ಮಡಿಕೇರಿ: ವಿರಾಜಪೇಟೆ ಕ್ಷೇತ್ರ (Virajpete Constituency) ದಲ್ಲಿ ಭಾರತೀಯ ಜನತಾ ಪಾರ್ಟಿ (BJP)- ಕಾಂಗ್ರೆಸ್ (Congress) ಅಭ್ಯರ್ಥಿಗಳು ಈ ಬಾರಿ ನೇರ ಸ್ಪರ್ಧಿಗಳಾಗಿ ಸೆಣಸುತ್ತಾರೆ. ಕಾಂಗ್ರೆಸ್‍ನಿಂದ ಈ ಬಾರಿ ಎ.ಎಸ್ ಪೊನ್ನಣ್ಣ ಸ್ಪರ್ಧಿಸಿದರೆ ಬಿಜೆಪಿಯಿಂದ ಎಂದಿನಂತೆ ಕೆ.ಜಿ ಬೋಪಯ್ಯ ಅಖಾಡದಲ್ಲಿದ್ದಾರೆ.
ಉತ್ಸಾಹಿ ರಾಜಕಾರಣಿ, ಕರ್ನಾಟಕ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ, ಸುಪ್ರೀಂಕೋರ್ಟ್ ವಕೀಲ ಎ.ಎಸ್ ಪೊನ್ನಣ್ಣ ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ಕೊಡಗಿನಲ್ಲಿ ಚುನಾವಣೆಗೆ ಪೂರ್ವತಯಾರಿ ಮಾಡಿಕೊಂಡಿದ್ದು, ಕ್ಷೇತ್ರದಲ್ಲಿ ಅವರ ಪರವಾಗಿ ಮತದಾರರಲ್ಲಿ ಒಂದಿಷ್ಟು ಒಲವು ಮೂಡಿರುವುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಕಾಂಗ್ರೆಸ್‍ನಿಂದ ಯಾವುದೇ ಬಂಡಾಯ ವಿರಾಜಪೇಟೆ ಕ್ಷೇತ್ರದಲ್ಲಿ ಕಾಣಿಸಿಕೊಳ್ಳದೆ ಇರುವುದು ಪೊನ್ನಣ್ಣನವರಿಗೆ ಸಮಾಧಾನವನ್ನೂ ತಂದಿರುತ್ತದೆ.
Advertisement
Advertisement
ಎ.ಕೆ ಸುಬ್ಬಯ್ಯನವರ ಮಗ ಎ.ಎಸ್ ಪೊನ್ನಣ್ಣ: ಕೊಡಗಿನಿಂದ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ರಾಜಕಾರಣದಲ್ಲಿ ಹೆಸರುಗಳಿಸಿರುವ ಎ.