ಬೆಂಗಳೂರು: ನಾವು ಮ್ಯಾಚ್ ಆಡೋದಕ್ಕೆ ಬಂದಿದ್ದೇವೆ, ಆಡಿ ಗೆಲ್ತೀವಿ ಎಂದು ಸಚಿವ ಆರ್ ಅಶೋಕ್ (R Ashok) ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅಶೋಕ್, ಕೆಲವೇ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಿಜೆಪಿ (BJP) ಗೆದ್ದಿದೆ. ಅದೇ ನಿಜವಾಗೋದು. ಈ ಬಾರಿ ಬಿಜೆಪಿಗೇ ಬಹುಮತ, ಬಿಜೆಪಿಯದ್ದೇ ಸರ್ಕಾರ ಬರುತ್ತದೆ. ಎಕ್ಸಿಟ್ ಪೋಲ್‌ಗಳೆಲ್ಲ ಸುಳ್ಳು ಅಂತ ಹೇಳಲ್ಲ. ಆದರೆ ಯಾವುದೇ ಪಕ್ಷಕ್ಕೂ ಬಹುಮತ ಸಿಕ್ಕಿಲ್ಲ. ಇದು ಎಕ್ಸಿಟ್ ಪೋಲ್‌ಗಳೆಲ್ಲದರ ಸಾರ ಎಂದು ಹೇಳಿದ್ದಾರೆ.
ನಾವು ಮ್ಯಾಚ್ ಆಡೋದಕ್ಕೆ ಬಂದಿದ್ದೇವೆ, ಆಡಿ ಗೆಲ್ತೀವಿ. ಕಳೆದ ಬಾರಿ ಮೈತ್ರಿ ಸರ್ಕಾರ ಬಂತು. ನಂತರ ಅದು ಬಿದ್ದು ಹೋಯ್ತು. ಕಳೆದ 4 ವರ್ಷದಿಂದ ಸ್ಥಿರ ಸರ್ಕಾರ ಕೊಟ್ಟಿದ್ದು ಬಿಜೆಪಿ. ನಾವು ಯಾರ ಜತೆಗೂ ಹೊಂದಾಣಿಕೆ ಮಾಡಿಕೊಳ್ಳಲ್ಲ. ರಿಸಲ್ಟ್ ಬರಲಿ, ರಿಸಲ್ಟ್ ಬಂದ ಮೇಲೆ ಹೈಕಮಾಂಡ್ ನಾಯಕರ ಸೂಚನೆಯಂತೆ ನಡೆದುಕೊಳ್ತೇವೆ ಎಂದು ತಿಳಿಸಿದರು.
ಜೆಡಿಎಸ್ ಜೊತೆಗೆ ಹೊಂದಾಣಿಕೆಯ ಪ್ರಮೇಯ ಬರೋದೇ ಇಲ್ಲ. ರಿಸಲ್ಟ್ ಬಂದ ಮೇಲೆ ತಂತ್ರಗಾರಿಕೆ ಇದ್ದೇ ಇರುತ್ತದೆ. ನಮಗೆ ವಿಶ್ವಾಸ ಇದೆ. ನಾವೇ ಸರ್ಕಾರ ಮಾಡುತ್ತೇವೆ. ನಮ್ಮ ಕಾರ್ಯಕರ್ತರು, ಜನರ ಮೇಲೆ ನಂಬಿಕೆ ಇದೆ. ನಾವೇ ಸಿಂಗಲ್, ಲಾರ್ಜೆಸ್ಟ್ ಪಕ್ಷ ಆಗಿ ಗೆದ್ದು ಬಂದರೂ ಸರ್ಕಾರ ರಚಿಸುವ ನೈತಿಕತೆ ಬಿಜೆಪಿಗೆ ಇದೆ ಎಂದರು.
ಬಿಜೆಪಿ ಗೆಲ್ಲದಿದ್ದರೆ ಯಡಿಯೂರಪ್ಪ ಫ್ಯಾಕ್ಟರ್ ಕಾರಣ ಆಗಲ್ಲ. ಬಿಜೆಪಿ ಮೂಲತಃ ಕಾರ್ಯಕರ್ತರ ಪಕ್ಷ. ನಾಯಕರ ಆಧಾರಿತ ಪಕ್ಷ ಅಲ್ಲ. ನಮ್ಮ ಪಕ್ಷದಲ್ಲಿ ಕುಟುಂಬ, ಜಾತಿ ರಾಜಕಾರಣ ಇಲ್ಲ. ರಾಜ್ಯಕ್ಕೆ ಯಾರು ಒಳ್ಳೆಯದು ಅಂತ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ರಾಜ್ಯಕ್ಕೆ ಯಾರು ಸೂಕ್ತ ಅವರೇ ಸಿಎಂ ಆಗುತ್ತಾರೆ. ಬೊಮ್ಮಾಯಿ ಅವರೇ ಮುಂದುವರಿಯಬಹುದು ಅಥವಾ ಮುಂದುವರಿಯದಿರಲೂ ಬಹುದು. ಹೈಕಮಾಂಡ್ ನಾಯಕರು ಇದರ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ತಂದೆ-ತಾಯಿ, ಹೆಂಡತಿ, ಮಕ್ಕಳ ಜೊತೆ ಕಾಲ ಕಳೆಯಿರಿ: ಕಾರ್ಯಕರ್ತರಿಗೆ ಸಿದ್ದರಾಮಯ್ಯ ಸಲಹೆ
ಕನಕಪುರ ಪ್ರಚಾರಕ್ಕೆ ವರಿಷ್ಠರು ಬರದಿರುವ ವಿಚಾರವಾಗಿ ಮಾತನಾಡಿದ ಅಶೋಕ್, ಮಣಿಪುರ ರಾಜ್ಯದಲ್ಲಿ ಗಲಾಟೆ ಆದ ಹಿನ್ನೆಲೆ ಕನಕಪುರಕ್ಕೆ ಅಮಿತ್ ಶಾ ಬರಲಿಲ್ಲ. ಸಿಎಂ ಅವರು ಕನಕಪುರ ಬಂದು ಪ್ರಚಾರ ಮಾಡಿದಾರೆ. ಡಿಕೆಶಿ ಅವರ ದುರಾಡಳಿತದ ಮಧ್ಯೆಯೂ ನಾವು ಮನೆ ಮನೆ ಮುಟ್ಟಿದ್ದೇವೆ. ಕನಕಪುರದಲ್ಲಿ ಕಾರ್ಯಕರ್ತರ ಸಮಸ್ಯೆ ಇದೆ. ಇಷ್ಟಿದ್ದರೂ ಅಲ್ಲಿ ಬಿಜೆಪಿ ಸ್ಥಾಪನೆ ಮಾಡಿದ್ದೇವೆ. ಕನಕಪುರದಲ್ಲೂ ಗೆಲ್ಲೋ ವಿಶ್ವಾಸ ಇದೆ ಎಂದು ಹೇಳಿದರು. ಇದನ್ನೂ ಓದಿ: ಸಿದ್ದರಾಮಯ್ಯ ನನಗಿಂತ ಗಟ್ಟಿ ಅಲ್ಲವೇ ಅಲ್ಲ: ಜಿಟಿಡಿ