ತುಮಕೂರು: ತುಮಕೂರು (Tumakuru) ಜಿಲ್ಲೆಯಲ್ಲೇ ಕೊರಟಗೆರೆ ಅತಿ ಚಿಕ್ಕ ಕ್ಷೇತ್ರ. ಈ ವಿಧಾನಸಭಾ ಕ್ಷೇತ್ರ ಚಿಕ್ಕದಾದರೂ ಚುನಾವಣೆ ಹಾಗೂ ರಾಜಕೀಯ ವಿಚಾರದಲ್ಲಿ ರಾಜ್ಯದ ಗಮನ ಸೆಳೆಯುತ್ತಲೇ ಬಂದಿದೆ. ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿರುವ ಕೊರಟಗೆರೆಯಲ್ಲಿ (Koratagere) ಪ್ರಸ್ತುತ ಚುನಾವಣಾ ರಾಜಕೀಯ ಬೆಳವಣಿಗೆ ಹೇಗಿದೆ ಎಂಬುದನ್ನು ನೋಡೋಣ.
ಕೊರಟಗೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ (Congress) ಹಾಗೂ ಜೆಡಿಎಸ್ (JDS) ನಡುವೆ ನೇರಾನೇರ ಫೈಟ್ ಇದೆ. ಕಾಂಗ್ರೆಸ್ ಅಭ್ಯರ್ಥಿ ಹಾಲಿ ಶಾಸಕ ಹಾಗೂ ಮಾಜಿ ಡಿಸಿಎಂ ಜಿ.ಪರಮೇಶ್ವರ (G.Parameshwara) ಹಾಗೂ ಜೆಡಿಎಸ್ ಮಾಜಿ ಶಾಸಕ ಸುಧಾಕರ್ ಲಾಲ್ (Sudhakar Lal) ನಡುವೆ ಹಣಾಹಣಿ ನಡೆಯಲಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ನಿವೃತ್ತ ಐಎಎಸ್ ಅಧಿಕಾರಿ ಅನಿಲ್ ಕುಮಾರ್‌ಗೆ (Anil Kumar) ಬಿಜೆಪಿ (BJP) ಟಿಕೆಟ್ ನೀಡಿದ್ದು, ಜಿ.ಪರಮೇಶ್ವರ ನಿರಾಯಾಸ ಗೆಲುವಿಗೆ ತೊಡಕಾಗಿದೆ. ಇದನ್ನೂ ಓದಿ: ಸಕ್ಕರೆ ನಾಡು ಮೀಸಲು ಕ್ಷೇತ್ರದಲ್ಲಿ ಕೈ, ಕಮಲ, ತೆನೆ ಪೈಪೋಟಿ
Advertisement
Advertisement
ಅನಿಲ್ ಕುಮಾರ್ ಎಡಗೈ ಸಮುದಾಯಕ್ಕೆ ಸೇರಿದವರಾಗಿದ್ದು, ಆ ಸಮುದಾಯದ ಸುಮಾರು 40,000 ಮತಗಳಿವೆ. ಆದರೆ ಜಿ.ಪರಮೇಶ್ವರ ಬಲೈಗೆ ಸಮುದಾಯಕ್ಕೆ ಸೇರಿದ್ದು, ಕೇವಲ 4-5 ಸಾವಿರ ಮತಗಳು ಮಾತ್ರ ಇದೆ. ಹಾಗಾಗಿ ಬಿಜೆಪಿ ಅಭ್ಯರ್ಥಿ ಅನಿಲ್ ಕುಮಾರ್ ಹೆಚ್ಚು ಮತಗಳನ್ನು ಪಡೆದರೆ ಅದು ಜಿ.ಪರಮೇಶ್ವರರಿಗೆ ಮುಳುವಾಗಬಹುದು. ಈ ಹಿಂದಿನ ಚುನಾವಣೆಗಳಲ್ಲಿ ಎಡಗೈ ಸಮುದಾಯದವರು ಹೆಚ್ಚಿನದಾಗಿ ಪರಮೇಶ್ವರ ಕೈ ಹಿಡಿಯುತ್ತಿದ್ದರು. ಆದರೀಗ ತಮ್ಮದೇ ಸಮುದಾಯದ ಪ್ರಬಲ ವ್ಯಕ್ತಿ ಸ್ಪರ್ಧೆಗೆ ಇಳಿದಿರುವುದರಿಂದ ಎಡಗೈ ಸಮುದಾಯದ ಬಹುಪಾಲು ಮತಗಳು ಬಿಜೆಪಿ ಅಭ್ಯರ್ಥಿ ಕಡೆಗೆ ವಾಲಿ ಪರಮೇಶ್ವರಗೆ ಹಿನ್ನಡೆ ಆಗಬಹುದು. ಇದರ ಲಾಭ ಜೆಡಿಎಸ್‌ಗೆ ಆಗಲಿದೆ ಎಂಬ ಲೆಕ್ಕಾಚಾರ ಶುರುವಾಗಿದೆ. ಆದರೂ ಸದ್ಯದ ಪರಿಸ್ಥಿತಿಯಲ್ಲಿ ಜೆಡಿಎಸ್ ಅಭ್ಯರ್ಥಿ ಅಷ್ಟೊಂದು ಪ್ರಚಾರದಲ್ಲಿ ತೊಡಗಿಲ್ಲ. ಜಿ.ಪರಮೇಶ್ವರ ಅವರು ಕಾಲಿಗೆ ಚಕ್ರಕಟ್ಟಿಕೊಂಡು ಮತದಾರರನ್ನು ತಲುಪುತ್ತಿದ್ದಾರೆ. ಜೆಡಿಎಸ್ ಇದೇ ರೀತಿ ಕ್ಷೀಣವಾಗಿದ್ದರೆ ಕಾಂಗ್ರೆಸ್‌ಗೆ ಗೆಲುವಿನ ಹಾದಿ ಸುಗಮವಾಗಲಿದೆ.
