ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ (Assembly Election) ಹತ್ತಿರವಾಗುತ್ತಿದೆ. ಬಿಜೆಪಿಯಲ್ಲಿ (BJP) ಟಿಕೆಟ್ ಹಂಚಿಕೆ ಕುರಿತು ಚರ್ಚೆಗಳು ಶುರುವಾಗಿದೆ. ಈ ಬಾರಿ ಗೆಲ್ಲುವ ಕುದುರೆಗಳನ್ನು ಮಾತ್ರ ಕಣಕ್ಕೆ ಇಳಿಸುವ ಲೆಕ್ಕಾಚಾರದಲ್ಲಿ ವರಿಷ್ಠರಿದ್ದಾರೆ. ಈ ಬೆನ್ನಲ್ಲೇ ಟಿಕೆಟ್ ವಿತರಣೆಯಲ್ಲಿ ಗುಜರಾತ್ ಮಾಡೆಲ್ (Gujarat model) ಜಾರಿಗೊಳಿಸುವ ಸಾಧ್ಯತೆ ಬಗ್ಗೆ ಪಕ್ಷದ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಆಡಳಿತ ವಿರೋಧಿ ಅಲೆಯನ್ನು ಬೇಗನೇ ಗ್ರಹಿಸಿ ಹಾಲಿ ಶಾಸಕರಿಗೆ ಕೊಕ್ ನೀಡುವ ಸೂತ್ರ ಹೆಣೆಯುವ ಸಾಧ್ಯತೆ ಇದೆ. ಬಿಜೆಪಿ ಹೈಕಮಾಂಡ್ ಇತ್ತೀಚೆಗೆ ನಡೆದ ಗುಜರಾತ್ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಇದೇ ತಂತ್ರ ಪ್ರಯೋಗಿಸಿತ್ತು. ಈ ಹೊಸ ಪ್ರಯೋಗ ಬಿಜೆಪಿಗೆ ಗುಜರಾತ್‌ನಲ್ಲಿ ಶೇ.95 ರಷ್ಟು ಯಶಸ್ಸು ತಂದುಕೊಟ್ಟಿದೆ. ಇದೇ ನಿರೀಕ್ಷೆಯನ್ನು ರಾಜ್ಯದಲ್ಲೂ ಹೊಂದಲಾಗಿದೆ.
Advertisement
Advertisement
ಗುಜರಾತ್‌ನಲ್ಲಿ ಶಾಸಕರ ಕ್ಷೇತ್ರಗಳಲ್ಲಿ ಆಂತರಿಕ ಸಮೀಕ್ಷೆ ನಡೆಸಿ ಎಲ್ಲೆಲ್ಲಿ ಆಡಳಿತ ವಿರೋಧಿ ಅಲೆ ಇದೆ ಎಂದು ಕರಾರುವಾಕ್ಕಾಗಿ ಕಂಡುಕೊಳ್ಳಲಾಗಿತ್ತು. ಆಂತರಿಕ ಸಮೀಕ್ಷೆಯಂತೆ ಗುಜರಾತ್‌ನ 45 ವಿಧಾನಸಭೆ ಕ್ಷೇತ್ರಗಳಲ್ಲಿನ ಹಾಲಿ ಶಾಸಕರ ಬದಲಿಗೆ ಹೊಸ ಮುಖಗಳಿಗೆ ಬಿಜೆಪಿ ಮಣೆ ಹಾಕಿತ್ತು. ಆ ಪೈಕಿ 43 ಮಂದಿ ಜಯ ಗಳಿಸಿದ್ದರು. ಈ ಬಾರಿ ರಾಜ್ಯದಲ್ಲೂ ಬಿಜೆಪಿಯಲ್ಲಿ ಟಿಕೆಟ್ ಹಂಚಿಕೆಗೆ ಗುಜರಾತ್ ಮಾಡೆಲ್ ಅನುಸರಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಟಿಕೆಟ್ ಹಂಚಿಕೆಗೆ ಆಡಳಿತ ವಿರೋಧಿ ಅಲೆಯೂ ಮುಖ್ಯವಾದ ಮಾನದಂಡವೇ ಆಗಿದೆ. ನಮ್ಮಲ್ಲೂ ಆಡಳಿತ ವಿರೋಧಿ ಅಲೆ ಬೇಗನೇ ಗ್ರಹಿಸಲು ಆಂತರಿಕ ಸರ್ವೆಗೆ ಬಿಜೆಪಿ ಹೋಗಿದೆ. ಸರ್ವೆ ಆಧರಿಸಿ ಆಡಳಿತ ವಿರೋಧಿ ಅಲೆ ಇರುವ ಹಾಲಿ ಶಾಸಕರಿಗೆ ಕೊಕ್ ಫಿಕ್ಸ್ ಎನ್ನಲಾಗುತ್ತಿದೆ. ಇದನ್ನೂ ಓದಿ: ಸಂಕಷ್ಟದಲ್ಲಿ ತೊಗರಿ ಬೆಳೆಗಾರರು : ಇಂದು ಸಂಜೆ ಪರಿಹಾರ ಘೋಷಣೆ – ಬೊಮ್ಮಾಯಿ
Advertisement
Advertisement
ಇದೇ ಯಶಸ್ವಿ ಸೂತ್ರವನ್ನು ಕರ್ನಾಟಕದಲ್ಲೂ ಜಾರಿ ಮಾಡಲು ವೇದಿಕೆ ಸಿದ್ಧವಾಗುತ್ತಿದೆ ಎನ್ನಲಾಗಿದೆ. ಪಕ್ಕಾ ಗೆಲ್ಲೋ ಕುದುರೆಗೆ ಮಾತ್ರ ಹೈಕಮಾಂಡ್ ಮಣೆ ಹಾಕಲಿದೆ. ಯಾವುದೇ ಆಡಳಿತಾರೂಢ ಪಕ್ಷಕ್ಕೆ ಆಡಳಿತ ವಿರೋಧಿ ಅಲೆ ದೊಡ್ಡ ಸವಾಲೇ. ಎಷ್ಟೋ ಶಾಸಕರು, ಸಚಿವರ ಕಾರ್ಯವೈಖರಿ ಜನರಿಗೆ ಇಷ್ಟ ಆಗಿಲ್ಲದೆ ಇರಬಹುದು. ಆಗ ಸಹಜವಾಗಿ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗುತ್ತದೆ. ಅದೇ ಅಭ್ಯರ್ಥಿಗೆ ಟಿಕೆಟ್ ಕೊಟ್ಟರೆ ಸೋಲೋ ಸಾಧ್ಯತೆ ಹೆಚ್ಚಾಗಿರುತ್ತದೆ. ಆದರೆ ಕೆಲವೊಮ್ಮೆ ಪಕ್ಷಗಳು ರಿಸ್ಕ್ ತೆಗೆದುಕೊಂಡು ಅದೇ ಶಾಸಕರಿಗೆ ಟಿಕೆಟ್ ಕೊಡಲು ಮುಂದಾಗುತ್ತವೆ. ಆದರೆ ಬಿಜೆಪಿ ಮಾತ್ರ ರಿಸ್ಕ್ ಬೇಡವೇ ಬೇಡ ಎನ್ನುವ ನಿರ್ಧಾರಕ್ಕೆ ಬಂದಂತಿದೆ. ಇದನ್ನೂ ಓದಿ: ಬೊಮ್ಮಾಯಿ ಸಿಎಂ ಆಗ್ತಾರೆ ಅನ್ನಲಿ, ಆಗ ಸಿದ್ದರಾಮಯ್ಯ ಸಿಎಂ ಆಗ್ತಾರೆ – ಸಿ.ಟಿ ರವಿ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k