ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇನ್ನು 2 ಗಂಟೆಗಳಲ್ಲಿ ಬ್ರೇಕ್ ಬೀಳಲಿದ್ದು, ಚುನಾವಣಾ ನೀತಿ ಸಂಹಿತೆ ಪರಿಣಾಮದಿಂದ ಮದ್ಯ ಖರೀದಿಸಲು ವೈನ್ ಶಾಪ್ ಗಳ ಮುಂದೆ ನೂಕುನುಗ್ಗಲು ಶುರುವಾಗಿದೆ.
ಶನಿವಾರ ರಾಜ್ಯಾದ್ಯಂತ ಮತದಾನ ನಡೆಯಲಿದ್ದು, ಇಂದು ಸಂಜೆ 5 ಗಂಟೆಯಿಂದ ಮದ್ಯದಂಗಡಿಗಳು ಬಂದ್ ಆಗಲಿವೆ. ಇಂದು ಸಂಜೆ 5 ಗಂಟೆಯಿಂದ ಮೇ 12ರ ಮಧ್ಯರಾತ್ರಿವರೆಗೆ ರಾಜ್ಯದ ಎಲ್ಲಾ ಮದ್ಯದಂಗಡಿಗಳನ್ನು ಮುಚ್ಚುವಂತೆ ಚುನಾವಣಾ ಅಧಿಕಾರಿಗಳು ಸೂಚನೆ ನೀಡಿದ್ದರು. ಇದನ್ನೂ ಓದಿ: ಇಂದು ಸಂಜೆಯಿಂದ ಎರಡು ದಿನ ರಾಜ್ಯಾದ್ಯಂತ ಮದ್ಯದಂಗಡಿ ಬಂದ್
Advertisement
ಚುನಾವಣಾ ಆಯೋಗದ ಸೂಚನೆಯಂತೆ ಇಂದು ಸಂಜೆ 5 ಗಂಟೆಗೆ ವೈನ್ ಶಾಪ್ ಗಳ ಮುಚ್ಚುವುದರಿಂದ ವೈನ್ ಶಾಪ್ ಗಳ ಮುಂದೆ ನೂಕುನುಗ್ಗಲು ಶುರುವಾಗಿದೆ. ಮದ್ಯ ಪ್ರಿಯರು ಇನ್ನು ಮತ್ತೆ ಚುನಾವಣೆ ಮುಗಿಯುವವರೆಗೂ ಮದ್ಯೆ ಸಿಗುವುದಿಲ್ಲ ಎಂದು ಎಲ್ಲರೂ ಬಾರ್, ವೈನ್ ಶಾಪ್ ಗಳಿಗೆ ಹೋಗಿ ಮದ್ಯ ಖರೀದಿಸುತ್ತಿದ್ದಾರೆ.
Advertisement
ತಿಂಗಳ ಆರಂಭ ಮತ್ತು ವೀಕೆಂಡ್ ಅಂತಾ ಪಾರ್ಟಿ ಮೂಡ್‍ನಲ್ಲಿರುವ ಮದ್ಯಪ್ರಿಯರಿಗೆ ಚುನಾವಣಾ ಆಯೋಗ ಶಾಕ್ ನೀಡಿದ್ದು, ವಿಧಾನಸಬಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಚುನಾವಣಾ ಆಯೋಗ ಎಲ್ಲ ರೀತಿಯಿಂದಲೂ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುತ್ತಿದೆ.
Advertisement