ರಾಯಚೂರು: ಬಿಜೆಪಿಯ (BJP) ಕೆಲವು ಮುಖಂಡರು ಪಕ್ಷ ತೊರೆಯುತ್ತಿರುವುದರಿಂದ ಪಕ್ಷಕ್ಕೆ ಡ್ಯಾಮೇಜ್ (Damage) ಆಗುತ್ತದೆ ಎನ್ನುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೂ ಬಿಜೆಪಿ ಬಹುಮತದೊಂದಿಗೆ ಅಧಿಕಾರ ರಚಿಸಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.
ರಾಯಚೂರಿನಲ್ಲಿ (Raichur) ಆಯೋಜಿಸಿದ್ದ ಪರಿಶಿಷ್ಟ ಸಮುದಾಯಗಳ ಅಭಿನಂದನಾ ಸಮಾವೇಶಕ್ಕೆ ಆಗಮಿಸಿದ್ದ ವೇಳೆ ಮಾತನಾಡಿದ ಅವರು, ಪಕ್ಷ ಬಲಿಷ್ಠ ಆಗಿರುವುದರಿಂದ ಅವರ ಸ್ಥಾನ ತುಂಬಲು ಪ್ರಯತ್ನಿಸುತ್ತೇನೆ. ಜನ ಬೆಂಬಲ, ಕಾರ್ಯಕರ್ತರಿಂದ ಪಕ್ಷ ಕಟ್ಟಿದ್ದೇವೆ. ಕೆಲವು ಬದಲಾವಣೆ ಮೂಲಕ ಮುಂದಿನ ಪೀಳಿಗೆಗೆ ಅನುಕೂಲ ಮಾಡಲು ಈ ಬದಲಾವಣೆ ಮಾಡಲಾಗುತ್ತಿದೆ. ಕಾಂಗ್ರೆಸ್‌ನಲ್ಲಿ (Congress) ಬದಲಾವಣೆ ಮಾಡಿಲ್ಲ. ಅಲ್ಲಿ ಜಡತ್ವವಿದೆ. ಅಲ್ಲಿ ಎಷ್ಟೇ ವಯಸ್ಸಾದರೂ ಬೇಡ ಎನ್ನುವುದಿಲ್ಲ. ಖುದ್ದು ಆಕಾಂಕ್ಷಿ ಹೇಳುವವರೆಗೂ ಅದು ನಡೆಯುತ್ತದೆ ಎಂದರು. ಇದನ್ನೂ ಓದಿ: ರಾಜ್ಯ ಸರ್ಕಾರ ಜನರ ಹಣ ಕದ್ದಿದೆ: ರಾಗಾ ಆರೋಪ
Advertisement
Advertisement
ಬಿಎಸ್‌ವೈ, ಹಾಲಾಡಿ, ಆನಂದ್ ಸಿಂಗ್ ಸೇರಿ ಹಲವರು ಸ್ಥಾನ ಬಿಟ್ಟುಕೊಟ್ಟಿದ್ದಾರೆ. ಪಕ್ಷ ಬಲಿಷ್ಠ ಆಗಿರುವುದರಿಂದ ಅವರ ಸ್ಥಾನ ತುಂಬಲು ಪ್ರಯತ್ನಿಸುತ್ತೇವೆ. ನಮ್ಮ ಪಕ್ಷದಲ್ಲಿ ಮೂವತ್ತು ವರ್ಷದ ಅನುಭವದ ಪ್ರಶ್ನೆಯೇ ಇಲ್ಲ. ಮೊಟ್ಟ ಮೊದಲು ನಮ್ಮ ನಾಯಕ ಬಿಎಸ್‌ವೈ (B.S.Yediyurappa) ಸರ್ವೋಚ್ಛ ನಾಯಕರು. ಎರಡನೇ ಹಂತದ ನಾಯಕರಿದ್ದಾರೆ. ನಿರಾಣಿ, ಸಿಸಿ ಪಾಟೀಲ್, ಸೋಮಣ್ಣ ಇದ್ದಾರೆ. ಇದೇ ರೀತಿ ಸಪೋರ್ಟ್ ಸಿಸ್ಟಮ್ ಮುಂದುವರೆಯುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಪ್ರಚಾರದ ನೆಪದಲ್ಲಿ ಮಹಿಳೆಯರನ್ನ ಮಂಚಕ್ಕೆ ಕರೆದ ಆರೋಪ – JDS ಅಭ್ಯರ್ಥಿ ವಿರುದ್ಧ ಕ್ರಮಕ್ಕೆ ಆಗ್ರಹ
Advertisement
Advertisement
ಮುಂದೆ ನೀವು ಟಾರ್ಗೆಟ್ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬದಲಾವಣೆ ಸಂದರ್ಭದಲ್ಲಿ ಇದೆಲ್ಲಾ ಸಹಜ. ಕಾಂಗ್ರೆಸ್ ಖಾಲಿ ಮನೆಯಿತ್ತು, ಹೀಗಾಗಿ ತುಂಬಿಕೊಳ್ಳುತ್ತಿದ್ದಾರೆ. ಹೆಚ್ಚಿನ ಸ್ಥಾನಮಾನ ಕೊಡುತ್ತೇವೆ, ನೀವು ಹೇಳಿದವರಿಗೆ ಟಿಕೆಟ್ ಕೊಡುತ್ತೇವೆ ಎಂದು ಹೇಳಿದ್ದೆವು. ಮುಂಚಿತವಾಗಿ ಹೇಳಲಿಲ್ಲ ಎನ್ನುವ ವಿಚಾರ ಮುಂದಿಟ್ಟು ಪಕ್ಷ ಬಿಡುತ್ತಿದ್ದಾರೆ. ಮತ್ತೆ ಪಕ್ಷವನ್ನು ಗಟ್ಟಿಗೊಳಿಸುತ್ತೇವೆ. ಬಿಜೆಪಿಗೆ ಕಂಫರ್ಟಬಲ್ ಮೆಜಾರಿಟಿ ಬಂದೇ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಈ ಬಾರಿ ಕಾಂಗ್ರೆಸ್ 150 ಸ್ಥಾನ ಗೆಲ್ಲುತ್ತೆ: ರಾಹುಲ್ ಗಾಂಧಿ