುತೇಕ ಖಚಿತವಾಗಿದೆ. ಸ್ಪಷ್ಟ ಬಹುಮತ ಕಾಂಗ್ರೆಸ್‌ಗೆ (Congress) ಬಂದಿದ್ದು, ಅಧಿಕಾರ ಹಿಡಿಯಲು ಎಲ್ಲಾ ರೀತಿಯ ಸಿದ್ಧತೆಯನ್ನು ಮಾಡಿಕೊಂಡಿದೆ.
ಈ ನಡುವೆ ಬಿಜೆಪಿ (BJP) ಹಾಗೂ ಜೆಡಿಎಸ್ (JDS) ಹೀನಾಯ ಸೋಲು ಅನುಭವಿಸಿದೆ. ಕೇವಲ 20 ಸೀಟುಗಳನ್ನು ಗೆದ್ದಿರುವ ಜೆಡಿಎಸ್ ಎಡವಿರುವುದಕ್ಕೆ ಕೆಲವು ಕಾರಣಗಳು ಇಲ್ಲಿವೆ.
Advertisement
Advertisement
* ಹಳೆ ಮೈಸೂರು ಭಾಗದಲ್ಲಿ ಬಿಟ್ಟು ಉಳಿದ ಭಾಗದಲ್ಲಿ ಪ್ರಬಲ ಅಭ್ಯರ್ಥಿಗಳ ಕೊರತೆ.
* ಹಳೆ ಮೈಸೂರು ಭಾಗದಲ್ಲಿ ಕಳೆದ ಬಾರಿ ಹೆಚ್ಚು ಸ್ಥಾನ ಕೊಟ್ಟರೂ ಕ್ಷೇತ್ರಗಳ ಅಭಿವೃದ್ಧಿ ಅಗಿಲ್ಲ ಅನ್ನೋ ಆರೋಪ.
* ಕುಮಾರಸ್ವಾಮಿ ಒಬ್ಬರೇ ಇಡೀ ರಾಜ್ಯ ಸುತ್ತಿ ಓಡಾಡಿದ್ದು. ಮತ ತರುವ ಪರ್ಯಾಯ ನಾಯಕರು ಇಲ್ಲದೆ ಇರೋದು.
* ಬಿಜೆಪಿ-ಕಾಂಗ್ರೆಸ್‌ನಷ್ಟು ಆರ್ಥಿಕ ಸಂಪನ್ಮೂಲ ಕ್ರೋಢೀಕರಣ ಇಲ್ಲದೆ ಇರೋದು.
* ದೇವೇಗೌಡರ ಅನಾರೋಗ್ಯದಿಂದ ಹೆಚ್ಚು ಪ್ರಚಾರ ಮಾಡದೇ ಇರೋದು.
* ಕಾಂಗ್ರೆಸ್-ಬಿಜೆಪಿಯಂತೆ ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಪಡೆ ಇಲ್ಲದೆ ಇರೋದು.
* ಬಿಜೆಪಿ-ಕಾಂಗ್ರೆಸ್‌ನಂತೆ ಜೆಡಿಎಸ್‌ನಲ್ಲಿ 2ನೇ ಹಂತದ ನಾಯಕರು ಇಲ್ಲದೆ ಇರೋದು.
* ಸಮ್ಮಿಶ್ರ ಸರ್ಕಾರ ಬಂದರೆ ಮತ್ತೆ ಅನ್ಯ ಪಕ್ಷಗಳ ಜೊತೆ ಕೈ ಜೋಡಿಸಬಹುದು ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ಗೆ ಹಳೆ ಮೈಸೂರು ಭಾಗದಲ್ಲಿ ಮತದಾರ ಮತ ಹಾಕಿರೋದು.
* ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಆಗಿದ್ದಾಗ ಕಾರ್ಯಕರ್ತರಿಗೆ ಅಧಿಕಾರ ನೀಡದೇ ಇರೋದು.
* ಸಿಎಂ ಆಗಿದ್ದಾಗ ಜನರಿಗೆ ಸಿಗದೇ ಐಶಾರಾಮಿ ಹೋಟೆಲ್‌ನಲ್ಲೆ ಹೆಚ್ಚು ಇದ್ದರು ಎಂಬ ಆರೋಪ. ಇದನ್ನೂ ಓದಿ: Karnataka Election 2023 Result – ಕಾಂಗ್ರೆಸ್ 135, ಬಿಜೆಪಿ 65, ಜೆಡಿಎಸ್ 20 ಮುನ್ನಡೆ LIVE Updates