ಚಿಕ್ಕಬಳ್ಳಾಪುರ: ತೀವ್ರ ಕುತೂಹಲ ಮೂಡಿಸಿದ್ದ ಚಿಕ್ಕಬಳ್ಳಾಪುರದಲ್ಲಿ (Chikkaballapur) ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ (K Sudhakar) ಸೋತಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆ (Karnataka Election Results)ಇದೀಗ ಕೊನೆ ಹಂತ ತಲುಪಿದೆ. ಬಿಜೆಪಿಯ (BJP) ಘಟಾನುಘಟಿ ನಾಯಕರ ಹೀನಾಯ ಸೋಲಾಗಿದ್ದು ಕಾಂಗ್ರೆಸ್ (Congress) ಗೆಲುವಿನ ಹಾದಿಯಲ್ಲಿದೆ.
ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆಗೆ ಇಳಿದಿದ್ದ ಪ್ರದೀಪ್ ಈಶ್ವರ್‌ಗೆ ಗೆಲುವಾಗಿದೆ. 57,878 ಮತಗಳನ್ನು ಗಳಿಸಿದ ಸುಧಾಕರ್ ಅವರನ್ನು ಪ್ರದೀಪ್ ಈಶ್ವರ್ 69,008 ಮತಗಳನ್ನು ಗಳಿಸುವ ಮೂಲಕ ಸೋಲಿಸಿದ್ದಾರೆ. ಇದನ್ನೂ ಓದಿ: ಶ್ರೀರಾಮುಲುಗೆ ಹೀನಾಯ ಸೋಲು
ಕ್ಷೇತ್ರದಿಂದ ಒಟ್ಟು 12 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಒಟ್ಟು 1,43,171 ಮತದಾರರು ಮತದಾನ ಮಾಡಿದ್ದಾರೆ. ಇದನ್ನೂ ಓದಿ: Karnataka Election 2023 Result – ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ; ಸಿಎಂ ಸ್ಥಾನಕ್ಕೆ ಬೊಮ್ಮಾಯಿ ಇಂದು ರಾಜೀನಾಮೆ LIVE Updates