ಬೆಂಗಳೂರು: ಜನಪ್ರಿಯ ಯೋಜನೆಗಳ ಬಗ್ಗೆ ಪ್ಲ್ಯಾನ್ ಮಾಡಿ, ಬ್ಲೂಪ್ರಿಂಟ್ ಕೊಡಿ. ಮಹಿಳೆಯರು, ರೈತರು, ಶ್ರಮಿಕ ವರ್ಗ ಗಮನದಲ್ಲಿಟ್ಟುಕೊಂಡು ಜನಪ್ರಿಯ ಯೋಜನೆಗಳು ಇರಲಿ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಸೂಚಿಸಿದ್ದಾರೆ ಎನ್ನಲಾಗಿದೆ. ಹಣಕಾಸು ಇಲಾಖೆ ಹಿರಿಯ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ ಎನ್ನಲಾಗಿದ್ದು, ಕಾಂಗ್ರೆಸ್ ಗೃಹಲಕ್ಷ್ಮಿ ಯೋಜನೆಗೆ ಸರಿಯಾಗಿ ನಿಲ್ಲುವಂತಹ ಪ್ಲ್ಯಾನ್ ಮಾಡಿ ಎಂದಿದ್ದಾರೆ ಎಂಬುದು ಮೂಲಗಳ ಮಾಹಿತಿಯಾಗಿದೆ.
ಫೆಬ್ರವರಿ ಮೂರನೇ ವಾರದಲ್ಲಿ ಬಜೆಟ್ ಮಂಡಿಸಲು ಸಿಎಂ ಬಸವರಾಜ ಬೊಮ್ಮಾಯಿ ಸಿದ್ಧತೆ ನಡೆಸಿದ್ದಾರೆ. ಚುನಾವಣೆ ಹತ್ತಿರದ ಬಜೆಟ್ ಆಗಿರುವ ಕಾರಣ ಬಂಪರ್ ಗಿಫ್ಟ್ಗಳ ಸುರಿಮಳೆ ಸಾಧ್ಯತೆ ಇದೆ. ಜನಪ್ರಿಯ ಬಜೆಟ್ ಮಂಡಿಸಲು ಈಗಾಗಲೇ ಬ್ಲೂಪ್ರಿಂಟ್ ರೆಡಿ ಮಾಡುವಂತೆ ಸೂಚನೆ ನೀಡಿದ್ದಾರಂತೆ. ಕಾಂಗ್ರೆಸ್ (Congress) ಪ್ರಣಾಳಿಕೆಯ ನಾಗಲೋಟಕ್ಕೆ ಬ್ರೇಕ್ ಹಾಕಲು ಸಿಎಂ ತಂತ್ರ ನಡೆಸಿದ್ದು, ಕಾಂಗ್ರೆಸ್ ಭರವಸೆಗಳ ಸುರಿಮಳೆಗೆ ತಡೆ ಹಾಕಲು ಬಜೆಟ್ (Budget) ಘೋಷಣೆ ಅಸ್ತ್ರ ಪ್ರಯೋಗ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಇದನ್ನೂ ಓದಿ: ನಾರಾಯಣಪುರ ಎಡದಂಡೆ ಕಾಲುವೆ ಆಧುನೀಕರಣ ದೇಶಕ್ಕೆ ಮಾದರಿ, ಇದೊಂದು ಮೈಲಿಗಲ್ಲು – ಬೊಮ್ಮಾಯಿ
Advertisement
Advertisement
ಪ್ರಮುಖವಾಗಿ 5 ವರ್ಗಗಳನ್ನು ತಲುಪುವ 5 ಜನಪ್ರಿಯ ಕಾರ್ಯಕ್ರಮಗಳ ಘೋಷಣೆಗೆ ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಹಣಕಾಸು ಇಲಾಖೆಯ ಅಧಿಕಾರಿಗಳಿಗೆ ಪ್ಲ್ಯಾನ್ ಕೊಡುವಂತೆ ಸಿಎಂ ಸೂಚಿಸಿದ್ದು, ಜನವರಿ ಕಡೆ ವಾರದಿಂದ ಬಜೆಟ್ ಸಿದ್ಧತಾ ಸಭೆಗಳನ್ನು ನಡೆಸಲು ಸಿಎಂ ಮುಂದಾಗಿದ್ದಾರೆ. ಪುಕ್ಕಟೆ ಜಾಗಟೆ ಶಬ್ದ ಮಾಡುತ್ತಿರುವ ಬಿಜೆಪಿ, ಕಾಂಗ್ರೆಸ್ ಪಕ್ಷಗಳ ಅಸಲಿ ಕಾರ್ಯತಂತ್ರ ಜಾರಿ ಎಷ್ಟು ಎಂಬುದರ ಮೇಲೆ ಎಲ್ಲರ ಬಣ ಬಯಲಾಗುವುದಂತೂ ಸ್ಪಷ್ಟ. ಇದನ್ನೂ ಓದಿ: ಭಾರತ್ ಜೋಡೋ ಎಂಟ್ರಿಗೂ ಮುನ್ನ ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್ಗೆ ಮುಜುಗರ
Advertisement
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k