Advertisement
ವೈಯಕ್ತಿಕ ವರ್ಚಸ್ಸು, ಅಭಿವೃದ್ಧಿ ಕೆಲಸ ಪರಮೇಶ್ವರ್ ‘ಕೈ’ ಹಿಡಿಯುತ್ತಾ?
ಕೊರಟಗೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಪರಮೇಶ್ವರ ಪ್ರಬಲರಾಗಿದ್ದಾರೆ. ಪರಮೇಶ್ವರಗೆ ತನ್ನದೇ ಆದ ವರ್ಚಸ್ಸಿದೆ. ಸಚಿವರಾಗಿ, ಡಿಸಿಎಂ ಆಗಿ ಕೆಲಸ ಮಾಡಿದವರು. ಅಲ್ಲದೇ ಪಕ್ಷದಲ್ಲಿ ಪ್ರಭಾವಿ ನಾಯಕರಾಗಿದ್ದು, ಮುಖ್ಯಮಂತ್ರಿ ಸ್ಥಾನ ಆಕಾಂಕ್ಷಿಗಳ ಲಿಸ್ಟ್‌ನಲ್ಲಿದ್ದಾರೆ. ಕಳೆದ ಎರಡು ವರ್ಷದಿಂದಲೇ ಚುನಾವಣೆ ತಯಾರಿ ಮಾಡಿಕೊಂಡಿರುವ ಜಿ.ಪರಮೇಶ್ವರ, ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಈ ಹಿಂದಿನದಕ್ಕಿಂತಲೂ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡಿರುವುದು ಚುನಾವಣೆಯಲ್ಲಿ ಅವರ ಕೈ ಹಿಡಿಯಬಹುದು. ಇದನ್ನೂ ಓದಿ: ಸಂತೋಷ್ ಹೆಸರು ತಂದಿದ್ದು ಶೆಟ್ಟರ್‌ಗೆ ಶೋಭೆ ತರಲ್ಲ – ಇನ್ನು ಅವ್ರ ದಾರಿ ಅವರಿಗೆ ನಮ್ಮ ದಾರಿ ನಮಗೆ: ಬಿಎಸ್‌ವೈ
Advertisement
ಇನ್ನೊಂದು ದೃಷ್ಟಿಕೋನದಲ್ಲಿ ನೋಡುವುದಾದರೆ, ಜಿ.ಪರಮೇಶ್ವರ ಸಮುದಾಯದ ಮತ ಅತಿ ಕಡಿಮೆ ಇದೆ. ಈ ಬಾರಿ ಪರಮೇಶ್ವರರನ್ನೇ ಟಾರ್ಗೆಟ್ ಮಾಡಿರುವ ಬಿಜೆಪಿ ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಎಡಗೈ ಸಮುದಾಯದ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದೆ. ಇದು ಪರಮೇಶ್ವರರಿಗೆ ಹೊಡೆತ ಕೊಡುವ ಸಾಧ್ಯತೆ ಇದೆ. ಅಷ್ಟೇ ಅಲ್ಲದೇ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಸದಾಶಿವ ಆಯೋಗದ ವರದಿ ಜಾರಿ ಮಾಡಲು ಹಿಂದೇಟು ಹಾಕಿದ್ದು ಸಹ ಈ ಬಾರಿ ಕೊರಟಗೆರೆ ಕ್ಷೇತ್ರದ ಚುನಾವಣೆಯಲ್ಲಿ ಪರಿಣಾಮ ಬೀರಬಹುದು. ಪರಮೇಶ್ವರ ವೈಟ್ ಕಾಲರ್ ರಾಜಕಾರಣಿ ಎಂಬ ಹಣೆಪಟ್ಟಿ ಕೂಡ ಹೊತ್ತಿರುವುದು ಪಕ್ಷಕ್ಕೆ ಹಿನ್ನಡೆ ತಂದೊಡ್ಡಬಹುದು ಎಂಬುದು ರಾಜಕೀಯ ತಜ್ಞರ ವಿಶ್ಲೇಷಣೆ.
