ಬೆಂಗಳೂರು: ಚುನಾವಣಾ ದಿನಾಂಕ ಘೋಷಣೆಯಾದ ಬೆನ್ನಲ್ಲೇ ರಾಜ್ಯ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಅಂತೆಯೇ ಸಿದ್ದರಾಮಯ್ಯ (Siddaramaiah) ಸ್ಪರ್ಧಿಸುತ್ತಿರುವ ವರುಣಾ ಯುದ್ಧ ರಾಜ್ಯ ರಾಜಕೀಯದಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಹೌದು, ವರುಣಾದಲ್ಲಿ ಸಿದ್ದರಾಮಯ್ಯಗೆ ಎದುರಾಗಿ ವಿಜಯೇಂದ್ರ (B Y Vijayendra) ಸ್ಪರ್ಧೆ ಫಿಕ್ಸಾ ಎಂಬ ಪ್ರಶ್ನೆ ಎದ್ದಿದೆ. ಯಾಕಂದರೆ ವರುಣಾ ಕ್ಷೇತ್ರ (Varuna Constituency) ದಲ್ಲಿ ವಿಜಯೇಂದ್ರ ಸ್ಪರ್ಧೆ ಬಗ್ಗೆ ಹೈಕಮಾಂಡ್ ಮಟ್ಟದಲ್ಲೂ ಚರ್ಚೆಯಾಗುತ್ತಿದೆ. ಈ ಮೂಲಕ ಸಿದ್ದರಾಮಯ್ಯ ಕಟ್ಟಿ ಹಾಕಲು ವಿಜಯೇಂದ್ರ ಸ್ಪರ್ಧೆಯ ಅಸ್ತ್ರ ಬಿಡಲು ಬಿಜೆಪಿ ಪ್ಲಾನ್ ಮಾಡಲಾಗುತ್ತಿದೆ.
Advertisement
Advertisement
2018ರಲ್ಲಿ ವರುಣಾದಲ್ಲಿ ಹೈಕಮಾಂಡ್ ಟಿಕೆಟ್ ಮಿಸ್ ಮಾಡಿತ್ತು. ಆದರೆ 2023ರಲ್ಲಿ ವಿಜಯೇಂದ್ರ ಸ್ಪರ್ಧೆಗಿಳಿಸಲು ಬಿಜೆಪಿಯೇ ಆಸಕ್ತಿ ವಹಿಸಿದಂತಿದೆ. ಈಗಾಗಲೇ ಶಿಕಾರಿಪುರ (Shikaripura Constituency) ಸ್ಪರ್ಧೆಗೆ ತಯಾರಾಗ್ತಿರೋ ವಿಜಯೇಂದ್ರಗೆ ಪಕ್ಷದಿಂದ ವರುಣಾ ಆಫರ್ ಕೊಡಲಾಗುತ್ತಿದೆ. ಗುರುವಾರ ಆರ್ ಎಸ್‍ಎಸ್ ಮುಖಂಡರ ಜೊತೆಗೂ ವಿಜಯೇಂದ್ರ ಸೀಕ್ರೆಟ್ ಸಮಾಲೋಚನೆ ನಡೆಸಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: ಶ್ರೀರಾಮನ ತೊಡೆ ಮೇಲೆ ಏರಿ ಹೂಮಾಲೆ ಹಾಕಿ ಬಿಜೆಪಿ ಶಾಸಕ ಎಡವಟ್ಟು
Advertisement
Advertisement
ಮೊದಲು ಶಿಕಾರಿಪುರ ಫಿಕ್ಸ್ ಮಾಡುವಂತೆ ಹೈಕಮಾಂಡ್ ಬಳಿ ಯಡಿಯೂರಪ್ಪ (B S Yediyurappa) ಮನವಿ ಮಾಡಿದ್ದಾರೆ. ಈ ನಡುವೆ ವರುಣಾದಲ್ಲೂ ಸ್ಪರ್ಧೆಗೆ ವಿಜಯೇಂದ್ರ ರೆಡಿ ಎಂದು ಸಂದೇಶ ರವಾನಿಸಲಾಗಿದೆ. ಮುಂದಿನ ರಾಜಕೀಯ ಭವಿಷ್ಯ ಕಂಡುಕೊಳ್ಳಲು ಶಿಕಾರಿಪುರದಲ್ಲಿ ಸ್ಪರ್ಧಿಸಲಿ. ಸಿದ್ದರಾಮಯ್ಯ ಕಟ್ಟಿಹಾಕಲು ವರುಣಾದಲ್ಲೂ ಕಣಕ್ಕಿಳಿಯಲಿ ಎಂದು ಬಿಎಸ್‍ವೈ ವರಿಷ್ಠರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ವರುಣಾ ಜೊತೆಗೆ ಶಿಕಾರಿಪುರಕ್ಕೂ ಟಿಕೆಟ್ ಸಿಗುತ್ತಾ ಅಂತ ವರಿಷ್ಠರು ಸ್ಪಷ್ಟ ಪಡಿಸಬೇಕಿದೆ. ವರಿಷ್ಠರ ತೀರ್ಮಾನಕ್ಕಗಿ ಬಿಎಸ್‍ವೈ ಹಾಗೂ ವಿಜಯೇಂದ್ರ ಕಾದಿದ್ದಾರೆ. ಹಾಗಿದ್ರೆ ವಿಜಯೇಂದ್ರ ಸ್ಪರ್ಧೆ ಶಿಕಾರಿಪುರನಾ..? ವರುಣಾನಾ..? ಅಥವಾ ಎರಡೂ ಕ್ಷೇತ್ರದಿಂದನಾ..? ಎಂದು ಕುತೂಹಲ ಮೂಡಿದೆ.