ವಿಜಯಪುರ: ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ವಿಜಯಪುರ ಜಿಲ್ಲೆಯ 8 ಕ್ಷೇತ್ರಗಳಲ್ಲಿ ಕಾಂಗ್ರೆಸ್ 6 ಸ್ಥಾನಗಳನ್ನು ಗೆದ್ದುಕೊಂಡಿದೆ. ಬಿಜೆಪಿ ಹಾಗೂ ಜೆಡಿಎಸ್ ಒಂದೊಂದು ಸ್ಥಾನಗಳನ್ನು ಪಡೆದುಕೊಂಡಿದೆ.
ವಿಜಯಪುರ ನಗರ: ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಗೆಲುವಾಗಿದೆ. ಕಾಂಗ್ರೆಸ್‌ನ ಹಮೀದ್ ಮುಶ್ರೀಫ್ ಹಾಗೂ ಜೆಡಿಎಸ್‌ನ ಬಂದೇನವಾಜ್ ಹುಸೇನಸಾಬ್ ಮಹಾಬರಿ ಅವರಿಗೆ ಸೋಲಾಗಿದೆ.
Advertisement
ಇಂಡಿ: ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಶವಂತರಾಯಗೌಡಾ ಪಾಟೀಲ್ ಅವರಿಗೆ ಗೆಲುವಾಗಿದ್ದು, ಜೆಡಿಎಸ್‌ನ ಬಿಡಿ ಪಾಟೀಲ್ ಹಾಗೂ ಬಿಜೆಪಿಯ ಕಾಸಗೌಡ ಬಿರಾದಾರಗೆ ಸೋಲಾಗಿದೆ.
Advertisement
Advertisement
ನಾಗಠಾಣ: ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಠ್ಠಲ್ ಕಟಕಧೋಂಡ ಅವರಿಗೆ ಗೆಲುವಾಗಿದೆ. ಬಿಜೆಪಿಯ ಸಂಜೀವ ಐಹೂಳೆ ಹಾಗೂ ಜೆಡಿಎಸ್‌ನ ದೇವಾನಂದ ಚವ್ಹಾಣ್‌ಗೆ ಸೋಲಾಗಿದೆ.
Advertisement
ಸಿಂದಗಿ: ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ ಅವರಿಗೆ ಗೆಲುವಾಗಿದ್ದು, ಬಿಜೆಪಿಯ ರಮೇಶ್ ಭೂಸನೂರ್ ಹಾಗೂ ಜೆಡಿಎಸ್‌ನ ವಿಶಾಲಾಕ್ಷಿ ಪಾಟೀಲ್‌ಗೆ ಸೋಲಾಗಿದೆ.
ದೇವರಹಿಪ್ಪರಗಿ: ಜೆಡಿಎಸ್ ಅಭ್ಯರ್ಥಿ ರಾಜುಗೌಡ ಪಾಟೀಲ್ ಅವರಿಗೆ ಗೆಲುವಾಗಿದ್ದು, ಬಿಜೆಪಿಯ ಸೋಮನಗೌಡ ಪಾಟೀಲ್ ಸಾಸನೂರ್ ಹಾಗೂ ಕಾಂಗ್ರೆಸ್‌ನ ಶರಣಪ್ಪ ಸಿ ಸುಣಗಾರ್ ಸೋತಿದ್ದಾರೆ. ಇದನ್ನೂ ಓದಿ: ರಾಮನಗರದಲ್ಲಿ ಜೆಡಿಎಸ್‍ಗೆ ಶಾಕ್ – 3 ಕ್ಷೇತ್ರಗಳಲ್ಲಿ ಕಾಂಗ್ರೆಸ್‍ಗೆ ಗೆಲುವು
ಮುದ್ದೇಬಿಹಾಳ: ಕಾಂಗ್ರೆಸ್‌ನ ಅಪ್ಪಾಜಿ ನಾಡಗೌಡ ಮುದ್ದೇಬಿಹಾಳ ಕ್ಷೇತ್ರದಲ್ಲಿ ಗೆದ್ದಿದ್ದಾರೆ. ಬಿಜೆಪಿಯ ಎಎಸ್ ಪಾಟೀಲ್ ನಡಹಳ್ಳಿ ಹಾಗೂ ಜೆಡಿಎಸ್‌ನ ಬಸವರಾಜ್ ಭಜಂತ್ರಿ ಸೋತಿದ್ದಾರೆ.
ಬಸವನಬಾಗೇವಾಡಿ: ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ್ ಪಾಟೀಲ್ ಬಸವನಬಾಗೇವಾಡಿ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಕಂಡಿದ್ದಾರೆ. ಜೆಡಿಎಸ್‌ನ ಸೋಮನಗೌಡ ಪಾಟೀಲ್ ಹಾಗೂ ಬಿಜೆಪಿಯ ಎಸ್‌ಕೆ ಬೆಳ್ಳುಬ್ಬಿ ಅವರಿಗೆ ಸೋಲಾಗಿದೆ.
ಬಬಲೇಶ್ವರ: ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎಂಬಿ ಪಾಟೀಲ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ವಿಜಯಕುಮಾರ್ ಪಾಟೀಲ್ ಹಾಗೂ ಜೆಡಿಎಸ್‌ನ ಬಸವರಾಜ್ ಹೊನವಾಡ ಎಂಬಿ ಪಾಟೀಲ್ ವಿರುದ್ಧ ಸೋಲುಂಡಿದ್ದಾರೆ. ಇದನ್ನೂ ಓದಿ: Karnataka Election 2023 Result – ಕಾಂಗ್ರೆಸ್ 136, ಬಿಜೆಪಿ 65, ಜೆಡಿಎಸ್ 19 ಮುನ್ನಡೆ LIVE Updates