ಬೆಂಗಳೂರು: ಉತ್ತರಪ್ರದೇಶದ ಉಪ ಚುನಾವಣೆಗಳ ಸೋಲಿನ ಹಿನ್ನೆಲೆಯಲ್ಲಿ ಬಿಜೆಪಿ ಅಲ್ಪಸಂಖ್ಯಾತ ಸಮುದಾಯದ ಮತಗಳನ್ನು ಸೆಳೆಯಲು ಪ್ಲಾನ್ ಮಾಡುತ್ತಿದ್ದು, ಈ ನಿಟ್ಟಿನಲ್ಲಿಯೇ ಮುಂದಿನ ಚುನಾವಣೆಯ ಯೋಜನೆಗಳನ್ನು ರೂಪಿಸಲು ಅಮಿತ್ ಶಾ ಮುಂದಾಗಿದ್ದಾರೆ ಎಂದು ಹೇಳಲಾಗ್ತಿದೆ.
ರಾಜ್ಯದಲ್ಲಿ ಮುಸ್ಲಿಂ ಮತದಾರರು ಹೆಚ್ಚಿರುವ ಕಡೆಗಳಲ್ಲಿ ಅಲ್ಪಸಂಖ್ಯಾತ ಸಮಾವೇಶ ಆಯೋಜನೆಗೆ ಬಿಜೆಪಿ ನಾಯಕರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಮುಸ್ಲಿಂ ಮತಗಳನ್ನು ಸೆಳೆಯಲು ಮುಸ್ಲಿಮರಿಗಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕಾರ್ಯಕ್ರಮಗಳ ಬಗ್ಗೆ ವ್ಯಾಪಾಕ ಪ್ರಚಾರ ಮಾಡಲಿದೆ. ಮುಸ್ಲಿಮರನ್ನು ಸೆಳೆಯುವುದಕ್ಕೆ ಬಿಜೆಪಿ ರಾಷ್ಟ್ರೀಯ ಮುಸ್ಲಿಂ ನಾಯಕರಾದ ಸಿಕಂದರ್ ಬಕ್ಷ್, ಮುಕ್ತಾರ್ ಅಬ್ಬಾಸ್ ನಖ್ವಿ, ಶಹನವಾಜ್ ಹುಸೇನ್, ಎಂ.ಜೆ.ಅಕ್ಬರ್ ಅವರು ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ ಅಂತಾ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಯುಪಿಯಲ್ಲಿ ಸೈಕಲ್ ಕೇಕೆ, ಪ್ರಧಾನಿ ಮೋದಿಗೆ ಎಚ್ಚರಿಕೆ – ಮಹಾ ಮೈತ್ರಿಗೆ ಇದು ವೇದಿಕೆ!
Advertisement
Advertisement
ಏಪ್ರಿಲ್ ನಲ್ಲಿ ಅಲ್ಪಸಂಖ್ಯಾತ ಸಮುದಾಯಗಳನ್ನು ಗಮನದಲ್ಲಿ ಇಟ್ಟುಕೊಂಡು ಬೃಹತ್ ಸಮಾವೇಶಗಳನ್ನು ಹಮ್ಮಿಕೊಳ್ಳುವ ಸಾಧ್ಯತೆಗಳಿವೆ. ಮುಸ್ಲಿಮರಿಗಾಗಿ ಕೇಂದ್ರ ಸರ್ಕಾರ ಜಾರಿ ಮಾಡಿದ ತ್ರಿವಳಿ ತಲಾಖ್ ರದ್ದು, ಹಜ್ ಸಬ್ಸಿಡಿ, ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ, ಮುಸ್ಲಿಂ ಮಹಿಳೆಯರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ‘ನಯೀ ರೋಶಿನಿ’ ಕಾರ್ಯಕ್ರಮಗಳ ಬಗ್ಗೆ ಬಿಜೆಪಿ ರಾಜ್ಯದಲ್ಲಿ ಪ್ರಚಾರ ನಡೆಸಲಿದೆ. ಶೀಘ್ರದಲ್ಲಿಯೇ ಅಮಿತ್ ಶಾ ಸಮಾವೇಶದ ದಿನಾಂಕ, ಸ್ಥಳ ಮತ್ತು ರೂಪರೇಷಗಳನ್ನು ತಯಾರಿಸಲಿದ್ದಾರೆ ಅಂತಾ ತಿಳಿದು ಬಂದಿದೆ. ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಭಾರೀ ಮುಖಭಂಗ- ಬಿಹಾರದಲ್ಲಿ ಆರ್ ಜೆಡಿಗೆ ಗೆಲುವು
Advertisement
ಬಿಜೆಪಿ ಸುಮಾರು 30 ಸಾವಿರ ಮುಸ್ಲಿಂ ಕಾರ್ಯಕರ್ತರ ನೊಂದಣಿ ಮಾಡಿಸುವ ಗುರಿಯನ್ನು ಹೊಂದಿದ್ದು, ರಾಜ್ಯದ ಸುಮಾರು 30 ಕ್ಷೇತ್ರಗಳಲ್ಲಿ ಸಮಾವೇಶ ನಡೆಯುವ ಸಾಧ್ಯತೆಗಳಿವೆ.
Advertisement
https://www.youtube.com/watch?v=8S_c6n7KvqE
https://www.youtube.com/watch?v=kcmY9YR5AqY