ದಾವಣಗೆರೆ: ಶಾಸಕ ಎಂ.ಪಿ ರೇಣುಕಾಚಾರ್ಯ (MP Renukacharya) ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದು, ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.
ಬಿಎಲ್ ಸಂತೋಷ್ (B.L Santhosh) ಹಾಗೂ ನಳಿನ್ ಕುಮಾರ್ ಕಟೀಲ್ ವಿರುದ್ಧವೇ ರೇಣುಕಾಚಾರ್ಯ ಬೆಂಬಲಿಗರು ಕಿಡಿಕಾರಿದ್ದಾರೆ. ಹೊನ್ನಾಳಿಯಲ್ಲಿ ರೇಣುಕಾಚಾರ್ಯ ನಿವಾಸದ ಮುಂದೆ ಜಮಾಯಿಸಿದ ಬೆಂಬಲಿಗರು, ಬಿಎಲ್ ಸಂತೋಷ್ ರಾಜ್ಯವನ್ನು ಬಿಟ್ಟು ತೊಲಗಬೇಕಿದೆ. ಆಗ ಮಾತ್ರ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಹೇಳುತ್ತಾ ಬಿಎಲ್ ಸಂತೋಷ್ ವಿರುದ್ದ ಧಿಕ್ಕಾರ ಕೂಗಿದ್ದಾರೆ.
Advertisement
Advertisement
ಯಡಿಯೂರಪ್ಪ (BS Yediyurappa) ರನ್ನು ಕೆಳಗೆ ಇಳಿಸಿ ಲಿಂಗಾಯತರನ್ನು ಕಡೆಗಣಿಸಿದ ಪರಿಣಾಮ ಇದಾಗಿದೆ. ಬಿಎಲ್ ಸಂತೋಷ್ ಇರೋವರೆಗೂ ಬಿಜೆಪಿ ಗೆಲ್ಲೋದಿಲ್ಲ. ಬಿಎಲ್ ಸಂತೋಷ್ ರಾಜ್ಯ ಬಿಟ್ಟು ತೊಲಗಲಿ ಎಂದು ಕಾರ್ಯಕರ್ತರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಸೋಮವಾರ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕಟೀಲ್ ರಾಜೀನಾಮೆ?
Advertisement
ಕೋವಿಡ್ ಸಂದರ್ಭದಲ್ಲಿ ಪ್ರಾಣ ಒತ್ತೇ ಇಟ್ಟು ಕೆಲಸ ಮಾಡಿದ್ದಾರೆ. ಅಂತವರು ಸೋಲಬೇಕು ಎಂದರೆ ಇದೇ ಕಾರಣ. 70 ಜನ ಹೊಸಾ ಮುಖಕ್ಕೆ ಟಿಕೆಟ್ ನೀಡಿ ಕೈ ಸುಟ್ಟುಕೊಂಡರು. ಇದೆಲ್ಲ ಸಂತೋಷ್ ಜೀಯ ಪ್ಲಾನ್‍ನಿಂದಲೇ ಬಿಜೆಪಿ ಸೋತಿದ್ದು ಎಂದು ಕಿಡಿಕಾರಿದ್ದಾರೆ.