ಕೆ ಸುಬ್ಬಯ್ಯನವರ ಶಿಷ್ಯ ಬಣ ರಾಜ್ಯದಾದ್ಯಂತ ಈಗಲೂ ಇದ್ದು ನೇರ ಹಾಗೂ ನಿಷ್ಠುರತೆಗೆ ಹೆಸರು ವಾಸಿಯಾಗಿದ್ದ ಸುಬ್ಬಯ್ಯನವರ ಪುತ್ರ ಈ ಬಾರಿ ಕಾಂಗ್ರೆಸ್‍ನಿಂದ ಸ್ಪರ್ಧೆ ಮಾಡುತ್ತಿರುವುದು ವಿಶೇಷ. ಸಾವಿರಾರು ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದ ಸುಬ್ಬಯ್ಯನವರಿಗೆ ಅಷ್ಟೇ ಸಂಖ್ಯೆಯ ವಿರೋಧಿಗಳು ಇದ್ದಾರೆ. ಹೋರಾಟ ಹಾಗೂ ಕೊಡಗಿನ ನಾಡು, ನುಡಿ, ವೈಚಾರಿಕತೆಗಳ ವಿಚಾರದಲ್ಲಿ ಇದ್ದ ಅವರ ನಿಲುವು ಈ ಚುನಾವಣೆಯಲ್ಲಿ ಪೊನ್ನಣ್ಣನವರಿಗೆ ವ್ಯತಿರಿಕ್ತ ಪರಿಣಾಮ ಬೀರುತ್ತದಾ? ಅಥವಾ ಮತವಾಗಿ ಪರಿವರ್ತನೆ ಆಗುತ್ತದಾ ಎಂಬುದು ಯಕ್ಷಪ್ರಶ್ನೆಯಾಗಿದೆ. ನಯವಾದ ಮಾತುಗಾರಿಕೆ, ವಿನಯವಂತಿಕೆ ಹಾಗೂ ವೈಚಾರಿಕವಾಗಿ ಪೊನ್ನಣ್ಣನವರ ನಿಲುವು ತಂದೆಗಿಂತ ಭಿನ್ನವಾಗಿದೆ ಎಂದು ಈಗಾಗಲೇ ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
Advertisement
Advertisement
ಇತ್ತ ಟಿಕೆಟ್‍ಗಾಗಿ ಭಾಜಪದಲ್ಲಿ ಈ ಹಿಂದೆ ಎಂದೂ ಕಾಣಿಸದಷ್ಟು ಪೈಪೋಟಿಯ ನಡುವೆಯೂ ಸತತವಾಗಿ ಗೆಲುವು ಸಾಧಿಸುತ್ತಾ ಬಂದಿರುವ ಕೆ.ಜಿ ಬೋಪಯ್ಯನವರಿಗೆ ಈ ಬಾರಿಯೂ ಬಿಜೆಪಿ ಹೈಕಮಾಂಡ್ ಅಸ್ತು ಅಂದಿದೆ. ಆದರೂ ಇತರೆ ಟಿಕೆಟ್ ಆಕಾಂಕ್ಷಿಗಳು ಹಾಗೂ ಅವರ ಬೆಂಬಲಿಗರು ಈ ವಿಚಾರದಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಬೋಪಯ್ಯನವರಿಗೆ ಒಂದಿಷ್ಟು ತಲೆ ಬಿಸಿ ತಂದಂತೆ ಕಾಣುತ್ತಿದೆ. ಬೋಪಯ್ಯನವರು ಎಂದಿನಂತೆ ಗೆಲ್ಲುವ ವಿಶ್ವಾಸದಲ್ಲಿ ಇದ್ದಾರೆ. ಬೂತ್ ಮಟ್ಟದಲ್ಲಿ ಸಧೃಡವಾಗಿರುವ ಪಕ್ಷದ ಕಾರ್ಯಕರ್ತರೂ ಹಾಗೂ ಬಿಜೆಪಿಯ ಕಾಯಂ ಮತದಾರರು ಅವರನ್ನು ಗೆಲ್ಲಿಸುತ್ತಾರೆ ಅನ್ನುವುದು ಅವರ ನಂಬಿಕೆಯಾಗಿದೆ.
