ಬೆಂಗಳೂರು: ಪುಲಕೇಶಿನಗರದಲ್ಲಿ (Pulakeshinagar) ಇಬ್ಬರ ಜಗಳದಲ್ಲಿ ಮೂರನೇಯವರಿಗೆ ಲಾಭವಾಗಿದ್ದು ಪರಮೇಶ್ವರ್ (Parameshwar) ಆಪ್ತನಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿದೆ.
ಮನೆಗೆ ಬೆಂಕಿ ಬಿದ್ದವರಿಗೂ ಇಲ್ಲ. ಬೆಂಕಿ ಹಾಕಿದ ಆರೋಪ ಹೊತ್ತವರಿಗೂ ಟಿಕೆಟ್ ಸಿಕ್ಕಿಲ್ಲ. ಇಬ್ಬರ ನಡುವಿನ ಜಗಳ ಎರಡು ಬಣದ ನಡುವಿನ ಫೈಟ್ ಮೂರನೇ ಬಣಕ್ಕೆ ನೆರವಾಗಿದೆ.
Advertisement
ಕೆಜಿಹಳ್ಳಿ ಡಿಜೆಹಳ್ಳಿ ಗಲಾಟೆಯ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ (Akhanda Srinivas Murthy) ಮನೆಗೆ ಬೆಂಕಿ ಬಿದ್ದಿತ್ತು. ಸಂಪತ್ ರಾಜ್ ಮೇಲೆ ಬೆಂಕಿ ಹಾಕಿಸಿದ ಆರೋಪ ಬಂದಿತ್ತು.
Advertisement
Advertisement
ಪರಿಶಿಷ್ಟ ವರ್ಗಕ್ಕೆ ಮೀಸಲಾಗಿರುವ ಈ ಕ್ಷೇತ್ರದಲ್ಲಿ ಅನುಕಂಪದ ಆಧಾರದ ಮೇಲೆ ಶ್ರೀನಿವಾಸ ಮೂರ್ತಿ ಅವರಿಗೆ ಟಿಕೆಟ್ ನೀಡುವಂತೆ ಸಿದ್ದರಾಮಯ್ಯ (Siddaramaiah) ಲಾಬಿ ಮಾಡಿದ್ದರೆ ಮಾಜಿ ಬಿಬಿಎಂಪಿ ಮೇಯರ್ ಸಂಪತ್ ರಾಜ್ (Sampath Raj) ಪರ ಡಿಕೆ ಶಿವಕುಮಾರ್ ಬ್ಯಾಟ್ ಬೀಸಿದ್ದರು.
Advertisement
ಇಬ್ಬರ ನಡುವಿನ ಹಗ್ಗಜಗ್ಗಾಟ ಈಗ ಪರಮೇಶ್ವರ್ ಆಪ್ತ ಎ.ಸಿ ಶ್ರೀನಿವಾಸ್‍ಗೆ ಪುಲಿಕೇಶಿನಗರದ ಟಿಕೆಟ್ ಸಿಕ್ಕಿದೆ. ಶ್ರೀನಿವಾಸ್ ಅವರು ದೇವನಹಳ್ಳಿ ಕ್ಷೇತ್ರದಿಂದ ಕಣಕ್ಕೆ ಇಳಿಯಲು ಮುಂದಾಗಿದ್ದರು. ಆದರೆ ಅಲ್ಲಿಯ ಟಿಕೆಟ್ ಕೈ ತಪ್ಪಿದ್ದರೂ ಈಗ ಪುಲಕೇಶಿನಗರದ ಟಿಕೆಟ್ ಸಿಕ್ಕಿದೆ. ಇದನ್ನೂ ಓದಿ: ಬಿಜೆಪಿ ಅಂತಿಮ ಪಟ್ಟಿ ಬಿಡುಗಡೆ – ಈಶ್ವರಪ್ಪಗೆ ಹೈಕಮಾಂಡ್ ಶಾಕ್
ಕಾಂಗ್ರೆಸ್ ಬಿಡುಗಡೆ ಮಾಡಿದ ಮೂರು ಪಟ್ಟಿಯಲ್ಲಿ ತನ್ನ ಹೆಸರು ಇಲ್ಲದ ಕಾರಣ ಅಖಂಡ ಶ್ರೀನಿವಾಸಮೂರ್ತಿ ಈಗಾಗಲೇ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಕಳೆದ ಬಾರಿ ಚುನಾವಣೆಯಲ್ಲಿ ಅಖಂಡ 81 ಸಾವಿರ ಮತಗಳ ಅಂತರದಿಂದ ಭರ್ಜರಿ ಜಯಗಳಿಸಿದ್ದರು. ಶ್ರೀನಿವಾಸಮೂರ್ತಿಗೆ 97,574 ಮತಗಳು ಬಿದ್ದಿದ್ದರೆ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಪ್ರಸನ್ನಕುಮಾರ್‌ಗೆ 15,948 ಮತಗಳು ಸಿಕ್ಕಿತ್ತು. ಬಿಜೆಪಿಯಿಂದ ಸ್ಪರ್ಧಿಸಿದ್ದ ಸುಶೀಲಾ ದೇವರಾಜ್‌ಗೆ 9,479 ಮತಗಳು ಬಿದ್ದಿದ್ದವು.