ಗುಜರಾತ್‌ನಲ್ಲಿ ಯಶಸ್ವಿಯಾಗಿದ್ದೇವೆ, ಯಾವ ಬಂಡಾಯಕ್ಕೆ ಹೆದರಬೇಡಿ – ಬೊಮ್ಮಾಯಿಗೆ ಹೈಕಮಾಂಡ್‌ ಭರವಸೆ

Public TV
1 Min Read
BJP Meting modi nadda amit shah yediyurappa bl santosh

ಬೆಂಗಳೂರು: “ಬಂಡಾಯಕ್ಕೆ ಬೆದರಬೇಡಿ, ಅತೃಪ್ತರನ್ನು ನಾವು ನೋಡಿಕೊಳ್ಳುತ್ತೇವೆ”- ಇದು ಬಿಜೆಪಿ ಹೈಕಮಾಂಡ್‌ (BJP High Command) ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ನೀಡಿದ ಭರವಸೆ.

ಕರ್ನಾಟಕ ಚುನಾವಣೆ (Karnataka Election) ಅಭ್ಯರ್ಥಿಗಳ ಪಟ್ಟಿ ಸಂಬಂಧ ಮಂಗಳವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ನಿವಾಸದಲ್ಲಿ ನಡೆದಿತ್ತು. ಈ ವೇಳೆ ಪ್ರಮುಖ ನಾಯಕರನ್ನು ಕೈ ಬಿಡುವ ಪ್ರಸ್ತಾಪ ಬಂದಾಗ ಬೊಮ್ಮಾಯಿ (Basavaraj Bommai) ಬಂಡಾಯದ ಆತಂಕ ವ್ಯಕ್ತಪಡಿಸಿದ್ದರು.

ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿಯ ಸಹ ಉಸ್ತುವಾರಿ ಮನ್ಸುಖ್ ಮಾಂಡವೀಯ, ಬಂಡಾಯವನ್ನು ನಾವು ನೋಡಿಕೊಳ್ಳುತ್ತೇವೆ. ಗುಜರಾತ್‌ನಲ್ಲಿ (Gujarat Election) ನಾವು ಈ ಸನ್ನಿವೇಶ ಎದುರಿಸಿಯೂ ಯಶಸ್ವಿಯಾಗಿದ್ದೇವೆ. ಕರ್ನಾಟಕದಲ್ಲೂ ಇದನ್ನು ನಿಭಾಯಿಸೋಣ ಎಂದಿದ್ದಾರೆ. ಇದನ್ನೂ ಓದಿ: ಕನಕಪುರದಲ್ಲಿ ಮೋದಿ, ಶಾ ಆಟ ನಡೆಯೋದಿಲ್ಲ: ಡಿಕೆ ಸುರೇಶ್

BJP meeting

ಮಾಂಡವೀಯ ಮಾತನ್ನು ಜೆ.ಪಿ‌ ನಡ್ಡಾ ಬೆಂಬಲಿಸಿದ್ದಾರೆ. ಪ್ರಮುಖ ನಾಯಕರನ್ನು ನಾವು ನಿಭಾಯಿಸುತ್ತೇವೆ. ಉಳಿದವರನ್ನು ನೀವು ನೋಡಿಕೊಳ್ಳಿ. ಪ್ರಮುಖ ನಾಯಕರು ಸುಮ್ಮನಾದರೆ ಉಳಿದವರು ಸುಮ್ಮನಾಗುತ್ತಾರೆ ಎಂದು ಹೈಕಮಾಂಡ್ ನಾಯಕರು ಸಿಎಂಗೆ ಹೇಳಿದ್ದಾರೆ.

ಗುಜರಾತ್‌ನಲ್ಲಿ ಮಾಡಿದ್ದೇನು?
ಗುಜರಾತಿನಲ್ಲಿ ಸತತ ಏಳನೇ ಅವಧಿಗೆ ಅಧಿಕಾರ ನಡೆಸಲು ಮುಂದಾಗಿದ್ದ ಬಿಜೆಪಿ ಸಮೀಕ್ಷೆಯಲ್ಲಿ ವಿರೋಧದ ಅಲೆ ಕಾಣಿಸಿಕೊಂಡ 42 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿತ್ತು. ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಮತ್ತು ಮಾಜಿ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಅವರಿಗೂ ಟಿಕೆಟ್ ನೀಡಿರಲಿಲ್ಲ.

 

ಪಕ್ಷದಿಂದ ಟಿಕೆಟ್ ನೀಡದಿದ್ದಕ್ಕೆ ಏಳು ಮಂದಿ ನಾಯಕರು ಬಂಡಾಯವೆದ್ದು ಸ್ವತಂತ್ರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದರು. ಈ ಏಳು ಮಂದಿಯನ್ನು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಕ್ಕಾಗಿ ಆರು ವರ್ಷಗಳ ಕಾಲ ಅಮಾನತು ಮಾಡಲಾಗಿತ್ತು.

ಡಿಸೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಒಟ್ಟು 182 ಸ್ಥಾನಗಳ ಪೈಕಿ ಬಿಜೆಪಿ 156, ಕಾಂಗ್ರೆಸ್‌ 17, ಆಪ್‌ 5 ಸ್ಥಾನಗಳನ್ನು ಗೆಲ್ಲುವ ಮೂಲಕ ದಾಖಲೆ ಬರೆದಿತ್ತು.

Share This Article