ಯಾರಿಗೆ ಪ್ಲಸ್:
ಹಿಂದೂ ಪರ ಸಂಘಟನೆಗಳು ಪ್ರಬಲವಾಗಿರುವ ಕೊಡಗಿನಲ್ಲಿ ಬಿಜೆಪಿ ಗೆಲುವಿಗೆ ಪ್ರತಿಬಾರಿಯಂತೆ ಈ ಬಾರಿಯೂ ಆಂತರಿಕ ಅಸಮಾಧಾನವನ್ನು ಬದಿಗಿಟ್ಟು ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಪ್ರಯತ್ನ ಮಾಡುತ್ತಾರೆ ಅನ್ನುವುದು ಬಿಜೆಪಿಯ ಮಡಿಕೇರಿ ಹಾಗೂ ವಿರಾಜಪೇಟೆ ಈ ಎರಡೂ ಕ್ಷೇತ್ರದ ಅಭ್ಯರ್ಥಿಗಳ ನಂಬಿಕೆ. ಮೋದಿ ಅಲೆ ಕೊಡಗಿನಲ್ಲಿ ಒಂದಿಷ್ಟು ಕಡಿಮೆ ಆಗಿದೆ ಅನ್ನುವುದು ಬಿಟ್ಟರೆ ಮೋದಿ ಹೆಸರಿನಲ್ಲಿ ಬಿಜೆಪಿಗೆ ಮತಚಲಾವಣೆ ಮಾಡುವ ಮತದಾರರು ಅಧಿಕ ಸಂಖ್ಯೆಯಲ್ಲಿ ಕೊಡಗಿನಲ್ಲಿ ಇದ್ದು ಕೆ.ಜಿ ಬೋಪಯ್ಯ ಅವರು ಕಳೆದ 20 ವರ್ಷಗಳಿಂದ ಮಾಡಿರುವ ಅಭಿವೃದ್ಧಿ ಕಾರ್ಯಗಳು ಶ್ರೀ ರಕ್ಷೆಯಾಗುವ ಸಾಧ್ಯತೆಯು ಇದೆ. ಇದನ್ನೂ ಓದಿ: ಜಿದ್ದಾಜಿದ್ದಿನ ಹೋರಾಟಕ್ಕಿಳಿದ ಕೈ, ಬಿಜೆಪಿ ಅಭ್ಯರ್ಥಿಗಳು- ಯಾರಿಗೆ ಒಲಿಯಲಿದೆ ಮಡಿಕೇರಿ ಕ್ಷೇತ್ರ?
ಯಾರಿಗೆ ಮೈನಸ್:
ಎಎಸ್ ಪೊನ್ನಣ್ಣ ಕಳೆದ ನಾಲ್ಕು ವರ್ಷಗಳಿಂದ ವಿರಾಜಪೇಟೆ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಹಾಗೂ ಕೊಡಗಿನ ಕೋವಿ ಹಕ್ಕು ಜಮ್ಮಬಾಣೆ ಸಮಸ್ಯೆಗಳ ಬಗ್ಗೆ ನ್ಯಾಯಲಯದಲ್ಲಿ ಧ್ವನಿ ಎತ್ತಿ ಜಿಲ್ಲೆಯ ಸಮಸ್ಯೆಗಳಿಗೆ ಮುಕ್ತಿ ನೀಡಿದ್ದಾರೆ. ಅಲ್ಲದೇ ಯುವಕರ ಹಾದಿಯಾಗಿ ಹಿಂದುಳಿದ ವರ್ಗ ಹಾಡಿ ಜನರೊಂದಿಗೆ ಸೇರಿ ಪಕ್ಷ ಸಂಘಟನೆ ಮಾಡಿದ್ದಾರೆ ತನ್ನ ತಂದೆ ಹೆಸರಿನಲ್ಲಿ ಸಮಾಜ ಸೇವೆ ಮಾಡಿಕೊಂಡು ಬರುತ್ತಿರುವ ಪೊನ್ನಣ್ಣ ಅವರಿಗೆ ವಿರಾಜಪೇಟೆ ಕ್ಷೇತ್ರದಲ್ಲಿ ವರ್ಚಸ್ಸು ಜಾಸ್ತಿ ಅಗಿದೆ. ಕೊಡವ ಮತ್ತು ಅಲ್ಪಸಂಖ್ಯಾತ ಮತಗಳೇ ಈ ಬಾಗದಲ್ಲಿ ನಿರ್ಣಾಯಕವಾಗಿದು. ಕೊಡವ ಮತಗಳು ಬಿಜೆಪಿ ಕಾಂಗ್ರೆಸ್ ಗೆ ವಿಭಜನೆ ಅಗುವ ಲಕ್ಷಣಗಳು ಇರುವುದರಿಂದ ಪೊನ್ನಣ್ಣ ಅವರಿಗೆ ಸೋಲಿನ ಭೀತಿಯು ಎದುರಾಗಿದೆ.
