ಬೆಂಗಳೂರು: ಇದೇ ತಿಂಗಳು ಕಡೇ ವಾರದಲ್ಲಿ ಅಮಿತ್ ಶಾ (Amit Shah) ಮತ್ತೆ ಬೆಂಗಳೂರಿಗೆ (Bengaluru) ಮತ್ತೊಂದು ಟೂರ್ ಮಾಡಲಿದ್ದಾರೆ. ಆಪರೇಷನ್ ಓಲ್ಡ್ ಮೈಸೂರು (Old Mysuru) ಟಾಸ್ಕ್ಗೆ ಅಮಿತ್ ಶಾ ಪೂರ್ಣ ಪ್ರಮಾಣದ ಚಿಕಿತ್ಸೆ ನೀಡುವ ಸಾಧ್ಯತೆ ಇದೆ. ಇದೇ ವೇಳೆ ಮಂಡ್ಯ (Mandya) ವಿಚಾರದಲ್ಲಿ ಸುಮಲತಾ (Sumalatha) ಜೊತೆ ಶಾ ಅವರೇ ಡೈರೆಕ್ಟ್ ಮಾತುಕತೆ ಮಾಡಿಸಲು ರಾಜ್ಯ ಬಿಜೆಪಿ ಪ್ಲ್ಯಾನ್ ಮಾಡಿದೆ.
ಈಗಾಗಲೇ ಮಂಡ್ಯ, ಮದ್ದೂರು ಕ್ಷೇತ್ರಗಳಲ್ಲಿ ಸುಮಲತಾಗಾಗಿ ಬಿಜೆಪಿ ಟಿಕೆಟ್ ರಿಸರ್ವ್ಡ್ ಮಾಡಿದೆ. ಸುಮಲತಾ ಬಂದ್ರೆ ಅವರು ಹೇಳುವವರಿಗೆ ಟಿಕೆಟ್ ಎನ್ನುತ್ತಿದೆ ರಾಜ್ಯ ಬಿಜೆಪಿ ಘಟಕ. ಮಂಡ್ಯ ಜಿಲ್ಲೆಯಲ್ಲಿ ಸುಮಲತಾ ಅವರಿಗೆ ಮಿನಿಮಮ್ ಮೂರು ಎಂಬ ಮಂಡ್ಯ ಟಾರ್ಗೆಟ್ ಟಾಸ್ಕ್ ಕೊಡಲು ಬಿಜೆಪಿ ತಂತ್ರ ಹೂಡಿದೆ.
Advertisement
Advertisement
ಹೀಗಾಗಿ ಜನವರಿ ಅಂತ್ಯದೊಳಗೆ ಅಮಿತ್ ಶಾ ಅವರೇ ಮಾತನಾಡಲಿದ್ದು, ಬಳಿಕ ಸುಮಲತಾ ತಮ್ಮ ನಿರ್ಧಾರ ಫೈನಲ್ ಮಾಡ್ತಾರೆ ಎನ್ನಲಾಗಿದೆ. ಅಮಿತ್ ಶಾ ಮಾತುಕತೆ ಯಶಸ್ವಿಯಾದರೆ ಶಿವರಾತ್ರಿಗೂ ಮುನ್ನವೇ ಸುಮಲತಾ ನಿರ್ಧಾರ ಪ್ರಕಟಿಸುವ ಸಾಧ್ಯತೆ ಎನ್ನುತ್ತಿವೆ ಮೂಲಗಳು. ಹಾಗಾದ್ರೆ ವಿಧಾನಸಭೆ ಚುನಾವಣೆಗೆ ಬಿಜೆಪಿಗೆ ಸುಮಲತಾ ಬಾಹ್ಯ ಬೆಂಬಲವೋ!? ಅಥವಾ ಸೇರ್ಪಡೆಯ ತಂತ್ರವೋ! ಎಂಬುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ: ಸಿದ್ದರಾಮಯ್ಯ ದೇವರಿದ್ದಂತೆ; ಅವರ ವಿರುದ್ಧ ಕೋಲಾರದಲ್ಲಿ ಸ್ಪರ್ಧೆ ಮಾಡಲ್ಲ – KGF Babu
Advertisement
Advertisement
ಇದರ ಜೊತೆಗೆ ಟಾರ್ಗೆಟ್ ಬೆಂಗಳೂರು ಅಮಿತ್ ಶಾ ಟೂರ್ನ ಮತ್ತೊಂದು ವಿಶೇಷ. ರಾಜಧಾನಿಯಲ್ಲಿ ಬಿಜೆಪಿ ಬಿಗಿ ಮಾಡಲು ಮೆಗಾ ರೋಡ್ ಶೋಗೆ ಪ್ಲ್ಯಾನ್ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ವೀಕ್ ಇರುವ ಕ್ಷೇತ್ರಗಳಲ್ಲಿ ಹವಾ ಎಬ್ಬಿಸಲು ಅಮಿತ್ ಶಾ ಸೂಚನೆ ಕೊಟ್ಟಿದ್ದು, ಬೆಂಗಳೂರಿನ ಎರಡ್ಮೂರು ಕ್ಷೇತ್ರಗಳಲ್ಲಿ ರೋಡ್ ಶೋಗೆ ಅಮಿತ್ ಶಾ ಟೈಂ ಕೊಟ್ಟಿದ್ದಾರೆ ಎನ್ನಲಾಗಿದೆ. ಹಾಗಾದ್ರೆ ಬೆಂಗಳೂರಲ್ಲಿ ಅಮಿತ್ ಶಾ ರೋಡ್ ಶೋ ಬಿಜೆಪಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ಆಗುತ್ತಾ? ಶಾ ಟೂರ್ನಿಂದ ಈ ಸಲ ಟಾಸ್ಕ್ಗಳು ಹೆಚ್ಚಾಗುತ್ತಾ? ಎಂಬ ಕುತೂಹಲ ಗರಿಗೆದರಿದೆ. ಇದನ್ನೂ ಓದಿ: ಹಳೇಮೈಸೂರು ಭಾಗದಲ್ಲಿ ರಂಗೇರಿದ ರಾಜಕೀಯ-JDS ಮಣಿಸಲು Congress ಮಾಸ್ಟರ್ ಪ್ಲಾನ್
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k