ದಾವಣಗೆರೆ: ಕಾಂಗ್ರೆಸ್‍ನ (Congress) ಹಿರಿಯ ನಾಯಕ ಹಾಗೂ ದಾವಣಗೆರೆಯ (Davanagere) ದಕ್ಷಿಣ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ (Shamanur Shivashankarappa) ನೀಡಿದ ಸೀರೆಗಳಿಗೆ ದಕ್ಷಿಣ ಕ್ಷೇತ್ರದ ಮಹಿಳೆಯರು (Women) ಬೆಂಕಿ ಇಟ್ಟು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಚುನಾವಣೆ (Election) ಹತ್ತಿರ ಬರುತ್ತಿದ್ದಂತೆ ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ಸಾಕಷ್ಟು ಕಸರತ್ತು ಮಾಡುತ್ತವೆ. ಅಲ್ಲದೆ ಇಷ್ಟು ದಿನ ಇವರ ಕಷ್ಟಕ್ಕೆ ಸ್ಪಂದಿಸದ ನಾಯಕರು ಚುನಾವಣಾ ಸಂದರ್ಭದಲ್ಲಿ ಹಬ್ಬ ಹರಿದಿನಗಳ ಶುಭಾಶಯ ಕೋರಿ ಸೀರೆ, ಕುಕ್ಕರ್, ಸೇರಿದಂತೆ ಹಲವಾರು ಉಡುಗೊರೆಗಳನ್ನು ಮತದಾರರಿಗೆ ನೀಡಿ ಮತ ಸೆಳೆಯುವ ತಂತ್ರವನ್ನು ಮಾಡುತ್ತಾರೆ. ಈ ಬೆನ್ನಲ್ಲೇ ಕಾಂಗ್ರೆಸ್ ಎಸ್ ಎಸ್ ಹಾಗೂ ಎಸ್.ಎಸ್.ಎಂ ಅಭಿಮಾನಿ ಬಳಗ ಎನ್ನುವ ಹೆಸರಿನಲ್ಲಿ ಸೀರೆ ಹಂಚಿಕೆ ಮಾಡುತ್ತಿದ್ದರು. ಆದರೆ ದಾವಣಗೆರೆ ದಕ್ಷಿಣ ಕ್ಷೇತ್ರದ ಮಹಿಳೆಯರಿಗೆ ನೀಡಿದ್ದ ಸೀರೆಗಳನ್ನು ರಸ್ತೆಯಲ್ಲಿ ಸೀರೆಗಳಿಗೆ ಬೆಂಕಿ ಇಟ್ಟು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ರಾಹುಲ್ ಗಾಂಧಿ ತಮ್ಮ ಪಕ್ಷಕ್ಕೆ ರಾಹು ಆಗಿದ್ದಾರೆ: ನಾಲಿಗೆ ಹರಿಬಿಟ್ಟ ಶಿವರಾಜ್ ಸಿಂಗ್ ಚೌಹಾಣ್
Advertisement
Advertisement
ಚುನಾವಣೆ ಹಿನ್ನಲೆ ದಾವಣಗೆರೆ ದಕ್ಷಿಣ ಹಾಗೂ ಉತ್ತರ ಕ್ಷೇತ್ರಗಳಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಶಾಸಕ ಎಸ್.ಎಸ್. ಮಲ್ಲಿಕಾರ್ಜುನ ಭಾವಚಿತ್ರವಿರುವ ಬ್ಯಾಗ್‍ನಲ್ಲಿ ಸೀರೆಗಳ ಹಂಚಿಕೆ ಮಾಡಲಾಗುತ್ತಿತ್ತು. ಈ ವೇಳೆ ಮಾತನಾಡಿದ ಮಹಿಳೆಯರು, ನಾವು ನಿಮ್ಮ 60 ರೂ. ಸೀರೆ ಉಟ್ಟುಕೊಳ್ಳುವಷ್ಟು ನಿರ್ಗತಿಕರಲ್ಲ. ಅಭಿವೃದ್ಧಿ ಮಾಡಿಲ್ಲ ಈಗ ಸೀರೆ ಹಂಚುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಹಳೇ ಮೈಸೂರು ಭಾಗದಲ್ಲಿ ಪ್ರಾಬಲ್ಯ ಉಳಿಸಿಕೊಳ್ಳಲು ಜೆಡಿಎಸ್ ಸರ್ಕಸ್