ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ (Congress) 90 ವರ್ಷ ತುಂಬಿದ ಇಬ್ಬರು ಹಿರಿಯ ನಾಯಕರು ಟಿಕೆಟ್‌ಗಾಗಿ ಪಟ್ಟು ಹಿಡಿದು ಕುಳಿತಿದ್ದು, ಕೈ ಪಾಳಯಕ್ಕೆ ತಲೆ ನೋವಾಗಿದೆ ಎನ್ನಲಾಗಿದೆ. ಎಷ್ಟೇ ಪ್ರಯತ್ನಿಸಿದರೂ ಮನವೊಲಿಕೆ ಆಗುತ್ತಿಲ್ಲ ಏನು ಮಾಡುವುದು ಎಂಬ ಸಂಕಷ್ಟ ಕೈ ನಾಯಕರಿಗೆ ಎದುರಾಗಿದೆ ಎನ್ನಲಾಗುತ್ತಿದೆ.
90 ವರ್ಷ ಮೀರಿದ ಇಬ್ಬರು ನಾಯಕರು ಈಗಲೂ ತಮಗೆ ಟಿಕೆಟ್ ಬೇಕು ಎಂದು ಪಟ್ಟು ಹಿಡಿದು ಕುಳಿತಿದ್ದಾರೆ ಎನ್ನಲಾಗಿದೆ. 90 ವರ್ಷ ದಾಟಿರುವ ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ (Kagodu Thimmappa) ಹಾಗೂ ಶಾಮನೂರು ಶಿವಶಂಕರಪ್ಪ (Shamanur Shivashankarappa). ಒಬ್ಬರದು ನನಗೆ ಇಲ್ಲಾ ನನ್ನ ಮಗಳಿಗೆ ಟಿಕೆಟ್ ಬೇಕು ಎಂಬ ಡಿಮ್ಯಾಂಡ್. ಮಗಳಿಗೆ ಕೊಡದಿದ್ದರೆ ನನಗೆ ಹೊರತು ಬೇರೆಯವರಿಗೆ ಟಿಕೆಟ್ ಕೊಡಬಾರದು. ಇದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಪಟ್ಟಾಗಿದ್ದು, ಹಿರಿಯ ನಾಯಕನ ಪಟ್ಟಿಗೆ ಕೈ ನಾಯಕರೇ ತಲೆ ಕೆಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಸಿಲಿಂಡರ್ ಬ್ಲಾಸ್ಟ್- ಗುಡಿಸಲು ಬೆಂಕಿಗಾಹುತಿ, ಮಗಳ ಚಿಕಿತ್ಸೆಗೆ ತೆಗೆದಿಟ್ಟ ಹಣವೂ ಭಸ್ಮ
Advertisement
Advertisement
ಇನ್ನೊಂದು ಕಡೆ ನನ್ನ ಕುಟುಂಬದಲ್ಲಿ ಬೇರೆಯವರಿಗೆ ಕೊಟ್ಟರು ನಾನು ಒಪ್ಪಲ್ಲ. ಟಿಕೆಟ್ ನನಗೆ ಕೊಡಬೇಕು ಎಂಬ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಹಿರಿಯರಾದ ಶಾಮನೂರು ಶಿವಶಂಕರಪ್ಪ ಈ ಬಾರಿಯೂ ತಮಗೆ ಟಿಕೆಟ್ ಬೇಕು ಎಂದು ಪಟ್ಟು ಹಿಡಿದು ಕುಳಿತಿದ್ದಾರೆ ಎನ್ನಲಾಗಿದೆ. ಇಬ್ಬರು 90+ ನಾಯಕರ ಮನವೊಲಿಸುವಲ್ಲಿ ಕೈ ನಾಯಕರು ವಿಫಲರಾಗಿದ್ದಾರೆ ಎನ್ನಲಾಗಿದೆ. ಇಬ್ಬರೂ 90+ ನಾಯಕರ ಟಿಕೆಟ್ ಡಿಮ್ಯಾಂಡ್ ಅವರನ್ನು ಮನವೊಲಿಕೆ ಸಾಧ್ಯವಾಗದಿರುವುದು ಕಾಂಗ್ರೆಸ್ ಪಾಲಿಗೆ ದೊಡ್ಡ ತಲೆ ಬಿಸಿಯಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಮೋದಿ ಆಗಮನ ಹಿನ್ನೆಲೆ ವೈಮನಸ್ಸು ಮರೆತು ಒಂದಾದ ಬಿಜೆಪಿ ನಾಯಕರು