ಬೆಂಗಳೂರು: ಈ ಬಾರಿ ಚುನಾವಣೆಯಲ್ಲಿ (Election) ಕಾಂಗ್ರೆಸ್ (Congress) ಅಧಿಕಾರಕ್ಕೆ ಬಂದಿದ್ದು, ಸಿಎಂ ಪಟ್ಟ ಯಾರಿಗೆ ಒಲಿಯುತ್ತದೆ ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಮೂಡಿದೆ. ಇದರ ಬೆನ್ನಲ್ಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D.K.Shivakumar) ಅವರ ನಿವಾಸಕ್ಕೆ ಕಾಲಜ್ಞಾನ ಗುರುಜಿ ಆಗಮಿಸಿ ಶುಭ ಹಾರೈಸಿದ್ದಾರೆ.
ಹಲವು ವರ್ಷಗಳಿಂದ ಡಿಕೆಶಿ ಅವರ ಭವಿಷ್ಯದ ಬಗ್ಗೆ ತಿಳಿಸುತ್ತಿದ್ದ ವಿಜಯ್‌ರಾಜ್ ಗುರೂಜಿ (Vijayraj Guruji) ಸೋಮವಾರ ಎಲೆಕ್ಟ್ರಾನಿಕ್ ಸಿಟಿಯಿಂದ ಡಿಕೆಶಿ ನಿವಾಸಕ್ಕೆ ಆಗಮಿಸಿದ್ದಾರೆ. ಮುಂಜಾನೆ 4:15ರ ಸುಮಾರಿಗೆ ಆಗಮಿಸಿದ ಅವರು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಡಿಕೆಶಿಗೆ ಶುಭ ಹಾರೈಸಿದ್ದಾರೆ. ಇದನ್ನೂ ಓದಿ: ಮುಂದಿನ ಸಿಎಂ ಯಾರು? – ರಾತ್ರಿ 1:30ರವರೆಗೆ ನಡೆದಿದ್ದು ಏನು?
Advertisement
Advertisement
ಕಾಲಜ್ಞಾನದ ಬಗ್ಗೆ ಪಾಂಡಿತ್ಯ ಪಡೆದಿರುವ ವಿಜಯ್‌ರಾಜ್ ಗುರೂಜಿ ಪ್ರಸ್ತುತ ಡಿಕೆಶಿಗೆ ಬುಧ ಮತ್ತು ಆದಿತ್ಯ ಪಂಚಮಯೋಗವಿದೆ ಎಂದು ತಿಳಿಸಿ ಅವರಿಗೆ ಹಾರ ಹಾಕಿ ಆಶಿರ್ವಾದ ಮಾಡಿ ಅಲ್ಲಿಂದ ತೆರಳಿದ್ದಾರೆ. ಇದನ್ನೂ ಓದಿ: ಬಿಜೆಪಿ ಸೋಲಿಗೆ ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ: ಜಿರಲಿ
Advertisement
Advertisement
ನಿಮ್ಮ ಜಾತಕದಲ್ಲಿ ಗುರುವಾರದ ದಿನ ತುಂಬಾ ಒಳ್ಳೆಯದಿದೆ. ಅಂದೇ ಶುಭ ಕೆಲಸ ಆರಂಭಿಸಿ ಎಂಬ ಸಲಹೆಯನ್ನು ಡಿಕೆಶಿಗೆ ನೀಡಿದ್ದಾರೆ ಎನ್ನಲಾಗುತ್ತಿದೆ. ಈ ಕಾರಣಕ್ಕೆ ಗುರುವಾರ ನೂತನ ಸಿಎಂ ಪ್ರಮಾಣವಚನ ಕಾರ್ಯಕ್ರಮ ನಡೆಯುತ್ತಾ ಎಂಬ ಪ್ರಶ್ನೆಗೆ ಇಂದು ಅಥವಾ ನಾಳೆ ಉತ್ತರ ಸಿಗುವ ಸಾಧ್ಯತೆಯಿದೆ. ಇದನ್ನೂ ಓದಿ: 42 ಕಡೆ 5 ಸಾವಿರಕ್ಕೂ ಕಡಿಮೆ ಅಂತರದ ಗೆಲುವು – 2023, 2018ರಲ್ಲಿ ಯಾರಿಗೆ ಎಷ್ಟು ಮತ?