ತಲಾ 269 ಮತಗಟ್ಟೆಗಳಲ್ಲಿ ಎರಡೂ ಕ್ಷೇತ್ರದಲ್ಲಿ ಮತದಾನ ನಡೆಯುತ್ತಿದ್ದು. 4,19,550 ಕ್ಕೂ ಹೆಚ್ಚು ಮತದಾರರು ಕೊಡಗಿನ ಎರಡೂ ಕ್ಷೇತ್ರದಲ್ಲಿ ಇದ್ದಾರೆ. ಈ ಬಾರಿ ಶೇಕಡಾ 80%ಕ್ಕಿಂತಲೂ ಹೆಚ್ಚಿನ ಮತದಾನ ಆಗುವ ಸಾಧ್ಯತೆಯೂ ಕೊಡಗಿನಲ್ಲಿ ಇದೆ. ಎರಡೂ ಕ್ಷೇತ್ರಗಳ ಅಷ್ಟೂ ಮತಗಟ್ಟೆಗಳಲ್ಲೂ ಭಾರತೀಯ ಜನತಪಾರ್ಟಿಯ ಸಕ್ರಿಯ ಕಾರ್ಯಕರ್ತರು ಇರುವುದು ಬಿ.ಜೆ.ಪಿಗೆ ವರದಾನ ಆಗುತ್ತಾ ಬಂದಿದೆ. ಇತ್ತ ಕಾಂಗ್ರೆಸ್, ಜೆಡಿಎಸ್ ಹಾಗೂ ಇತರೆ ಪಕ್ಷಗಳ ಸ್ಥಿತಿ ಹಾಗಿಲ್ಲ. ಕೆಲವೊಂದು ಮತಗಟ್ಟೆಗಳಲ್ಲಿ ಅವರು ಕಾರ್ಯಕರ್ತರ ಕೊರತೆಯನ್ನು ಈ ಹಿಂದೆಯೂ ಎದುರಿಸುತ್ತಾ ಬಂದಿದ್ದಾರೆ. ಅಂತಹಾ ಬೂತ್‍ಗಳಲ್ಲಿ ಅವರಿಗೆ ಮತ ಕಡಿಮೆ ಬೀಳುವ ಸಾಧ್ಯತೆ ಇದೆ. ಈ ಬಾರಿ ಅಭ್ಯರ್ಥಿಗಳು ಈ ನಿಟ್ಟಿನಲ್ಲಿ ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ವಿರಾಜಪೇಟೆ ಕ್ಷೇತ್ರದ ಜಾತಿವಾರು ಲೆಕ್ಕಾಚಾರ ಇಂತಿದೆ:
ಲಿಂಗಾಯತ _22117
ಒಕ್ಕಲಿಗ ಹಾಗೂ ಅರೇಬಾಷೆ ಗೌಡ _27708
ಪ.ಪಂಗಡ _25469
ಕುರುಬ _440
ಮುಸಲ್ಮಾನ_37273
ಕ್ರೈಸ್ತ_8800
ಬ್ರಾಹ್ಮಣ_1800
ಕೊಡವ ಹಾಗೂ ಕೊಡವ ಬಾಷಿಕ_47543
ಮಲಯಾಳಿ_11508
ತಮಿಳ_7118
ಬಿಲ್ಲವ_6241
ಬಂಟ್ಸ್_2800
ವಿಶ್ವಕರ್ಮ_1274
ಮಡಿವಾಳ_1900
ದೇವಾಂಗ ಶೆಟ್ಟಿ_3476
ಸವಿತಾ ಸಮಾಜ_2441
ನಾಯಕ್_1034
ಜೈನರು,_273
ಇತರೆ_5472