ದಾವಣಗೆರೆ: ದಾವಣಗೆರೆಯ (Davanagere) ಬಹುತೇಕ ಕಡೆಗಳಲ್ಲಿ ಗುಡುಗು – ಮಿಂಚು ಸಹಿತ ತುಂತುರು ಮಳೆ (Rain) ಸುರಿದು ಮತದಾನ (Voting) ಪ್ರಕ್ರಿಯೆಗಳಿಗೆ ಸ್ವಲ್ಪ ಅಡಚಣೆ ಉಂಟಾಯಿತು.
ದಾವಣಗೆರೆಯಲ್ಲಿ ಬೆಳಗ್ಗೆಯಿಂದ ಬಿಸಿಲಿದ್ದು, ಏಕಾಏಕಿ ಮಳೆ ಪ್ರಾರಂಭವಾಗಿದೆ. ಕಳೆದ 30 ನಿಮಿಷಗಳಿಂದ ನಿರಂತರ ಮಳೆ ಸುರಿಯುತ್ತಿದ್ದು, ತುಂತುರು ಮಳೆಯಿಂದ ಮತದಾನ ಮಾಡಲು ತೊಂದರೆಯಾಗುತ್ತಿದೆ. ಇದರ ಮಧ್ಯೆ ಜನರು ಮಳೆಯಲ್ಲಿಯೇ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡುತ್ತಿದ್ದಾರೆ. ಗುಡುಗು ಮಿಂಚು ಹೆಚ್ಚಾದ ಹಿನ್ನೆಲೆಯಲ್ಲಿ ಜನರು ಮನೆಯಿಂದ ಹೊರಬರುತ್ತಿಲ್ಲ. ಇದನ್ನೂ ಓದಿ: Karnataka Election 2023 | ಕರ್ನಾಟಕ ವಿಧಾನಸಭಾ ಚುನಾವಣೆಗೆ ಇಂದು ಮತದಾನ | Live Updates
Advertisement
Advertisement
ಇನ್ನೇನು ಮತದಾನ ಪ್ರಕ್ರಿಯೆಗಳು ಅಂತ್ಯಗೊಳ್ಳುವ ಸಮಯ ಸಮೀಪಿಸಿದ್ದು, ಮಳೆ ನಿಂತರೆ ಮತದಾನಕ್ಕೆ ಅನುಕೂಲವಾಗಲಿದೆ. ಒಂದು ವೇಳೆ ಮಳೆ ಹೆಚ್ಚಾದರೆ ಮತದಾನಕ್ಕೆ ಅಡ್ಡಿಯುಂಟಾಗುವ ಆತಂಕ ಹೆಚ್ಚಾಗಿದೆ. ಇದನ್ನೂ ಓದಿ: ಮತದಾನ ಕೇಂದ್ರದ ಆವರಣದಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