ಬೆಂಗಳೂರು: ಶನಿವಾರ ರಾಜ್ಯಾದ್ಯಂತ ವಿಧಾಸಭಾ ಚುನಾವಣೆ ಇರೋ ಹಿನ್ನೆಲೆಯಲ್ಲಿ ಮತದಾನ ನಡೆಯಲಿದೆ. ಹೀಗಾಗಿ ಸ್ವಂತ ಊರಿನಿಂದ ದೂರದಲ್ಲಿರುವ ಮತದಾರರು ತಮ್ಮ ಊರಿಗೆ ತೆರಳಬೇಕು ಅಂತಾ ಪ್ಲಾನ್ ಮಾಡಿದ್ದರೆ, ಜೇಬಿನಲ್ಲಿ ಮಾಮೂಲಿಗಿಂತ ಡಬಲ್ ಹಣ ಇಟ್ಟುಕೊಂಡು ಪ್ರಯಾಣಿಸಿ. ಕಾರಣ ಖಾಸಗಿ ಬಸ್‍ಗಳ ಪ್ರಯಾಣ ದರ ದುಪ್ಪಟ್ಟು ಆಗಿದೆ. ಚುನಾವಣಾ ಕಾರ್ಯಕ್ಕಾಗಿ 4,000 ಬಿಎಂಟಿಸಿ ಬಸ್‍ಗಳನ್ನು ನಿಯೋಜನೆ ಮಾಡಲಾಗಿದೆ.
ಚುನಾವಣಾ ಕೆಲಸಕ್ಕಾಗಿ ಕೆಎಸ್‍ಆರ್‍ಟಿಸಿ ಬಸ್ ಗಳು ಬುಕ್ ಆಗಿವೆ. ಸಾಮಾನ್ಯವಾಗಿ ದಿನನಿತ್ಯ ಸಂಚರಿಸುವ ಬಸ್‍ಗಳಿಂತ ಕಡಿಮೆ ಸಂಖ್ಯೆಯಲ್ಲಿ ಬಸ್ ಲಭ್ಯವಾಗಲಿವೆ. ಸಾರಿಗೆ ಬಸ್‍ಗಳ ಸಂಖ್ಯೆ ಕಡಿಮೆ ಇರುವ ಕಾರಣ ಖಾಸಗಿ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ. ಇತ್ತ ತಮ್ಮ ವಾಹನಗಳಿಗೆ ಬೇಡಿಕೆ ಹೆಚ್ಚಾಗ್ತಿದ್ದಂತೆ ಪ್ರಯಾಣ ದರವನ್ನು ಮಾಲೀಕರು ಡಬಲ್, ತ್ರಿಬಲ್ ಮಾಡಿಕೊಂಡಿದ್ದಾರೆ.
Advertisement
ಸಾಮಾನ್ಯ ದಿನಗಳಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿಗೆ 600 ರೂ. ದಿಂದ 800 ರೂ.ವರೆಗೂ ಟಿಕೆಟ್ ಸಿಗುತ್ತೆ. ಇಂದು ಅದೇ ಬೆಲೆಯ ಒಂದು ಸೀಟ್‍ಗೆ 1800 ರೂ. ಏರಿಕೆ ಮಾಡಲಾಗಿದೆ. ಇತ್ತ 500 ರಿಂದ 700ರೂ. ಬೆಂಗಳೂರಿನಿಂದ ಮಂಗಳೂರಿಗಿದ್ದ ಬಸ್ ಚಾರ್ಜ್ 1,500 ರೂ.ವರೆಗೂ ತಲುಪಿದೆ. ಇದೇ ರೀತಿಯಾಗಿ ಎಲ್ಲ ಮಾರ್ಗಗಳ ಪ್ರಯಾಣ ದರ ಬೇಡಿಕೆಗೆ ತಕ್ಕಂತೆ ಏರಿಕೆ ಮಾಡಲಾಗಿದೆ.