ಜೆಡಿಎಸ್ ಪರಿಸ್ಥಿತಿ ಹೇಗಿದೆ?
ಜೆಡಿಎಸ್ ಅಭ್ಯರ್ಥಿಯಾಗಿರುವ ಪಿ.ಆರ್.ಸುಧಾಕರ್ ಲಾಲ್ ಅವರು 2013ರಲ್ಲಿ ಪರಮೇಶ್ವರ ವಿರುದ್ಧವೇ ಜಯಭೇರಿ ಸಾಧಿಸಿ ಶಾಸಕರಾಗಿದ್ದರು. ಮೂರು ಬಾರಿ ಜಿಪಂ ಸದಸ್ಯರಾಗಿ, ಒಂದು ಬಾರಿ ಶಾಸಕರಾಗಿ ಗುರುತಿಸಿಕೊಂಡಿದ್ದಾರೆ. ಸ್ಥಳೀಯವಾಗಿ ಕ್ಷೇತ್ರದ ಜನರಿಗೆ ಲಭ್ಯ ಇರುವ ವ್ಯಕ್ತಿ ಎಂದೂ ಸಹ ಹೇಳಲಾಗುತ್ತಿದೆ. ಲಂಬಾಣಿ ಸಮುದಾಯಕ್ಕೆ ಸೇರಿದವರಾದರೂ, ಜೆಡಿಎಸ್ ಅಭ್ಯರ್ಥಿಯಾಗಿರುವುದರಿಂದ ಒಕ್ಕಲಿಗ ಸಮುದಾಯದ ಸುಮಾರು 40,000 ಮತ ಗಟ್ಟಿಯಾಗಿದೆ. ಇದು ಜೆಡಿಎಸ್ ಪಕ್ಷಕ್ಕೆ ವರದಾನವಾಗಬಹುದು ಎಂದು ಹೇಳಲಾಗಿದೆ. ಮತ್ತೊಂದು ದಿಕ್ಕಿನಲ್ಲಿ ನೋಡುವುದಾದರೆ, ಆರ್ಥಿಕ ಬಲ ಇಲ್ಲದಿರುವುದು, ರಾಜ್ಯಮಟ್ಟದ ನಾಯಕರ ಸಂಪರ್ಕ ಅಷ್ಟೊಂದು ಇಲ್ಲದಿರುವುದು, ಪ್ರಚಾರದಲ್ಲಿ ಹಿಂದೆ ಉಳಿದಿರುವುದು ಪಕ್ಷಕ್ಕೆ ಹಿನ್ನಡೆಯಾಗಲು ಕಾರಣವಾಗಬಹುದು. ಅಲ್ಲದೇ ಸಮುದಾಯದ ಮತ ಕೇವಲ 7,000 ಇದೆ. ಇದು ಜೆಡಿಎಸ್ ಪಕ್ಷಕ್ಕೆ ಮೈನಸ್ ಪಾಯಿಂಟ್‌ನಂತಿದೆ. ಇದನ್ನೂ ಓದಿ: ನನ್ನ ಎದುರಾಳಿ ಪ್ರಬಲ ಅಭ್ಯರ್ಥಿ: ರಮೇಶ್ ಜಾರಕಿಹೊಳಿ
ಜಾತಿ ಲೆಕ್ಕಾಚಾರ ಏನು?
ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 2,02,977 ಇದೆ. ಜಾತಿ ಲೆಕ್ಕಾಚಾರದಲ್ಲಿ ನೋಡುವುದಾದರೆ, ಎಸ್ಸಿ-60,009, ಎಸ್ಟಿ- 20,000, ಒಕ್ಕಲಿಗರು-36,000, ಲಿಂಗಾಯತರು- 35,000, ಗೊಲ್ಲರು- 15,000, ಮುಸ್ಲಿಂ- 18,000, ಕುರುಬರು- 15,000, ಬ್ರಾಹ್ಮಣರು- 3,000, ಬಲಿಜ- 4,000 ಇದ್ದಾರೆ.