ಬೆಂಗಳೂರು: ಎಲೆಕ್ಷನ್ ಸಮೀಪಿಸುತ್ತಿರುವಂತೆಯೇ ಬಿಜೆಪಿಯ ಹೈಕಮಾಂಡ್ ನಾಯಕರು ಮೇಲಿಂದ ಮೇಲೆ ದಂಡಯಾತ್ರೆ ಆರಂಭಿಸಿದ್ದಾರೆ. ಮೋದಿ, ಅಮಿತ್ ಶಾ ಬಂದು ಹೋದ ಬೆನ್ನಲ್ಲೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ.
Sought the blessings of Shri Basavamurthy Maadara Chennaiha Swamiji of Maadara Chennaiha Gurupeetha in Karnataka today. The Math has been serving as a source of inspiration in terms of social service & has actively contributed to the welfare of society. pic.twitter.com/n31a30OcjG
— Jagat Prakash Nadda (@JPNadda) January 5, 2023
Advertisement
ತುಮಕೂರು-ಚಿತ್ರದುರ್ಗ-ದಾವಣಗೆರೆ ಜಿಲ್ಲೆಗಳಲ್ಲಿ ಪಕ್ಷ ಸಂಘಟನೆಗೆ ಮುಂದಾಗಿರುವ ಜೆಪಿ ನಡ್ಡಾ ವಿಶೇಷವಾಗಿ ಪ್ರಮುಖವಾಗಿ ನಾಲ್ಕು ಸಮುದಾಯಗಳನ್ನು ಟಾರ್ಗೆಟ್ ಮಾಡಿಕೊಂಡು ಮಠಯಾತ್ರೆ ನಡೆಸುತ್ತಿದ್ದಾರೆ.
Advertisement
Addressed the Karyakarta Samavesh in Chitradurga, Karnataka. Under the leadership of Hon. PM @narendramodi Ji, the BJP has ensured social justice in a true manner through 'Sabka Saath, Sabka Vikas, Sabka Prayas' & is empowering the poor, tribal & downtrodden people. pic.twitter.com/6OrNdD3N2A
— Jagat Prakash Nadda (@JPNadda) January 5, 2023
Advertisement
ಪ್ರವಾಸದ ಮೊದಲ ದಿನವಾದ ಗುರುವಾರ ತುಮಕೂರಿನ ಸಿದ್ದಗಂಗಾ ಮಠ, ಚಿತ್ರದುರ್ಗದ ಮಾದಾರ ಚನ್ನಯ್ಯ ಮಠ, ಸಿರಿಗೆರೆಯ ತರಳಬಾಳು ಮಠಕ್ಕೆ ಭೇಟಿ ನೀಡಿ ಗುರುಗಳ ಆಶೀರ್ವಾದ ಪಡೆದಿದ್ದಾರೆ. ಭೇಟಿ ಮಧ್ಯೆ ಪಕ್ಷದ ಶಕ್ತಿ ಕೇಂದ್ರಗಳ ಪ್ರಮುಖರ ಜೊತೆ, ಎಸ್‍ಸಿ, ಎಸ್‍ಟಿ, ಓಬಿಸಿ ಕಾರ್ಯಕರ್ತರ ಸಭೆ ನಡೆಸಿದ್ದಾರೆ. ಇದನ್ನೂ ಓದಿ: ಯಾರೇ ಬಂದ್ರು ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್‍ನ್ನು ಅಲ್ಲಾಡಿಸಲು ಆಗಲ್ಲ: ನಿಖಿಲ್ ಕುಮಾರಸ್ವಾಮಿ
Advertisement
Paid my tributes and homage to Veera Madhakari Nayaka, Onake Obbavva and Dr B.R. Ambedkar by garlanding their statues. The exploits of every single one of these legendary figures will always be remembered, seen as a source of inspiration and cherished for all eternity. pic.twitter.com/5rSNFJU7RW
— Jagat Prakash Nadda (@JPNadda) January 5, 2023
ಶಾಸಕರು, ಸಂಸದರ ಜೊತೆ ಪ್ರತ್ಯೇಕ ಸಭೆ ನಡೆಸಿದ್ದಾರೆ. ಸದ್ಯ ದಾವಣಗೆರೆಯಲ್ಲಿ ಬೀಡುಬಿಟ್ಟಿರುವ ಜೆಪಿ ನಡ್ಡಾ ಶುಕ್ರವಾರ ಹರಿಹರ ಪಂಚಮಸಾಲಿ ಪೀಠ, ಬೆಳ್ಳೋಡಿಯ ಕನಕಗುರುಪೀಠ, ರಾಜನಹಳ್ಳಿಯ ವಾಲ್ಮೀಕಿ ಗುರುಪೀಠವನ್ನು ಸಂದರ್ಶಿಸಲಿದ್ದಾರೆ. ಅಮಿತ್ ಶಾ ರಾಜ್ಯಕ್ಕೆ ಬಂದು ಹೋದ ನಂತರ ಬಿಜೆಪಿ ಜಾತಿ ಸಮೀಕರಣದ ರಾಜಕಾರಣವನ್ನು ಶುರು ಮಾಡಿಕೊಂಡಿರುವುದು ಇಲ್ಲಿ ಗೊತ್ತಾಗುತ್ತಿದೆ.
Visited the Taralabaalu Matha in Sirigere Karnataka and received the blessings of Shri Taralabaalu Jagatguru Dr Shri Shivamurthy Shivacharya Mahaswamiji today. The Math’s role in providing free education to thousands of students across its various institutions is commendable. pic.twitter.com/wRoIX47681
— Jagat Prakash Nadda (@JPNadda) January 5, 2023
ಬಿಜೆಪಿ ಪ್ಲ್ಯಾನ್ ಏನು?
ಕಳೆದ ವಾರ ಹಳೆ ಮೈಸೂರು ಭಾಗಕ್ಕೆ ಬಂದಿದ್ದ ಅಮಿತ್ ಶಾ ಒಕ್ಕಲಿಗ, ಲಿಂಗಾಯತ ಕಾಂಬಿನೇಷನ್ ಬಗ್ಗೆ ಶಾ ತಂತ್ರ ಹೂಡಿ ಆದಿಚುಂಚನಗಿರಿ ಮಠಕ್ಕೂ ಭೇಟಿ ಕೊಟ್ಟಿದ್ದರು. ಈಗ ಜೆಪಿ ನಡ್ಡಾ ಅವರು 6 ಮಠ ಯಾತ್ರೆ ಕೈಗೊಂಡಿದ್ದಾರೆ. ಈ ಮೂಲಕ ಲಿಂಗಾಯಿತ, ಮಾದಿಗ, ಕುರುಬ, ವಾಲ್ಮೀಕಿ ಮತ ಬ್ಯಾಂಕ್‍ಗೆ ಲಗ್ಗೆ ಇಟ್ಟಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k